ದಹಿ ವಡಾ (Dahi Vada) ಭಾರತದಾದ್ಯಂತ ಜನಪ್ರಿಯವಾದ ಸಿಹಿ ತಿಂಡಿ. ಇದು ಉತ್ತರ ಭಾರತದಲ್ಲಿ ವಿಭಿನ್ನ ಪಾಕವಿಧಾನವನ್ನು ಹೊಂದಿದೆ. ಇದು ಚಾಟ್ ಅಥವಾ ಸ್ಟ್ರೀಟ್ ಫುಡ್ ಸ್ನ್ಯಾಕ್ಸ್ ರೆಸಿಪಿಯಾಗಿದೆ. ಸಾಮಾನ್ಯವಾಗಿ ಇದನ್ನು ಬೆಳಗಿನ ಉಪಾಹಾರಕ್ಕೆ ತಯಾರಿಸಲಾಗುತ್ತದೆ. ಆದರೆ ಈಗ ಇದನ್ನು ಸ್ನ್ಯಾಕ್ಸ್ ಆಗಿಯೂ ಸವಿಯಬಹುದು. ನೀವು ಕೂಡಾ ದಹಿ ವಡಾವನ್ನು ಮನೆಯಲ್ಲಿ ಮಾಡಿ ಸವಿಯಿರಿ.

ಬೇಕಾಗುವ ಪದಾರ್ಥಗಳು:
ವಡೆ ತಯಾರಿಸಲು:
* ಉದ್ದಿನ ಬೇಳೆ – 1 ಕಪ್
* ಕತ್ತರಿಸಿದ ಮೆಣಸಿನಕಾಯಿ – 1
* ಜಜ್ಜಿದ ಶುಂಠಿ – 1 ಟೀಸ್ಪೂನ್
* ಕರಿಬೇವಿನ ಎಲೆ – ಅರ್ಧ ಕಪ್
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ಕರಿಮೆಣಸು – 1 ಟೀಸ್ಪೂನ್
* ಒಣ ತೆಂಗಿನಕಾಯಿ ತುರಿ – 2 ಟೀಸ್ಪೂನ್
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – ಕರಿಯಲು
* ಕಾರಾ ಬೂಂದಿ – 1 ಕಪ್

ಮೊಸರು ಮಿಶ್ರಣಕ್ಕೆ:
* ಮೊಸರು- 3 ಕಪ್
* ನೀರು – ಅರ್ಧ ಕಪ್
* ಸಕ್ಕರೆ – 2 ಟೀಸ್ಪೂನ್
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – 3 ಟೀಸ್ಪೂನ್
* ಸಾಸಿವೆ – 1 ಟೀಸ್ಪೂನ್
* ಉದ್ದಿನ ಬೇಳೆ – 1 ಟೀಸ್ಪೂನ್
* ಜೀರಿಗೆ – 1 ಟೀಸ್ಪೂನ್
* ಒಣಗಿದ ಕೆಂಪು ಮೆಣಸಿನಕಾಯಿ – 1
* ಕರಿಬೇವಿನ ಎಲೆಗಳು – ಸ್ವಲ್ಪ
* ಕತ್ತರಿಸಿದ ಮೆಣಸಿನಕಾಯಿ – 2

ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ಉದ್ದಿನ ಬೇಳೆ ಹಾಕಿ ನೀರಿನಲ್ಲಿ ನೆನೆಸಿಡಿ. 2 ಗಂಟೆಗಳ ನಂತರ ನೀರನ್ನು ತೆಗೆದು ಮತ್ತು ಮಿಕ್ಸರ್ ಹಾಕಿ ರುಬ್ಬಿಕೊಳ್ಳಿ.
* ಉದ್ದಿನ ಬೇಳೆ ಹಿಟ್ಟನ್ನು ಪಾತ್ರೆಗೆ ವರ್ಗಾಯಿಸಿ. 2 ನಿಮಿಷಗಳ ಕಾಲ ಹಿಟ್ಟನ್ನು ಹಾಗೆ ಇಟ್ಟು ಅದಕ್ಕೆ ಮೆಣಸಿನಕಾಯಿ, ಶುಂಠಿ, ಕೆಲವು ಕರಿಬೇವಿನ ಎಲೆಗಳು, ಕೊತ್ತಂಬರಿ, ಮೆಣಸು, ಒಣ ತೆಂಗಿನಕಾಯಿ ತುರಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಫಿಕ್ಸ್ ಮಾಡಿ. ಒಂದು ನಿಮಿಷ ಹಾಗೆ ಬಿಡಿ.
* ಖಾಲಿ ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ವಡ್ಡೆ ಮಿಶ್ರಣವನ್ನು ಹಾಕಿ. ಎರಡುಕಡೆ ಕಂದು ಬಣ್ಣ ಮತ್ತು ಗರಿಗರಿಯಾಗುವವರೆಗೆ ವಡಾವನ್ನು ಫ್ರೈ ಮಾಡಿ.
* ಎಣ್ಣೆಯನ್ನು ಹೀರಿಕೊಳ್ಳಲು ವಡಾವನ್ನು ಪೇಪರ್ ಅಥವಾ ಟವೆಲ್ ಮೇಲೆ ಹಾಕಿ.
* ದೊಡ್ಡ ಬಟ್ಟಲಿನಲ್ಲಿ ವಡಾವನ್ನು ಹಾಕಿ 4 ಕಪ್ ಬಿಸಿ ನೀರನ್ನು ಸುರಿಯಿರಿ. ನೀರಿನಲ್ಲಿ ಅದ್ದಿ ಮತ್ತು 5-10 ನಿಮಿಷಗಳ ಕಾಲ ಹಾಗೆ ಇಡಿ. ಇದು ವಡಾವನ್ನು ಮೃದು ಮತ್ತು ರಸಭರಿತವಾಗಿಸಲು ಸಹಾಯ ಮಾಡುತ್ತದೆ.
* ವಡಾವನ್ನು ಚೆನ್ನಾಗಿ ನೆನೆಸಿದ ನಂತರ, ನಿಧಾನವಾಗಿ ನೀರನ್ನು ಪೂರ್ತಿಯಾಗಿ ಸೋಸಿ.

ಮೊಸರು ಮಿಶ್ರಣ ತಯಾರಿಸಲು:
* ದೊಡ್ಡ ಬಟ್ಟಲಿನಲ್ಲಿ ಮೊಸರು ಮತ್ತು ನೀರು ಹಾಕಿ. ಅದಕ್ಕೆ ಸಕ್ಕರೆ ಮತ್ತು ಉಪ್ಪು ಹಾಕಿ ಕಲಕಿ. ಅಗತ್ಯವಿದ್ದರೆ ಹೆಚ್ಚಿನ ನೀರು ಸೇರಿಸಿ.
* ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ನಂತರ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಹಿಂಗ್, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಮೆಣಸಿನಕಾಯಿ ಮತ್ತು ಶುಂಠಿ ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಿ.
* ಈ ಒಗ್ಗರಣೆಯನ್ನು ಮೊಸರು ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ.
* ಈ ಮಸಾಲಾ ಮೊಸರಿಗೆ ವಡಾ ಹಾಕಿ 2 ಗಂಟೆಗಳ ಕಾಲ ಮೊಸರು ಚೆನ್ನಾಗಿ ಹೀರಿಕೊಳ್ಳುವವರೆಗೆ ಮುಚ್ಚಿ.

– ನಂತರ ಸಣ್ಣ ತಟ್ಟೆಯಲ್ಲಿ ದಹಿ ವಡಾ ಇರಿಸಿ ಅದಕ್ಕೆ ಸ್ವಲ್ಪ ಮೆಣಸಿನ ಪುಡಿ ಮತ್ತು 2 ಟೀಸ್ಪೂನ್ ಬೂಂಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ.

Dahi Vada