ಸುರತ್ಕಲ್‌ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 3, 2021 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿರುತ್ತದೆ.

ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಸದ್ಯ ಖಾಲಿ ಇರುವ 23 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದ್ದು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಬೇಕೆಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಹತೆ ಹಾಗೂ ಆಯ್ಕೆಯ ವಿಧಾನಗಳ ವಿವರಗಳು ಕೆಳಕಂಡಂತಿವೆ:

ಪ್ರಮುಖ ದಿನಾಂಕಗಳು:
1. ಆನ್‌ಲೈನ್ ಪೋರ್ಟಲ್ ಪ್ರಾರಂಭವಾಗುವ ದಿನಾಂಕ: ಅಕ್ಟೋಬರ್ 5, 2021.
2. ಆನ್‌ಲೈನ್ ಶುಲ್ಕ ಸಲ್ಲಿಸಲು ಕಡೆಯ ದಿನಾಂಕ: ನವೆಂಬರ್ 5, 2021.
3. ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: ನವೆಂಬರ್ 5, 2021.
4. ಅರ್ಜಿಯ ಮುದ್ರಿತ ಪ್ರತಿಯನ್ನು ಸಲ್ಲಿಸಲು ಕಡೆಯ ದಿನಾಂಕ: ನವೆಂಬರ್ 10, 2021.

ಅರ್ಹತಾ ಮಾನದಂಡಗಳು:
ಇಂಜಿನಿಯರಿಂಗ್ ವಿಭಾಗಗಳ ಬೋಧಕ ಸ್ಥಾನಗಳಿಗೆ: ಬಿಇ/ಬಿಟೆಕ್ ಅಥವಾ ಯಾವುದಾದರೂ ತತ್ಸಮಾನ ಪದವಿಗಳು ಮತ್ತು ಅದೇ ವಿಷಯಗಳಲ್ಲಿ ಎಂಇ/ಎಂಟೆಕ್ ಅಥವಾ ತತ್ಸಮಾನ ಪದವಿಗಳು. ಅಭ್ಯರ್ಥಿಗಳು ಬಿಇ/ಬಿಟೆಕ್ ನಂತರ ನೇರವಾಗಿ ಪ್ರಖ್ಯಾತ ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳಲ್ಲಿ ನೇರವಾಗಿ ಪಿಎಚ್‌ಡಿ ಪದವಿ ಪಡೆದಿದ್ದು ಉಳಿದೆಲ್ಲಾ ನಿಯಮಾವಳಿಗನುಸಾರ ಅರ್ಹರಾಗಿದ್ದರೆ ಪರಿಗಣಿಸಲಾಗುವುದು.
ಗಣಿತ ವಿಭಾಗದ ಬೋಧಕ ಹುದ್ದೆಗಳಿಗೆ ಎಂಎಸ್‌ಸಿ ಪದವೀಧರರನ್ನು ಪರಿಗಣಿಸಲಾಗುವುದು.

ಶಾಲಾ ವ್ಯವಸ್ಥಾಪನೆ (School Management)ಯ ಬೋಧಕ ಹುದ್ದೆಗಳಿಗೆ ಆಯಾ ವಿಷಯಗಳಲ್ಲಿ ಎಂಎ/ಎಂಎಸ್‌ಸಿ/ಎಂಕಾಂ/ಎಂಬಿಎ/ಎಂಟೆಕ್ ಪದವೀಧರರಾಗಿರಬೇಕು. ಎಲ್ಲಾ ಹೊಸ ಅಭ್ಯರ್ಥಿಗಳು ನಿರ್ದಿಷ್ಟ ಅಥವಾ ತತ್ಸಮಾನ ವಿಷಯಗಳಲ್ಲಿ ಪಿಎಚ್ಡಿ ಪದವಿ ಪಡೆದಿದ್ದು ಹಿಂದಿನ ಪದವಿ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕಾದದ್ದು ಕಡ್ಡಾಯವಾಗಿರತ್ತದೆ.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲದಿದ್ದರೂ ಅರ್ಜಿಗಳ ಪರಿಶೀಲನೆಗಾಗಿ ಹಿಂದಿರುಗಿಸಲಾಗದ ನೂರು ರೂಪಾಯಿಗಳನ್ನು ಮಾತ್ರ ಸಂದಾಯ ಮಾಡಬೇಕಾಗುತ್ತದೆ.

ಅಭ್ಯರ್ಥಿಗಳು ಪೂರ್ಣವಾಗಿ ಭರ್ತಿಮಾಡಿದ ಅರ್ಜಿಗಳನ್ನು ಎಲ್ಲಾ ದೃಢೀಕೃತ ದಾಖಲಾತಿಗಳೊಂದಿಗೆ ಕಡೆಯ ದಿನಾಂಕದೊಳಗೆ ಸಲ್ಲಿಸಬೇಕಾದ ವಿಳಾಸ:
ರಿಜಿಸ್ಟ್ರಾರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್, ಮಂಗಳೂರು 575025, ಕರ್ನಾಟಕ.

ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಸಂದರ್ಶಿಸಬೇಕಾದ ಸಂಸ್ಥೆಯ ಜಾಲತಾಣದ ವಿಳಾಸ: ಎನ್​ಐಟಿ ವೆಬ್​ಸೈಟ್​ಗೆ ಭೇಟಿ ನೀಡಿ. ಇಲ್ಲಿ ಕ್ಲಿಕ್ ಮಾಡಿ.

Employment News Assistant Professor Posts in NIT Suratkal

ಇದನ್ನೂ ಓದಿ: 59 ಲಕ್ಷ ಉದ್ಯೋಗ ಸೃಷ್ಟಿಗೆ ನೂತನ ಯೋಜನೆ ರೂಪಿಸಿದ ಕೆಂದ್ರ ಸರ್ಕಾರ
ಇದನ್ನೂ ಓದಿ: ಕೌಶಲ್ಯಭಿವೃದ್ಧಿ ಮೂಲಕ ಉದ್ಯೋಗವಕಾಶ ಸೃಷ್ಟಿಗೆ ಸರ್ಕಾರ ಗಮನಹರಿಸಲಿ