ಮೂಡಿಗೆರೆ: ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ (೮೭) ಅವರು ಮಂಗಳವಾರ ಮುಂಜಾನೆ ೧೨.೩೦ ಗಂಟೆಗೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಾಲೂಕಿನಾಧ್ಯಂತ ಡಿಬಿಸಿ ಬಂದು ಮಿತ್ರರು, ಎಲ್ಲಾ ಪಕ್ಷ, ವಿವಿಧ ಸಂಘಟನೆ ಮುಖಂಡರು ಡಿಬಿಸಿ ಅವರ ಮನೆ ಮುಂದೆ ಜಮಾಯಿಸಿ ಅಂತಿಮ ದರ್ಶನ ಪಡೆದರು. ಈ ವೇಳೆ ಮಾಜಿ ಸಚಿವೆ ಮೋಟಮ್ಮ, ಶಾಸಕಿ ನಯನಾ ಮೋಟಮ್ಮ, ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಡಿಬಿಸಿ ಅವರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಂತ್ವಾನ ಹೇಳಿದರು.

ಮಧ್ಯಾಹ ೨ರಿಂದ ಸಂಜೆ ೬ಗಂಟೆವರೆಗೆ ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಡಿಬಿಸಿ ಅವರ ಪಾರ್ಥೀವ ಶರೀರ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಬಿಜೆಪಿಯ ಭಾವುಟವನ್ನು ಶಪ ಪೆಟ್ಟಿಗೆ ಮೇಲೆ ಹಾಕುವ ಮೂಲಕ ಡಿಬಿಸಿ ಅವರಿಗೆ ನಮನ ಸಲ್ಲಿಸಿದರು. ನಂತರ ಆಗಮಿಸಿದ ಮಾಜಿ ಸಭಾಪತಿ ರಮೇಶ್‌ಕುಮಾರ್ ಅವರು ಕೆಲ ಹೊತ್ತು ಡಿಬಿಸಿ ಅವರ ಪ್ರಾರ್ಥೀವ ಶರೀರ ವೀಕ್ಷಿಸುತ್ತಾ ಕಣ್ಣೀರಿಟ್ಟರು. ಉಳಿದಂತೆ ಕೇಂದ್ರದ ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಡಿ.ಕೆ.ತಾರಾದೇವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಮುಖ್ಯಮಂತ್ರಿ ಚಂದ್ರು, ಮಾಜಿ ಸಂಸದ ಜಯಪ್ರಕಾಶ್‌ಹೆಗಡೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಹಾಗೂ ಸಾರ್ವಜನಿಕರು ಡಿಬಿಸಿ ಅವರ ಅಂತಿಮ ದರ್ಶನ ಪಡೆದರು.

ಡಿಬಿಸಿ ಅವರ ಪತ್ನಿ ಪೂರ್ಣಿಮಾ, ನಾಲ್ವರ ಪುತ್ರಿಯರ ಪೈಕಿ ಮೂವರು ಪುತ್ರಿಯರಾದ ಪಲ್ಲವಿ, ವೀಣಾ, ಶೃತಿ ಹಾಗೂ ಬಂದು ಮಿತ್ರರು ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದು, ಇನ್ನೋರ್ವ ಪುತ್ರಿ ಸಂಗೀತ ಅಮೇರಿಕಾದಿಂದ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಡಿಬಿಸಿ ಅಂತ್ಯ ಸಂಸ್ಕಾರವನ್ನು ಬುಧವಾರ ಮಧ್ಯಾಹ್ನ ೧೨ಗಂಟೆಗೆ ದಾರದಹಳ್ಳಿಯ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ನೆರವೇರಲಿದೆ.

A huge crowd for the last darshan of former minister DB Chandra Gowda