ಬೆಂಗಳೂರು, ನವೆಂಬರ್ 15, 2021: ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡುತ್ತಾ ದಿವಂಗತ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಶ್ರೀಪಾದಂಗಳವರ ಹರಿಜನಕೇರಿ ಭೇಟಿಯನ್ನು ಟೀಕಿಸಿದ್ದರು ಹಂಸಲೇಖ.  ಇವರೇ ಸಿದ್ಧಪಡಿಸಿದ ಆಹಾರವನ್ನು ತೆಗೆದುಕೊಂಡು ಹೋಗಿ ಅಲ್ಲಿ ಅವರ ಜೊತೆ ತಿಂದರೆ ಏನು ಪ್ರಯೋಜನ? ಅವರ ಮನೆಯಲ್ಲಿ ಅವರು ಸಿದ್ಧಪಡಿಸಿದ ಆಹಾರ ಸ್ವೀಕರಿಸಬೇಕಾಗಿತ್ತು. ಅವರು ತಿನ್ನುವ ಮಾಂಸಾಹಾರವನ್ನು ಇವರಿಗೆ ನೀಡಲಾಗುತ್ತದೆಯೇ? ನೀಡಿದರೂ ಇವರು ಸ್ವೀಕರಿಸುತ್ತಾರೆಯೇ ಎಂಬ ಅರ್ಥ ಬರುವಂತೆ ತಮ್ಮ ಅಭಿಪ್ರಾಯ ವ್ಯಕ್ಟಪಡಿಸಿದ್ದರು ಕನ್ನಡದ ಖ್ಯಾತ  ಚಿತ್ರ ಸಂಗೀತ ನಿರ್ದೇಶಕ. ಇದಲ್ಲದೇ, ಬಿಳಿಗಿರಿ ರಂಗನಾಥಸ್ವಾಮಿಯ ಬಗ್ಗೆಯೂ ಮಾತನಾಡಿದ್ದ ಹಂಸಲೇಖಾ “ರಾತ್ರಿಯ ಸಮಯದಲ್ಲಿ ಸೋಲಿಗರ ಮನೆಗೆ ಹೋಗಿ ಸುಂದರ ಸೋಲಿಗ ಯುವತಿಯೊಂದಿಗೆ ಸಂಸಾರ ಮಾಡಿ ಪುನ: ತನ್ನ ದೇವಾಲಯಕ್ಕೆ ಹೋಗಿ ವಿಗ್ರಹವಾಗುವುದು ಯಾವ ದೊಡ್ಡ ವಿಷಯ? ಸೋಲಿಗರ ಯುವತಿಯನ್ನೇ ತನ್ನ ಲೋಕಕ್ಕೆ ಕರೆದುಕೊಂಡು ಹೋಗಿ ಉದ್ಧರಿಸಿದ್ದರೆ ಅದು ಮೆಚ್ಚುವ ವಿಷಯವಾಗಿತ್ತು ಎಂದಿದ್ದರು.

ಅವರ ಈ ವಿಡಿಯೋ ವೈರಲ್ ಅಗಿದ್ದಲ್ಲದೇ ಅವರ ಈ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿಷಯ ದಿನೇ-ದಿನೇ ದೊಡ್ಡದಾಗುತ್ತಿರುವುದನ್ನು ಮನಗಂಡ ಹಂಸಲೇಖಾ ಇದಕ್ಕಾಗಿ ಕ್ಷಮೆ ಕೋರಿದ್ದು ಪೇಜಾವರ ಶ್ರೀಗಳ ಬಗ್ಗೆ ಹಾಗೂ ಅಸ್ಪೃಶ್ಯತೆಯನ್ನು ತಡೆಯವ ಅವರ ಪ್ರಯತ್ನದ ಬಗ್ಗೆ ನನಗೆ ಅಪಾರ ಗೌರವವಿದೆಯೆಂದು ಹೇಳಿದ್ದಾರೆ. ಅದೊಂದು ಪ್ರಶಸ್ತಿ ಪ್ರದಾನ ಸಮಾರಂಭವಾಗಿದ್ದು ಅಲ್ಲಿ ಇಂತಹ ಹೇಳಿಕೆಗಳ ಅವಶ್ಯಕತೆಯಿರಲಿಲ್ಲ.  ಮನೆಗೆ ಬಂದ ನಂತರ ನನ್ನ ಪತ್ನಿ ಕೂಡಾ ಇದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದು ನಾನು ಅವರ ಕ್ಷಮೆಯನ್ನೂ ಕೋರಿದ್ದೇನೆ ಎಂದರು.

ಹಂಸಲೇಖಾರ ಈ ಹೇಳಿಕೆಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಪೇಜಾವರ ಮಠದ ಸದ್ಯದ ಮಠಾಧೀಶರಾಗಿರುವ ವಿಶ್ವಪ್ರಸನ್ನ ತೀರ್ಥರು ಇದಕ್ಕೆ ನಾನು ಪ್ರತಿಭಟಿಸಲು ಹೋಗುವುದಿಲ್ಲ.  ಪ್ರಚಾರಕ್ಕಾಗಿ ಕೆಲವೊಮ್ಮೆ ಜನ ಈ ರೀತಿಯ ಕೃತ್ಯಗಳನ್ನು ಮಾಡುತ್ತಾರೆ. ನಮ್ಮ ಗುರುಗಳು ಎಲ್ಲರ ಹೃದಯಗಳಲ್ಲಿ ಕೃಷ್ಣನನ್ನು ಕಾಣುತ್ತಿದ್ದವರು, ಸ್ವಯಂಪ್ರೇರಣೆಯಿಂದ ದಲಿತರ ಕೇರಿಗಳಿಗೆ ಹೋಗುತ್ತಿದ್ದರು, ಅವರ ಹಿತವನ್ನು ಬಯಸುತ್ತಿದ್ದರು, ಅವರಿಗೆ ಅಪಾಯವೊದಗಿದಾಗ ಸಾಂತ್ವನ ಹೇಳಿ ಸಾಧ್ಯವಿದ್ದ ಸಹಾಯ ಮಾಡುತ್ತಿದ್ದರು. ಪ್ರಚಾರಕ್ಕಾಗಿ ಇಂತಹ ಟೀಕೆಗಳನ್ನು ಮಾಡುವವರಿಗೆ ದೇವರೇ ಶಿಕ್ಷೆಯನ್ನು ನೀಡುತ್ತಾನೆ, ನಾವು ಪ್ರತಿಭಟಿಸುವ ಅವಶ್ಯಕತೆಯಿಲ್ಲ ಎಂದಿದ್ದರು.

 

Hamsalekha says sorry for his remarks on Pejavara Swamiji

ಇದನ್ನೂ ಓದಿ: Kannada language : ಅನ್ಯಭಾಷೆಗಳ ವ್ಯಾಮೋಹದಿಂದ ಕನ್ನಡ ಮೂಲೆಗುಂಪು

ಇದನ್ನೂ ಓದಿ: 2024ರೊಳಗೆ ಉತ್ತರ ಕನ್ನಡದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುವೆ: ಸಂಸದ ಅನಂತಕುಮಾರ್ ಹೆಗಡೆ