ಚಿಕ್ಕಮಗಳೂರು: ಸಖರಾಯಪಟ್ಟಣ ಹೋಬಳಿ ಚಟ್ನಪಾಳ್ಯ ಗ್ರಾಮದ ಅಭಿವೃದ್ದಿಗೋಸ್ಕರ ಸುಮಾರು ಒಂದು ಕೋಟಿ ಅನುದಾನ ಮಂಜೂರು ಮಾಡಿ ಕಾಮಗಾರಿ ನಡೆಸಿರುವ ಶಾಸಕ ಸಿ.ಟಿ.ರವಿ ಅವರಿಗೆ ಶ್ರೀ ಚೌಡೇಶ್ವರಿ ದೇವಾಲಯ ಸೇವಾ ಅಭಿವೃದ್ದಿ ಟ್ರಸ್ಟ್ ವತಿಯಿಂದ ಶಾಸಕರ ಸ್ವಗೃಹದಲ್ಲಿ ಶನಿವಾರ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಕೊಲ್ಲಾಬೋವಿ ಹಲವಾರು ವರ್ಷಗಳಿಂದ ದೇವಾಲಯ ದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ಸಮಸ್ಯೆ ಎದುರಾಗಿತ್ತು. ಶಾಸಕ ರವಿಯವರ ಸಹಕಾರದೊಂದಿಗೆ ಗ್ರಾಮದಲ್ಲಿ ದೇವಾಲಯ ಅಭಿವೃದ್ದಿ, ಸಮುದಾಯ ಭವನ, ಪ್ರವಾಸಿ ಮಂದಿರ ಹಾಗೂ ಕಾಂಕ್ರೀಟ್ ರಸ್ತೆ ಸೇರಿದಂತೆ ಹತ್ತು ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ನಡೆದಿವೆ ಎಂದರು.

ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಹಿಂದಿನ ಸಮಯದಲ್ಲಿ ಭಕ್ತಾಧಿಗಳಿಗೆ ಆಗಮಿಸುವ ಯಾವುದೇ ಸೌಲಭ್ಯಗಳಿರಲಿಲ್ಲ. ಇದೀಗ ದೇವಾಲಯ ನವೀಕರಣ, ಕುಡಿಯುವ ನೀರು, ಅಡುಗೆ ತಯಾರಿಸಲು ಕೋಣೆಗಳು ಸೇರಿದಂತೆ ವಿವಿಧ ಸೌಲಭ್ಯಗಳು ಶಾಸಕರು ನೀಡಿರುವುದು ಸಂತಸ ತಂದಿದೆ ಎಂದರು.

ಇದೇ ವೇಳೆ ಶ್ರೀ ಚೌಡೇಶ್ವರಿ ಅಮ್ಮನವರ ಕೆಂಡದಾರ್ಚನೆ ಮತ್ತು ಜಾತ್ರಾ ಮಹೋತ್ಸವ ಏ.24 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕರನ್ನು ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಮಾಜಿ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಸತೀಶ್‍ನಾಯಕ್, ಮಾಜಿ ಕಾರ್ಯದರ್ಶಿ ಕುಮಾರ್ ನಾಯಕ್, ಗ್ರಾಮಸ್ಥರಾದ ನಂದೀಶ್, ಪುಟ್ಟನಾಯಕ್, ಶಂಕರ್ ನಾಯಕ್, ಲೋಕೇಶ್, ಸಿ.ಡಿ.ರವಿ, ಮಂಜು, ವಿಜಯ್ ಮತ್ತಿತರರು ಹಾಜರಿದ್ದರು.

Felicitation to MLAs