ನವದೆಹಲಿ: ರಾಷ್ಟ್ರ ರಾಜಧಾನಿ ಜಾಮಾ ಮಸೀದಿಯಲ್ಲಿ ಮಹಿಳೆಯರ ಪ್ರವೇಶ  ನಿರ್ಬಂಧಿಸುವ ಆದೇಶವನ್ನು ರದ್ದುಪಡಿಸಲಾಗಿದೆ.  ದೆಹಲಿ ಲೆಫ್ಟಿನೆಂಟ್ ಜನರಲ್ ಕೆ ಸಕ್ಸೇನಾ ಅವರೊಂದಿಗೆ ಮಾತನಾಡಿದ ನಂತರ ಈ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಮಸೀದಿಯ ಪಾವಿತ್ರ್ಯತೆಯನ್ನು ಗೌರವಿಸುವ ಮತ್ತು  ಷರತ್ತಿನ ಮೇಲೆ ಜಾಮಾ ಮಸೀದಿಯ  ಶಾಹಿ ಇಮಾಮ್ ಬುಖಾರಿ ಆದೇಶವನ್ನು ಹಿಂಪಡೆಯಲು ಒಪ್ಪಿಕೊಂಡರು ಎಂದು ಮೂಲಗಳು ಹೇಳಿವೆ.ಗುಂಪಾಗಿ ಅಥವಾ ಏಕಾಂಗಿಯಾಗಿ ಬರುವ ಹೆಣ್ಣು ಮಕ್ಕಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಾಮಾ ಮಸೀದಿಯ ಗೇಟ್ ಗಳ ಹೊರಗೆ ಆಡಳಿತ ಮಂಡಳಿಯಿಂದ ನಾಮಫಲಕ ಹಾಕಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

ಮಹಿಳಾ ಹಕ್ಕುಗಳ ಕಾರ್ಯಕರ್ತರು ಮಸೀದಿಯ ನಿರ್ಧಾರ ಸ್ವೀಕಾರಾರ್ಹವಲ್ಲ ಎಂದು ಬಣ್ಣಿಸಿದ್ದರಿಂದ ಈ ವಿಷಯವು ಕೆಲವು ಭಾಗಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಮಹಿಳಾ ಆಯೋಗ ಮಸೀದಿ ಆಡಳಿತ ಮಂಡಳಿಗೆ ನೋಟಿಸ್ ನೀಡಿತ್ತು. ಇದರಿಂದ ಎಚ್ಚೆತುಕೊಂಡ ಮಸೀದಿ ಆಡಳಿತ ಮಂಡಳಿ ವಿವಾದಾತ್ಮಾಕ ನಾಮಫಲಕವನ್ನು ತೆರವುಗೊಳಿಸಿದೆ.

Ban on entry of women revoked