ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ( Ashleigh Barty) ಅವರು ಟೆನಿಸ್‌ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ 25ನೇ ವಯಸ್ಸಿನಲ್ಲೇ ಆಶ್ಲೆ ಅವರು ನಿವೃತ್ತಿ ಘೋಷಿಸಿರುವುದಕ್ಕೆ ಟೆನಿಸ್‌ ಲೋಕ ಬೆರಗುಗೊಂಡಿದೆ. ನಿವೃತ್ತಿ ಕುರಿತು ಇಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಅವರು ‘ಇದೊಂದು ಕಣ್ಣೀರಿನ ವಿದಾಯ’ ಎಂದು ಹೇಳಿಕೊಂಡಿದ್ದಾರೆ.

ಆದರೆ, ನಿವೃತ್ತಿಗೆ ನಿಖರ ಕಾರಣ ತಿಳಿಸಿಲ್ಲ. ತಮ್ಮ ಆಪ್ತ ಸ್ನೇಹಿತೆ ಡಬಲ್ಸ್ ಪಾಲುದಾರೆ ಕೇಸಿ ಡೆಲಕ್ವಾ ಅವರೊಂದಿಗಿನ ವಿಡಿಯೊ ಸಂದೇಶದಲ್ಲಿ ಮಾತನಾಡಿರುವ ಬಾರ್ಟಿ, ‘ನಾನು ನನ್ನ ಟೆನಿಸ್‌ ಜೀವನದಿಂದ ತುಂಬಾ ಸಂತೋಷವಾಗಿದ್ದೇನೆ. ಟೆನಿಸ್ ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಆದರೆ, ಅದರಿಂದ ದೂರ ಸರಿಯಲು ಮತ್ತು ಇತರ ಕನಸುಗಳನ್ನು ಬೆನ್ನಟ್ಟಲು ಇದು ಸರಿಯಾದ ಸಮಯ ಎಂದು ನನಗೆ ತಿಳಿದಿದೆ’ ಎಂದಿದ್ದಾರೆ.

ಎರಡು ಬಾರಿ ವಿಶ್ವದ ನಂಬರ್ 1 ಆಟಗಾರ್ತಿಯಾಗಿದ್ದ ಆಸ್ಟ್ರೇಲಿಯಾ ಮೂಲದ ಬಾರ್ಟಿ ಅವರು, ಮೂರು ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. 2019 ರಲ್ಲಿ ಫ್ರೆಂಚ್ ಓಪನ್, 2021 ರಲ್ಲಿ ವಿಂಬಲ್ಡನ್ ಮತ್ತು 2022 ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಬಾರ್ಟಿ ಕಳೆದ ವರ್ಷದ ಕೊನೆಯಲ್ಲಿ ಅವರ ದೀರ್ಘಕಾಲೀನ ಗೆಳೆಯ ಗ್ಯಾರಿ ಕಿಸ್ಸಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Ashleigh Barty

ಇದನ್ನೂ ಓದಿ: Shaheed Diwas: ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ನೇಣಿಗೇರಿದ ದಿನ

ಇದನ್ನೂ ಓದಿ: Shahid Diwas: ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ಬಿಪ್ಲೋಬಿ ಭಾರತ್ ಗ್ಯಾಲರಿ ಇಂದು ಉದ್ಘಾಟನೆ