ಉತ್ತರ ಭಾರತದಾದ್ಯಂತ ಸಹೋದರ – ಸಹೋದರಿಯರ ಪವಿತ್ರ ಹಬ್ಬ ಭಾಯ್ ದೂಜ್ ( Bhai Dooj 2022 ) ಹಬ್ಬವನ್ನು ಆಚರಿಸಲಾಗುತ್ತಿದೆ. ಭಾಯ್ ದೂಜ್’ ಅಥವಾ ‘ಯಮ ದ್ವಿತೀಯ’ ಎಂದು ಕರೆಯಲ್ಪಡುವ ಈ ಹಬ್ಬವನ್ನು ಪ್ರತಿ ವರ್ಷ ಸಹೋದರ-ಸಹೋದರಿಯರು ಒಟ್ಟಿಗೆ ಆಚರಿಸುತ್ತಾರೆ.

ಭಾಯ್ ದೂಜ್ ( Bhai Dooj 2022 ) ಹಬ್ಬವನ್ನು  ಭಾಯ್ ಬೀಜ್ ಅಥವಾ ಭಾಯ್ ಠೀಕ/ತಿಲಕ್ ಅಥವಾ ಭಾಯ್ ಫ಼ೋಟಾ (ಬೆಂಗಾಲಿಯಲ್ಲಿ) ಎಂದೂ ಕರೆಯುತ್ತಾರೆ. ಈ ಪವಿತ್ರ ದಿನದಂದು ಸಹೋದರಿಯರು ಪೂಜೆ, ಉಪವಾಸ ಮತ್ತು ಕಥಾ ಇತ್ಯಾದಿಗಳ ಮೂಲಕ ತಮ್ಮ ಸಹೋದರನ ದೀರ್ಘಾಯುಷ್ಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಾರೆ ಮತ್ತು ಅವರ ಹಣೆಯ ಮೇಲೆ ತಿಲಕ ಇಟ್ಟು, ಸಿಹಿ ತಿನಿಸುತ್ತಾರೆ.

ಪುರಾಣಗಳ ಪ್ರಕಾರ ಯಮರಾಜನು ತನ್ನ ಸಹೋದರಿಯ ಮನೆಗೆ ಇಂದಿನ ದಿನ ಭೇಟಿ ನೀಡಿದ್ದನು. ಹಾಹಾಗಿ ಈ ದಿನವನ್ನು ಯಮ ದ್ವಿತೀಯ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಭಗವಾನ್ ಸೂರ್ಯ ಮತ್ತು ಮಾತಾ ಛಾಯಾ ಅವರ ಪುತ್ರ ಯಮ ಮತ್ತು ಪುತ್ರಿ ಯಮುನಾ ಮಾತಾ. ಯಮುನಾ ಮಾತಾ ತನ್ನ ಸಹೋದರ ಯಮನನ್ನು ತುಂಬಾ ಪ್ರೀತಿಸುತ್ತಾಳೆ.

ಯಮುನಾ ತನ್ನ ಸಹೋದರ ಯಮರಾಜನನ್ನು ತನ್ನ ಆತ್ಮೀಯ ಗೆಳೆಯರೊಂದಿಗೆ ತನ್ನ ಮನೆಯಲ್ಲಿ ಬಂದು ಊಟ ಮಾಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಳು. ಆದರೆ ಯಮರಾಜ ತನ್ನ ಕೆಲಸದಿಂದಾಗಿ ಯಮುನಾ ಮನೆಗೆ ತೆರಳುತ್ತಿರಲಿಲ್ಲ. ನಂತರ ಒಮ್ಮೆ ಕಾರ್ತಿಕ ಮಾಸದಲ್ಲಿ ಯಮುನಾ ಸಹೋದರ ಯಮರಾಜನನ್ನು ಊಟಕ್ಕೆ ಮನೆಗೆ ಬರುವಂತೆ ಆಹ್ವಾನಿಸಿದಳು. ಈ ಬಾರಿ ಯಮುನಾ ಯಮರಾಜನಿಂದ ಮನೆಗೆ ಊಟಕ್ಕೆ ಬಂದೇ ಬರುವಂತೆ ಮಾತು ತೆಗೆದುಕೊಂಡರು.

ಇದರ ನಂತರ ಯಮರಾಜ ಯೋಚಿಸುತ್ತಾ ನಾನೂ ಎಲ್ಲರ ಜೀವನವನ್ನು ಸೋಲಿಸುತ್ತೇನೆ ಅಂದರೆ ನಾನೂ ಮೃತ್ಯುಕಾರಕ, ಅದಕ್ಕಾಗಿಯೇ ಯಾರೂ ಕೂಡ ನನ್ನನ್ನು ಅವರ ಮನೆಗೆ ಕರೆಯುವುದಿಲ್ಲ. ಆದರೆ ನನ್ನ ಸಹೋದರಿ ಯಮುನಾ ನನ್ನನ್ನು ಪ್ರೀತಿಯಿಂದ ಕರೆಯುವಾಗ ನಾನು ಹೋಗಿ ಆಕೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಭಾವಿಸುತ್ತಾನೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಎರಡನೇ ದಿನ ಯಮರಾಜ ತನ್ನ ಸಹೋದರಿ ಯಮುನಾ ಅವರ ಮನೆಗೆ ತೆರಳುತ್ತಾನೆ.

ಸಹೋದರ ಯಮರಾಜನನ್ನು ಅವರ ಮನೆಯಲ್ಲಿ ನೋಡಿದ ಯಮುನಾ ಸಂತೋಷಕ್ಕೆ ಪಾರವೇ ಇರಲಿಲ್ಲ. ನಂತರ ಯಮುನಾ ಸ್ನಾನ ಮಾಡಿ, ಸಹೋದರ ಯಮನಿಗಾಗಿ ಧ್ಯಾನ ಮಾಡಿ ಸಹೋದರನ ಶ್ರೇಯಸ್ಸಿಗಾಗಿ ಆತನ ಹಣೆಗೆ ತಿಲಕವಿಟ್ಟಳು. ಬಳಿಕ  ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿ ಪ್ರೀತಿ, ಮಮತೆಯಿಂದ ಸಹೋದರನಿಗೆ ಊಟ ಬಡಿಸಿದಳು. ಇದರಿಂದ ಸಂತಸಗೊಂಡ ಯಮರಾಜ ಯಮುನಾ ಮಾತಾಗೆ ನಿನಗೆ ಬೇಕಾದ ವರವನ್ನು  ಕೇಳು ಕರುಣಿಸುವೆ ಎಂದರು.

ಯಮುನಾ ಮಾತಾ ಸಹೋದರ ನೀವು ಪ್ರತಿ ವರ್ಷ ಈ ದಿನ ನನ್ನ ಮನೆಗೆ ಬರುತ್ತೀರಿ ಎಂದು ವರ ನೀಡಿ ಎಂದಳು.  ಕಾರ್ತಿಕ ಮಾಸದ ಶುಕ್ಲ ಪಕ್ಷದ ಈ ದಿನ ನನ್ನಂತೆ ತನ್ನ ಸಹೋದರನನ್ನು ಗೌರವಿಸುವ ಯಾವುದೇ ಸಹೋದರಿಯ ಮನೆಗೆ ಹೋಗಲು ಅಣ್ಣ-ತಮ್ಮಂದಿರು ಭಯಪಡಬಾರದು ಎಂಬ ವರ ಬೇಡಿದಳು. ಯಮರಾಜ ಅಸ್ತು ಎಂದನು. ಸಹೋದರಿಯರ ಮುತ್ತೈದೆ ಭಾಗ್ಯ ಚಿರಕಾಲ ಉಳಿಯಲಿ ಎಂದು ಆಶೀರ್ವದಿಸಿ ತೆರಳಿದನು.  ಈ ಹಿನ್ನಲೆಯಲ್ಲಿ ಈ ದಿನದಿಂದು ಭಾಯ್ ದೂಜ್ ( Bhai Dooj 2022 ) ಹಬ್ಬವನ್ನು ಆಚರಿಸಲು ಪ್ರಾರಂಭಿಸಲಾಯಿತು ಎಂಬುದು ನಂಬಿಕೆಯಾಗಿದೆ.

( Bhai Dooj 2022 )