ಚಿಕ್ಕಮಗಳೂರು: ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಸಮಾಜಕ್ಕೆ ಮಾದರಿಯಾಗಬೇಕೆಂದು ಬೆಂಗಳೂರಿನ ದಾನಿಗಳಾದ ಮಹೇಂದ್ರ ಮೊನ್ನೋತ್ ತಿಳಿಸಿದರು.

ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೈನ್ ಸಂಘ ಮತ್ತು ಮಹಿಳಾ ಮಂಡಳಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾಡನಾಡಿ ಮಕ್ಕಳು ದೇಶದ ಭವ್ಯ ಭವಿಷ್ಯದ ರೂವಾರಿಗಳು, ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವ ಉತ್ತಮ ಪ್ರಜೆಗಳಾಗಬೇಕೆಂದು ತಿಳಿಸಿದರು.

ಪ್ರತಿ ವರ್ಷ ನಾನು ರಾಜ್ಯದ ಕೆಲವು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಚಿಕ್ಕಮಗಳೂರಿನ ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಿಗೆ ಅನುಕೂಲವಾಗಲೆಂದು ಕಳೆದ ಹಲವು ವರ್ಷಗಳಿಂದ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದ್ದೇನೆ, ಮಕ್ಕಳು ಉನ್ನತ ವ್ಯಾಸಂಗ ಮಾಡಿ ಸಮಾಜಕ್ಕೆ ಮಾದರಿಯಾಗುವುದರ ಜೊತೆಗೆ ಗೋವುಗಳನ್ನು ರಕ್ಷಿಸಬೇಕೆಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಮಾತನಾಡಿ ಮಹೇಂದ್ರಮೆನ್ನೋತ್ ರವರು ನಮ್ಮ ತಾಲ್ಲೂಕಿಗೆ ಪ್ರತಿ ವರ್ಷವು ಬೆಂಗಳೂರಿನ ಮಾರುತಿ ಮೆಡಿಕಲ್ ಮಾಲೀಕರು ನೋಟ್ ಪುಸ್ತಕಗಳನ್ನು ನೀಡುತ್ತಿದ್ದಾರೆ, ಇದುವರೆಗೂ ೧.೭೬.೪೦೦ ನೋಟ್ ಪುಸ್ತಕಗಳನ್ನು ವಿತರಿಸಿದ್ದಾರೆ, ಇದರ ಮೌಲ್ಯ ಸುಮಾರು ೨೨ ಲಕ್ಷ ರೂಗಳಿಗು ಹೆಚ್ಚು, ಇದೇ ರೀತಿಯಲ್ಲಿ ಅವರ ಸಮಾಜ ಸೇವೆ ಕೆಲಸಗಳು ಮುಂದುವರೆಯಲಿ ಎಂದರು.

ಜೈನ್ ಸಂಘದ ಅಧ್ಯಕ್ಷ ಕಾಂತಿಲಾಲ್ ಮಾತನಾಡಿ ನಮ್ಮ ಸಮಾಜದ ಮುಖಂಡರಾದ ಮಹೇಂದ್ರ ರವರು ಗೋವುಗಳ ರಕ್ಷಣೆ ಮತ್ತು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದರು.

ಜೈನ್ ಮಹಿಳಾ ಸಂಘದ ಸ್ವಪ್ನ ಜೈನ್ ಮಾತನಾಡಿ ನಮ್ಮ ಸಮಾಜದವರು ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.\

ಈ ಸಂದರ್ಭದಲ್ಲಿ ಮಹಿಳಾ ಸಂಘದ ಊರ್ಮಿಳಾ ಜೈನ್, ಗೀತಾಸಿಪಾನಿ, ಅನುಪಮಾ ಲೂನಾವತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Distribution of free note books to students