ರಾಜ್ಯದ ಹೆಮ್ಮೆಯ ಹೆಲಿಕಾಪ್ಟರ್ ನಿರ್ಮಾಣ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್​ನ (ಎಚ್​ಎಎಲ್) ತುಮಕೂರಿನ ಘಟಕ ಮಾರ್ಚ್ 22ರಿಂದ ತನ್ನ ಕಾರ್ಯಾರಂಭ ಮಾಡಲಿದೆ. ಈ ಘಟಕವು ಬಹುಪಯೋಗಿ ಲಘು ಯುದ್ಧ ಹೆಲಿಕಾಪ್ಟರ್ (ಮಲ್ಟಿ ರೋಲ್ ಕಾಂಬಾಟ್ ಹೆಲಿಕಾಪ್ಟರ್) ಅನ್ನು ತಯಾರಿಸಲಿದೆ.

ಇತ್ತೀಚೆಗಷ್ಟೇ ಭದ್ರತಾ ಸಚಿವಾಲಯವು ಎಚ್ ಎ ಎಲ್ ನಿಂದ 12 ಲಘು ಹೆಲಿಕಾಪ್ಟರ್ ಗಳನ್ನು ಪಡೆಯಲು ಹಸಿರು ನಿಶಾನೆ ತೋರಿತ್ತು. ಇದರಲ್ಲಿ 6 ಭಾರತೀಯ ಸೇನೆಗೆ, 6 ಭಾರತೀಯ ವಾಯು ಸೇನೆಗೆ. ಈಗಾಗಲೇ ಲಡಾಕ್, ಸಿಯಾಚನ್ ಪ್ರದೇಶಗಳಲ್ಲಿ ಕೆಲ ಲಘುವಿಮಾನಗಳ ಪರೀಕ್ಷಾರ್ಥ ಪ್ರಯೋಗಗಳು ಆಗಿವೆ. ಉನ್ನತ ಮೂಲಗಳ ಪ್ರಕಾರ, ತುಮಕೂರು ಘಟಕವು ವಾರ್ಷಿಕವಾಗಿ 30 ಲಘು ಹೆಲಿಕಾಪ್ಟರ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿರಲಿದೆಯಂತೆ. ಈ ಮಧ್ಯೆ ಎಚ್ ಎಎಲ್, 175 ಲಘು ಹೆಲಿಕಾಪ್ಟರ್ ಗಳ ತಯಾರಿಕೆಗೆ ತುರ್ತಾಗಿ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ತುಮಕೂರಿನಲ್ಲಿ ಎಚ್ ಎಎಲ್ ತನ್ನ ಕಾರ್ಯಾರಂಭ ಮಾಡಲು ಫೆಬ್ರವರಿ 2,2020ರಲ್ಲೇ ಅನುಮತಿ ದೊರಕಿತ್ತು.
ಹೊಸ ಪೀಳಿಗೆಗಾಗಿ ಒಂದೇ ಎಂಜಿನ್ ಹೊಂದಿರುವ ಲಘು ಹೆಲಿಕಾಪ್ಟರ್ ಅನ್ನು ಎಚ್ ಎ ಎಲ್ ನ ರೋಟರಿ ವಿಂಗ್ ರೀಸರ್ಚ್ ತಂಡ ತಯಾರು ಮಾಡುತ್ತಿದೆ. ಇದರಲ್ಲಿ ಸಿಂಗಲ್ ಟರ್ಬೋ ಎಂಜಿನ್ ಗಳು ಕೂಡ ಇರಲಿವೆ. ಇದರಿಂದ ಹಿಮಾಲಯದಂತ ಎತ್ತರ ಪ್ರದೇಶದಲ್ಲಿ ಸುಲಭವಾಗಿ ಹಾರಾಡಬಹುದು.

Tumkur HAL operational by march 22

ಇದನ್ನೂ ಓದಿ: ವಾಯುಪಡೆಯ ಹೆಲಿಕಾಪ್ಟರ್‌ ವೈವಿಧ್ಯ