ಮೆಲ್ಬರ್ನ್: ರಣರೋಚಕ ಟಿ20 ವಿಶ್ವಕಪ್ (T20 WorldCup) ಅಂತಿಮಘಟ್ಟ ತಲುಪಿದೆ. ಭಾನುವಾರ (ನ.13) ಇಂಗ್ಲೆಂಡ್ (England) ಹಾಗೂ ಪಾಕಿಸ್ತಾನ (Pakistan) ತಂಡಗಳು ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಸೆಣಸಲಿವೆ. ಆದರೆ ಫೈನಲ್ ಪಂದ್ಯವನ್ನು 1992ರ ವಿಶ್ವಕಪ್ ಪಂದ್ಯಕ್ಕೆ ಹೋಲಿಕೆ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ (Sunil Gavaskar), `ಪಾಕಿಸ್ತಾನ 2022ರ ಟಿ20 ವಿಶ್ವಕಪ್ ಗೆದ್ದರೇ 2048ಕ್ಕೆ ತಂಡದ ನಾಯಕ ಬಾಬರ್ ಆಜಂ (Babar Azam) ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಪ್ರಸ್ತುತ ವಿಶ್ವಕಪ್ ಪಂದ್ಯವನ್ನು 1992 ವಿಶ್ವಕಪ್‌ಗೆ ಹೋಲಿಸಿರುವ ಗಾವಸ್ಕರ್, `ನಿಮಗೆ ಗೊತ್ತಾ ಈ ಬಾರಿ ವಿಶ್ವಕಪ್ ಗೆದ್ದರೆ, ಬಾಬರ್ ಆಜಂ (Babar Azam) ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ (Pakistan PrimeMinister) ಎಂದು ಹೇಳಿದ್ದಾರೆ.  1992ರಲ್ಲಿ ಏಕದಿನ ವಿಶ್ವಕಪ್‌ನಲ್ಲೂ ಪಾಕಿಸ್ತಾನ-ಇಂಗ್ಲೆಂಡ್ (PAKvsENG) ಫೈನಲ್ ಪ್ರವೇಶಿಸಿತ್ತು. ಮಹತ್ವದ ತಿರುವುಗಳ ನಡುವೆಯೂ ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದಿನ ಪಂದ್ಯದಲ್ಲಿ ವಾಸೀಮ್ ಅಕ್ರಮ್ ಭರ್ಜರಿ ಪ್ರದರ್ಶನ ನೀಡಿದ್ದರು.

2022ರ T20 ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯದಲ್ಲೇ ಮುಗ್ಗರಿಸಿದ ಪಾಕ್ ಈಗ ಫೈನಲ್ ತಲುಪಿದೆ. ಮೊದಲ ಪಂದ್ಯದಲ್ಲಿ 20 ಓವರ್‌ಗಳಲ್ಲಿ 159 ರನ್‌ಗಳಿಸಿ ಭಾರತದ (Team India) ಎದುರು ಸೋಲನ್ನು ಅನುಭಿಸಿತು. 2ನೇ ಪಂದ್ಯದಲ್ಲಿ ಕೇವಲ 129 ರನ್‌ಗಳಿಸಿ ಜಿಂಬಾಬ್ವೆ ಎದುರು ಮಂಡಿಯೂರಿತ್ತು. ನಂತರ ಅಬ್ಬರಿಸಲು ಆರಂಭಿಸಿದ ಪಾಕ್ ಸತತ ಮೂರು ಪಂದ್ಯಗಳಲ್ಲಿ ಗೆದ್ದು ಅಧಿಕ ರನ್‌ರೇಟ್‌ನೊಂದಿಗೆ ಸೆಮಿ ಫೈನಲ್ ಪ್ರವೇಶಿಸಿತು. ಸೆಮಿ ಕದನದಲ್ಲಿ ಕಿವೀಸ್ ಪಡೆಗೆ ಮಣ್ಣುಮುಕ್ಕಿಸಿ, ಈಗ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಗಾವಸ್ಕರ್ ಇದನ್ನು 1992ರ ವಿಶ್ವಕಪ್ ಕದನಕ್ಕೆ ಹೋಲಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪಾಕ್ ತಂಡದ ನಾಯಕ ಬಾಬರ್ ಆಜಂ, ನಾವು ಖಂಡಿತವಾಗಿಯೂ ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತೇವೆ. ಈ ದೊಡ್ಡ ಮೈದಾನದಲ್ಲಿ ತಂಡವನ್ನು ಮುನ್ನಡೆಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. 1992 ಹಾಗೂ 2022ರ ವಿಶ್ವಕಪ್‌ಗಳಲ್ಲಿ ಮೆಲ್ಬರ್ನ್‌ನಲ್ಲಿ ಭಾರತದ ಎದುರೇ ಆರಂಭಿಕ ಪಂದ್ಯಗಳನ್ನಾಡಿದ ಪಾಕ್ ಎರಡೂ ಪಂದ್ಯಗಳಲ್ಲೂ ಸೋತಿದೆ.

Gavaskar’s future