ಹೃದಯಾಘಾತವನ್ನು (Heart Attack) ಸಾಮಾನ್ಯವಾಗಿ ‘ಸೈಲೆಂಟ್‌ ಕಿಲ್ಲರ್’ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇದು ಯಾವುದೇ ರೋಗಲಕ್ಷಣಗಳಿದ್ದರೂ ಗೊತ್ತಾಗದಂತೆ ಕೊಂದುಬಿಡುತ್ತದೆ. ಎಷ್ಟೋ ಜನ ತೊಂದರೆ ಅನುಭವಿಸುತ್ತಿದ್ದರೂ, ಈ ಕಾಯಿಲೆ ಇದೆ ಎಂಬುದನ್ನೇ ತಿಳಿದಿರುವುದಿಲ್ಲ. ಹೃದಯಾಘಾತವು ಯಾವುದೇ ಚಿಹ್ನೆಗಳೊಂದಿಗೆ ಬರುವುದಿಲ್ಲ ಎಂದು ಹಲವರು ನಂಬುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ಬೇರೆಯದ್ದನ್ನೇ ಹೇಳುತ್ತದೆ.

ಅಧ್ಯಯನ ಹೇಳೋದೇನು?
ಜರ್ನಲ್‌ ಸರ್ಕ್ಯೂಲೇಷನ್‌ನಲ್ಲಿ ಸಮೀಕ್ಷೆ ವರದಿಯೊಂದನ್ನು ಪ್ರಕಟಿಸಲಾಗಿದೆ. ಹೃದಯಾಘಾತದಿಂದ ಬದುಕುಳಿದ 500 ಕ್ಕೂ ಹೆಚ್ಚು ಮಹಿಳೆಯರನ್ನು ಸಂಶೋಧನೆಯು ಒಳಗೊಂಡಿತ್ತು. ಹೃದಯಾಘಾತವು ಮುಂಚಿತವಾಗಿ ಹಲವು ಹೆಚ್ಚರಿಕೆಯ ಸೂಚನೆಗಳನ್ನು ನೀಡುತ್ತೆ ಎಂಬುದನ್ನು ಸಂಶೋಧನೆಯು ಬಹಿರಂಪಡಿಸಿದೆ.

ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಶೇ.95 ರಷ್ಟು ಜನರು ತಮಗೆ ಹೃದಯಾಘಾತವಾಗುವುದಕ್ಕೂ ಒಂದು ತಿಂಗಳ ಮೊದಲು ಅಥವಾ ಅದಕ್ಕಿಂತಲೂ ಹಿಂದೆ ದೈಹಿಕವಾಗಿ ಆರಾಮಾಗಿಲ್ಲ ಎಂಬ ಅಂಶಗಳನ್ನು ಗಮನಸಿರುವುದಾಗಿ ಹೇಳಿಕೊಂಡಿದ್ದಾರೆ. ಶೇ.71 ರಷ್ಟು ಮಂದಿ ಆಯಾಸವನ್ನು ಸಾಮಾನ್ಯ ರೋಗಲಕ್ಷಣವೆಂದು ಹೇಳಿಕೊಂಡಿದ್ದಾರೆ. ಶೇ.48 ರಷ್ಟು ಜನರು ನಿದ್ರೆ ಸಮಸ್ಯೆ ಎದುರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಕೆಲ ಮಹಿಳೆಯರು ಎದೆ ನೋವು ಅನುಭವಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಒತ್ತಡ, ನೋವು, ಎದೆಯಲ್ಲಿ ಬಿಗಿತ ಆಗಿದ್ದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹೃದಯಾಘಾತಕ್ಕೂ ಮುನ್ನ ಸಿಗುವ ಸೂಚನೆಗಳಿವು
ಅಸಾಮಾನ್ಯ ಆಯಾಸ, ನಿದ್ರಾ ಭಂಗ, ಉಸಿರಾಟದ ತೊಂದರೆ, ಅಜೀರ್ಣ, ಆತಂಕ, ಹಾರ್ಟ್ ರೇಸಿಂಗ್, ತೋಳುಗಳು ದುರ್ಬಲ/ಭಾರ, ಆಲೋಚನೆ ಅಥವಾ ಸ್ಮರಣೆಯಲ್ಲಿ ಬದಲಾವಣೆಗಳು, ದೃಷ್ಟಿ ತೊಂದರೆ, ಹಸಿವಾಗದಿರುವುದು, ಕೈಗಳು ಜುಮ್ಮೆನಿಸುವಿಕೆ, ರಾತ್ರಿಯಲ್ಲಿ ಉಸಿರಾಟದ ತೊಂದರೆ.

Heart attack