ಬರ್ಮಿಂಗ್’ಹ್ಯಾಮ್ : ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ಮಧ್ಯೆ ಎಡ್ಜ್‌ಬಾಸ್ಟನ್ (India vs England Test match) ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸಿರುವ ಇದೇ ಟೆಸ್ಟ್ ಪಂದ್ಯ ವಿವಾದಾತ್ಮಕ ಘಟನೆಗೂ (Racist Abuse in India Vs England Test match) ಸಾಕ್ಷಿಯಾಗಿದೆ.

4ನೇ ದಿನದಾಟದ ಸಂದರ್ಭದಲ್ಲಿ ಭಾರತೀಯ ಆಟಗಾರರಾದ ಮೊಹಮ್ಮದ್ ಸಿರಾಜ್ (Mohammad Siraj) ಮತ್ತು ಶಾರ್ದೂಲ್ ಠಾಕೂರ್ (Shardul Thakur) ಇಂಗ್ಲೆಂಡ್ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ. ಎಡ್ಜ್’ಬಾಸ್ಟನ್ ಮೈದಾನದ ಸೌಥ್ ಲೋವರ್ ಸ್ಟ್ಯಾಂಡ್”ನಲ್ಲಿದ್ದ ಇಂಗ್ಲೆಂಡ್ ಪ್ರೇಕ್ಷಕರು ಟೀಮ್ ಇಂಡಿಯಾ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಕ್ರೀಡಾಂಗಣದಲ್ಲಿ ಹಾಜರಿದ್ದ ಪವನ್ ಎಂಬ ಭಾರತೀಯ ಪ್ರೇಕ್ಷಕ ಆರೋಪಿಸಿದ್ದಾರೆ. ಈ ಕುರಿತ ವೀಡಿಯೊವನ್ನು ಟ್ವಿಟರ್”ನಲ್ಲಿ ಪ್ರಕಟಿಸಿದ್ದಾರೆ.

ಟೀಮ್ ಇಂಡಿಯಾ ಆಟಗಾರರನ್ನಷ್ಟೇ ಅಲ್ಲ, ಭಾರತ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಭಾರತೀಯ ಮೂಲದ ಪ್ರೇಕ್ಷಕರಿಗೂ ಜನಾಂಗೀಯ ನಿಂದನೆಯ ಬಿಸಿ ತಟ್ಟಿದೆ (Racist Abuse At Indian Fans). ಇಂಗ್ಲೆಂಡ್ ಪ್ರೇಕ್ಷಕರು ಭಾರತೀಯರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಧ್ರುವ್ ಪಟೇಲ್ ಎಂಬ ಭಾರತೀಯ ಕ್ರಿಕೆಟ್ ಅಭಿಮಾನಿ ಟ್ವಿಟರ್”ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.