ದೆಹಲಿ:ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ, ತಾವು ಬಾರಿಸಿದ ಸಿಕ್ಸರ್ನಿಂದಾಗಿ ಪೆಟ್ಟು ತಿಂದ ಬಾಲಕಿಗೆ ರೋಹಿತ್ ಶರ್ಮಾ ಟೆಡ್ಡಿ ಬೇರ್ ನೀಡಿದ್ದಾರೆ.

ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ, ಡೇವಿಡ್ ವಿಲ್ಲಿ ಬೌಲಿಂಗ್​ನಲ್ಲಿ ರೋಹಿತ್, ಲೆಗ್​ಸೈಡ್​ನಲ್ಲಿ ಸಿಕ್ಸ್ ಬಾರಿಸಿದ್ರು. ರೋಹಿತ್ ಬಾರಿಸಿದ ಬಾಲ್, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಚಿಕ್ಕ ಹುಡುಗಿಗೆ ಬಡಿದು ಪೆಟ್ಟಾಗಿತ್ತು. ಪಂದ್ಯದ ನಂತರ ಆ ಬಾಲಕಿಯ ಬಳಿ ತೆರಳಿದ ರೋಹಿತ್, ಪುಟ್ಟದೊಂದು ಗೊಂಬೆ ಹಾಗೂ ಚಾಕ್​ಲೆಟ್ಸ್​ ನೀಡಿ ಸಾಂತ್ವನ ಹೇಳಿದ್ದಾರೆ. ರೋಹಿತ್​​​​ರ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.