ಮುಂಬೈ: ಖ್ಯಾತ ಸಂಗೀತ ನಿರ್ದೇಶಕ, ಹಿನ್ನಲೆ ಗಾಯಕ ಬಪ್ಪಿ ಲಹಿರಿ ಮುಂಬೈನ ಕ್ರಿಟಿ ಕೇರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಪ್ಪಿ ಲಹಿರಿ ನಿದ್ದೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರು.

ಲಹಿರಿ ಅವರು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಗ್ಯ ಸುಧಾರಿಸಿದ ಕಾರಣ ಸೋಮವಾರ ಮನೆಗೆ ತೆರಳಿದ್ದರು. ಮನೆಯಲ್ಲಿದ್ದ ವೇಳೆ ಮತ್ತೆ ಅವರ ಆರೋಗ್ಯ ಹದಗೆಟ್ಟಿದೆ. ಬಹು ಆರೋಗ್ಯ ಸಮಸ್ಯೆ ಅವರಿಗಿತ್ತು. ನಿದ್ದೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆಯಿಂದ ನಿಧನರಾಗಿದ್ದಾರೆ ಎಂದು ಕ್ರಿಟಿ ಕೇರ್ ವೈದ್ಯ ದೀಪಕ್ ನಮ್‌ಜೋಶಿ ಹೇಳಿದ್ದಾರೆ.

ತಮ್ಮ ವಿಭಿನ್ನವಾದ ಹಾಡುಗಳಿಂದ ಬಪ್ಪಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. 80-90 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಡಿಸ್ಕೋ ಮ್ಯೂಸಿಕ್ ಜನಪ್ರಿಯಗೊಳಿಸಿದ್ದ ಬಪ್ಪಿ ಅವರ ಡಿಸ್ಕೋ ಡ್ಯಾನ್ಸರ್, ರಾತ್ ಬಾಕಿ, ಬಂಬಾಯ್ ಸೆ ಆಯಾ ಮೇರಾ ದೋಸ್, ಚಲ್ತೆ ಚಲ್ತೆ ಹಾಗೂ ಶರಾಬಿ ಹಾಡುಗಳು ಚಿರಪರಿಚಿತ. ಬಪ್ಪಿ ಲಹಿರಿ ನಿಧನಕ್ಕೆ ಬಾಲಿವುಡ್ ಸಂತಾಪ ಸೂಚಿಸಿದ್ದು, ಸಂಗೀತ ಲೋಕಕ್ಕೆ ಇಂದು ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

(Bappi Lahiri)