ಚಿಕ್ಕಮಗಳೂರು: ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ಹಾಗೂ ಸುತ್ತೂರು ಮಠದ ಶ್ರೀ ರಾಜೇಂದ್ರ ಮಹಾಸ್ವಾಮೀಜಿ ಜನ್ಮದಿನದ ಪ್ರಯುಕ್ತ ಮಂಗಳವಾರ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಡಾ|| ಸಂತೋಷ್ ಅವರಿಗೆ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಸ್ಪಂದನ ಆಸ್ಪತ್ರೆ ಆವರಣದಲ್ಲಿ ಗೌರವಿಸುವ ಮೂಲಕ ದಿನಾಚರಣೆ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು ವಚನ ಸಾಹಿತ್ಯ ಮತ್ತು ಅದರ ತತ್ವ ಸಂದೇಶಗಳನ್ನು ಯುವಜನಾಂಗದ ಮತ್ತು ಮಕ್ಕಳು ಅಳವಡಿಸಿಕೊಂಡು ಅವುಗಳನ್ನು ಪಾಲನೆ ಮಾಡಿ ಕೊಳ್ಳುವುದರಿಂದ ಜೀವನ ಉತ್ತಮಗೊಳ್ಳುವುದರ ಜೊತೆಯಲ್ಲಿ ಸಮಾಜವನ್ನು ಅಭೀವೃದ್ದಿಗೊಳಿಸಬಹುದಾಗಿದೆ ಎಂದರು.

ವಚನ ಸಾಹಿತ್ಯದ ಸಾರ ಸಮಾಜ ಮತ್ತು ದೇಶದ ಅಭಿವೃಧ್ದಿಗೆ ಪೂರಕವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ರೂ ವಚನ ಸಾಹಿತ್ಯ ಹಾಗೂ ಶರಣರ ಚಿಂತನೆಯನ್ನು ಮುಂದಿನ ಪೀಳಿಗೆಯವರಿಗಾಗಿ ಉಳಿಸಿ ಬೆಳೆಸಲು ಪ್ರಯತ್ನಿ ಸಬೇಕು. ಯುವಕರು, ವಿದ್ಯಾರ್ಥಿಗಳು ಶರಣರ ಚಿಂತನೆ ಮತ್ತು ವಚನಗಳನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ಸಮಾಜವನ್ನು ಸುಧಾರಣೆ ಮಾಡಬಹುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ವಚನ ಮತ್ತು ಶರಣ ಸಾಹಿತ್ಯದಲ್ಲಿ ಸಮಾನತೆ, ಸಹಬಾ ಳ್ವೆ ಮುಂತಾದ ಮಾನವೀಯ ಮೌಲ್ಯಗಳು ಅಡಕವಾಗಿದೆ. ಇವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದ ರಿಂದ ಸಮಾಜದಲ್ಲಿ ಶಾಂತಿ-ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಎಂದರು.

ಗೌರವಿಸಿ ಸ್ವೀಕರಿಸಿ ಮಾತನಾಡಿದ ಸ್ಪಂದನ ಆಸ್ಪತ್ರೆಯ ಡಾ|| ಸಂತೋಷ್ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಒಲವು ಹೊಂದಿರುವ ತಾವು ಮುಂದಿನ ದಿನಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವಂತಹ ಕಾರ್ಯ ಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಶರಣ ಸಾಹಿತ್ಯ ಪರಿಷತ್ ಹಾಗೂ ಸ್ವಾಮೀಜಿಯವರ ಜನ್ಮದಿನದ ಆಚರಿಸುತ್ತಿರುವುದು ಅತ್ಯಂತ ಖುಷಿಯ ವಿಚಾರ. ಜೊತೆಗೆ ವಚನ ಸಾಹಿತ್ಯ ಪ್ರತಿಯೊಂದು ಮನಸ್ಸಿಗೆ ನಾಟಿದರೆ ಇಂದಿನ ನಮ್ಮ ಸಮಾಜದಲ್ಲಿರುವ ಅಸಮಾ ನತೆ, ಜಾತಿ ತಾರತಮ್ಯ ಮುಂತಾದ ಬೇಧಬಾವಗಳು ದೂರವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಚಟ್ನಳ್ಳಿ ಮಹೇಶ್, ಬೆಳವಾಡಿ ಮಂಜುನಾಥ್, ಶರಣ ಸಾಹಿತ್ಯ ಪರಿಷತ್ ಸಂಚಾಲಕ ವಿಜಯಕುಮಾರ್ ಪಿಳೇನಹಳ್ಳಿ, ಹಿರಿಯ ಸದಸ್ಯ ಎ.ಸಿ.ಚಂದ್ರಪ್ಪ, ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಕಾರ್ಯದರ್ಶಿ ವರುಣ್, ದಲಿತ ಮುಖಂಡ ರಮೇಶ್ ಮತ್ತಿತರರು ಹಾಜರಿದ್ದರು.

Foundation day celebration of Sharan Sahitya Parishad in the city