ಬೆಂಗಳೂರು, ನವೆಂಬರ್ 15, 2021: ಭಾರತದಲ್ಲಿ ನಡೆದ 2021ರ ಐಪಿಲ್‌ ಪಂದ್ಯಾವಳಿ ಡೇವಿಡ್ ವಾರ್ನರ್‌ ಮರತುಬಿಡಲು ಬಯಸುವ ಸಂಗತಿ. ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರಿಂದ ಮೊದಲು ನಾಯಕತ್ವದಿಂದ ನಂತರ ತಂಡದಿಂದಲೇ ಹೊರಹಾಕಲ್ಪಟ್ಟಿದ್ದರು ಡೇವಿಡ್ ವಾರ್ನರ್, ಅದೂ ಅವಮಾನಕರ ರೀತಿಯಲ್ಲಿ. ಅಷ್ಟುಮಾತ್ರವಲ್ಲದೇ, ಅವರನ್ನು ವಯಸ್ಸಾದವ, ಫಾರಂನಲ್ಲಿಲ್ಲದವ, ಬ್ಯಾಟಿಂಗ್‌ ಮಾಡುವುದೇ ಮರೆತುಹೋಗಿದೆ ಎಂದೆಲ್ಲಾ ಹೀಯಾಳಿಸಲಾಗಿತ್ತು. ಯುವಕರಿಗೆ ತಂಡದಲ್ಲಿ ಸ್ಥಾನ ನೀಡುವ ಕಾರಣವನ್ನೂ ನೀಡಲಾಗಿತ್ತು. ಆದರೆ ಮೊನ್ನೆ ತಾನೇ ಮುಗಿದ T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಸ್ಟ್ರೇಲಿಯಾ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ವಾರ್ನರ್‌ ತಮ್ಮ ಶ್ರೇಷ್ಠ ಆಟವನ್ನು ಇದಕ್ಕಾಗಿಯೇ ಕಾದಿಟ್ಟುಕೊಂಡಿದ್ದರೇನೋ ಎನ್ನುವಂತೆ ಆಡಿ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದೇ ಸಮಯವನ್ನೇ ಕಾಯುತ್ತಿದ್ದರೇನೋ ಎನ್ನುವಂತೆ ವಾರ್ನರ್‌ರ ಪತ್ನಿ ಕ್ಯಾಂಡಿಸ್‌ ಐಪಿಎಲ್‌ ಸಮಯದ ಟೀಕಾಕಾರರಿಗೆ ವ್ಯಂಗ್ಯಭರಿತ ಟ್ವೀಟ್ ಮೂಲಕ ತಕ್ಕ ಉತ್ತರ ನೀಡಿದ್ದಾರೆ.  “ಫಾರ್ಮ್‌ನಲ್ಲಿಲ್ಲದ, ವಯಸ್ಸಾದ, ಹಾಗೂ ನಿಧಾನಗತಿಯ ಆಟಗಾರ, ಅಭಿನಂದನೆಗಳು” ಎಂದು ಟ್ವೀಟ್‌ ಮಾಡಿರುವ ಅವರು ಟೀಕಾಕಾರರು ಶಾಕ್ ಆಗಿರುವಂತೆ ಹಾಗೂ ಅವರು ನಗುತ್ತಿರುವಂತಹ ಎಮೋಜಿಗಳನ್ನು ಸೇರಿಸಿ ಟ್ವೀಟ್‌ ಮಾಡಿದ್ದಾರೆ.

ಡೇವಿಡ್ ವಾರ್ನರ್ ಸಹ ವಿಶ್ವಕಪ್‌ ವಿಜಯದ ನಂತರ ತಮ್ಮ ಬೆನ್ನಿಗೆ ನಿಂತು ಬೆಂಬಲ ನೀಡಿದ ಕುಟುಂಬ ಸದಸ್ಯರನ್ನು ಅಭಿನಂದಿಸಿದ್ದಾರೆ. ನ್ಯೂಜಿಲೆಂಡ್‌ ವಿರದ್ಧದ ಫೈನಲ್‌ ಪಂದ್ಯದಲ್ಲಿ ಕೇವಲ 38 ಎಸೆತಗಳಿಂದ 53 ಭರ್ಜರಿ ರನ್‌ಗಳನ್ನು ಬಾರಿಸಿದ್ದ ವಾರ್ನರ್‌ ಸರಣಿ ಶ್ರೇ‍ಷ್ಠನಾಗಿಯೂ ಆಯ್ಕೆಯಾಗಿದ್ದರು. ತಂಡ ಹಾಗೂ ತರಬೇತುದಾರ ಲ್ಯಾಂಗರ್ ಬೆಂಬಲವೂ ಅವರ ಸಾಧನೆಗೆ ಕಾರಣವಾಯಿತು.

David Warner plays a major role in Australia winning the recently concluded T20 world cup 2021

ಇದನ್ನೂ ಓದಿ: Cricket again: ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಗೆ ?

ಇದನ್ನೂ ಓದಿ: World Diabetes Day: ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಮಧುಮೇಹದಲ್ಲೂ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿರುವ ಪಾಕಿಸ್ತಾನ