ಅಂಚೆ ಇಲಾಖೆಯ ಅಂಚೆ ಸಹಾಯಕ (ಪೋಸ್ಟಲ್ ಅಸಿಸ್ಟೆಂಟ್) ಹಾಗೂ ಸಾರ್ಟಿಂಗ್ ಅಸಿಸ್ಟೆಂಟ್ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್-ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿಬ್ಬಂದಿ ನೇಮಕಾತಿ ಆಯೋಗ (SSC) ಅಖಿಲ ಭಾರತ ಮಟ್ಟದ ನೇರ ನೇಮಕಾತಿ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವೇತನ: ಪ್ರತಿ ತಿಂಗಳಿಗೆ 35 ಸಾವಿರ ಮತ್ತು ಶೇಕಡಾ 3 ವಾರ್ಷಿಕ ಇಂಕ್ರಿಮೆಂಟ್ ಹಾಗೂ ಇತರ ಭತ್ಯೆಗಳು
ಪರೀಕ್ಷೆಯ ಹೆಸರು:- ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ 2021.

ವಯೋಮಿತಿ: ಕನಿಷ್ಠ 18 ವರ್ಷಗಳು, ಗರಿಷ್ಠ 27 ವರ್ಷಗಳು, ಇತರ ವರ್ಗಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ದ್ವಿತೀಯ ಪಿಯುಸಿ ಪಾಸಾದವರು ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅವಧಿ ಆರಂಭದ ದಿನ: 1/02/ 2022.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 7/03/2022.
ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಕೆಗೆ ಈ ಕೆಳಗಿನ ಲಿಂಕ್ ಅನ್ನು ಬಳಸಿ.
https://ssc.nic.in/.
ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ:
https://ssc.nic.in/SSCFileServer/PortalManagement/UploadedFiles/Notice_chsl_01022022.pdf

Department of Posts

ಇದನ್ನೂ ಓದಿ: World Cancer: ವಿಶ್ವ ಕ್ಯಾನ್ಸರ್ ದಿನ: ಒಂದೇ ವರ್ಷದಲ್ಲಿ 78 ಸಾವಿರ ಮಂದಿಗೆ ಕ್ಯಾನ್ಸರ್..!

ಇದನ್ನೂ ಓದಿ: PF WITHDRAW: EPFO ​​ಖಾತೆದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್..?