ಚಿಕ್ಕಮಗಳೂರು: ನ್ಯಾಯವಾದಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಬಹುಜನ ಸಮಾಜ ಪಕ್ಷ ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ವಿಕ್ರಂ ಆಮಟೆ ಅವರನ್ನು ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು ಪೋಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.

ಪೋಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಅದನ್ನು ಮೀರಿ ಅಮಾನುಷವಾಗಿ ವರ್ತಿಸುವುದು ಕಾನೂನುಬಾಹಿರವಾಗುತ್ತದೆ ಎಂದ ಪದಾಧಿಕಾರಿಗಳು ಪೊಲೀಸರ ವರ್ತನೆಯಿಂದ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.

ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿರುವ ಕ್ಷುಲ್ಲಕ ಕಾರಣಕ್ಕೆ ಅಮಾನುಷವಾಗಿ ಥಳಿಸಿರುವುದು ಖಂಡನೀಯ. ಜನಸಾಮಾನ್ಯರಿಗೆ ಪೋಲೀಸ್ ಇಲಾಖೆ ಮೇಲೆ ನಂಬಿಕೆ ಇದ್ದು ಏನೇ ಸಮಸ್ಯೆ ಬಂದರೂ ಅವರು ಪೋಲೀಸರ ಮೊರೆ ಹೋಗುತ್ತಾರೆ ಹೀಗಿರುವಾಗ ಪೋಲೀಸರೇ ದೌರ್ಜನ್ಯ ನಡೆಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಕೆ. ಬಿ. ಸುಧಾ. ಜಿಲ್ಲಾಧ್ಯಕ್ಷ ಕೆ. ಟಿ. ರಾಧಾಕೃಷ್ಣ. ಅಸೆಂಬ್ಲಿ ಉಸ್ತುವಾರಿಗಳಾದ ಪಿ. ಪರಮೇಶ್. ಕೆ. ಆರ್. ಗಂಗಾಧರ್. ಕಚೇರಿ ಕಾರ್ಯದರ್ಶಿ ಕಲಾವತಿ ಹಾಜರಿದ್ದರು.

District Superintendent of Police Dr. from Bahujan Samaj Party leaders. Vikram appeals