ಬೆಂಗಳೂರು: ನವೆಂಬರ್ 17ರ ಬುಧವಾರದಿಂದ ಪ್ರಾರಂಭವಾಗಿಲಿರುವ ಭಾರತದ ವಿರುದ್ಧದ ಟಿ20 ಪಂದ್ಯಗಳ ಸರಣಿಯನ್ನು ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್‌ಸನ್ ತಪ್ಪಿಸಿಕೊಳ್ಳುತ್ತಿದ್ದು ಅವರ ಅನುಪಸ್ಥಿತಿಯಲ್ಲಿ ಪ್ರಥಮ ಪಂದ್ಯದಲ್ಲಿ ಟಿಮ್‌ ಸೌದೀ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಟೆಸ್ಟ್ ತಂಡದ ಪರಿಣತ ಸದಸ್ಯರಿಗಾಗಿ ಜೈಪುರದಲ್ಲಿ ಪ್ರಾರಂಭವಾಗಿರುವ ತರಬೇತಿ ಶಿಬಿರದಲ್ಲಿ ವಿಲಿಯಮ್‌ಸನ್ ಪಾಲುಗೊಳ್ಳಲು ಅನುವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಟೆಸ್ಟ್‌ ಹಾಗೂ ಟಿ20 ಎರಡೂ ಮಾದರಿಗಳಲ್ಲಿ ಆಡುವ ಸದಸ್ಯರ ಪಟ್ಟಿಯಲ್ಲಿರುವ ಟಿಮ್‌ ಸೌದೀ, ಕೈಲ್‌ ಜೇಮಿಸನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್‌ ಹಾಗೂ ಮಿಚೆಲ್‌ ಸ್ಯಾನ್‌ಟನರ್ ಟಿ20 ತಂಡದಲ್ಲಿ ಮುಂದುವರೆಯಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್‌ ತಂಡ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಪರಾಭವಗೊಂಡಿತ್ತು.

ಟಿ20 ಸರಣಿಯ ಮೂರು ಪಂದ್ಯಗಳು ಕ್ರಮವಾಗಿ ಜೈಪುರದ ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ನವೆಂಬರ್ 17ರ ಬುಧವಾರ, ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನವೆಂಬರ್ 19ರ ಶುಕ್ರವಾರ, ಹಾಗೂ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನವೆಂಬರ್ 21ರ ಭಾನುವಾರ ನಡೆಯಲಿವೆ.

ನವೆಂಬರ್ 25ರಿಂದ ಕಾನ್ಪುರದ ಗ್ರೀನ್‌ಪಾರ್ಕ್‌ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿರುವ ಟೆಸ್ಟ್‌ ಸರಣಿಯ ಪ್ರಥಮ ಪಂದ್ಯದಲ್ಲಿ ನಾಯಕ ಕೇನ್‌ ವಿಲಿಯಮ್‌ಸನ್ ತಂಡಕ್ಕೆ ಹಿಂದಿರುಗಲಿದ್ದಾರೆ.  ನ್ಯೂಜಿಲೆಂಡ್‌ ತಂಡದ ಅಧಿಕೃತ ಮಾಹಿತಿಯ ಪ್ರಕಾರ ಕಾಲಿನ ಮೀನಖಂಡದ ಸೆಳೆತದಿಂದ ಗಾಯಾಳುವಾಗಿದ್ದ ಲಾಕೀ ಫರ್ಗುಸನ್‌ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು ಬುಧವಾರದಿಂದ ಪ್ರಾರಂಭವಾಗುವ ಟಿ20 ಸರಣಿಗೆ ಲಭ್ಯರಿದ್ದಾರೆ.

Newzealand captain Kane Williamson to skip T20 series against India in order to prepare for the test series

ಇದನ್ನೂ ಓದಿ: World Diabetes Day: ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಮಧುಮೇಹದಲ್ಲೂ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿರುವ ಪಾಕಿಸ್ತಾನ

ಇದನ್ನೂ ಓದಿ: Cricket again: ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಗೆ ?