ಪ್ರತಿಷ್ಠಿತ ಕಂಪನಿ ಇನ್ಫೋಸಿಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ 50,000ಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಕಂಪನಿಯು 2023ರ ಹಣಕಾಸು ವರ್ಷದಲ್ಲಿ 13-15%ಕ್ಕೆ ಬಲವಾದ ಆದಾಯ ಬೆಳವಣಿಗೆಯ ಮಾರ್ಗದರ್ಶನವನ್ನ ನಿಗದಿಪಡಿಸಿದೆ. ಇನ್ನು ಕಾರ್ಯಾಚರಣೆಯ ಅಂಚುಗಳು 21-23%ರಷ್ಟಿದೆ.

ಇನ್ನು ಇನ್ಫೋಸಿಸ್ ಮಾರ್ಚ್​ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ 5,686 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ.12ರಷ್ಟು ಏರಿಕೆ ಕಂಡಿದೆ. ಬೆಂಗಳೂರು ಮೂಲದ ತಂತ್ರಜ್ಞಾನ ದೈತ್ಯ ಸಂಸ್ಥೆಯು ಕ್ಲೌಡ್​ ಸೇವೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದು, ಲಾಭಕ್ಕೆ ಕಾರಣವಾಗಿದೆ.

ಡಿಜಿಟಲ್​ ಸೇವೆಗಾಗಿ ಅತಿ ಹೆಚ್ಚಿನ ವ್ಯಾಪಾರ ಒಪ್ಪಂದ ಮಾಡಿಕೊಂಡ ಪರಿಣಾಮ ಸಂಸ್ಥೆಯ ಆದಾಯವು ಹೆಚ್ಚಿದೆ. ಇದು ಈ ತ್ರೈಮಾಸಿಕದಲ್ಲಿ ಶೇ.12ರಷ್ಟು ಏರಿಕೆಯಾಗಿ, 5686 ಕೋಟಿ ರೂಪಾಯಿ ಲಾಭ ಗಳಿಸಿದೆ. ಜನವರಿ-ಮಾರ್ಚ್ ಅವಧಿಯಲ್ಲಿ ಕಂಪನಿಯ ಆದಾಯವು ಶೇ.23ರಷ್ಟು ಏರಿಕೆಯಾಗಿ 32,276 ಕೋಟಿಗೆ ತಲುಪಿದೆ.

ಆಳವಾದ ವಿಭಿನ್ನ ಡಿಜಿಟಲ್ ಮತ್ತು ಇನ್ಫೋಸಿಸ್ ಕೋಬಾಲ್ಟ್ ನೇತೃತ್ವದ ಕ್ಲೌಡ್ ಸಾಮರ್ಥ್ಯಗಳಿಂದ ಪ್ರೇರಿತವಾದ ವಿಶಾಲ-ಆಧಾರಿತ ಕಾರ್ಯಕ್ಷಮತೆಯೊಂದಿಗೆ ಇನ್ಫೋಸಿಸ್ ಒಂದು ದಶಕದಲ್ಲಿ ಅತ್ಯಧಿಕ ವಾರ್ಷಿಕ ಬೆಳವಣಿಗೆಯನ್ನ ನೀಡಿದೆ. ತಮ್ಮ ಡಿಜಿಟಲ್ ಪ್ರಯಾಣಗಳನ್ನ ಯಶಸ್ವಿಯಾಗಿ ನ್ಯಾವಿಗೇಟ್ ಮಾಡುವ ನಮ್ಮ ಸಾಮರ್ಥ್ಯದ ಬಗ್ಗೆ ಗ್ರಾಹಕರ ನಿರಂತರ ವಿಶ್ವಾಸದ ಪರಿಣಾಮವಾಗಿ ನಾವು ಮಾರುಕಟ್ಟೆ ಪಾಲನ್ನು ಗಳಿಸುವುದನ್ನು ಮುಂದುವರಿಸಿದ್ದೇವೆ ಎಂದು ಇನ್ಫೋಸಿಸ್ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಹೇಳಿದರು.

Good news from Infosys