ಐಸಿಸಿ ಪುರುಷರ T20 ವರ್ಲ್ಡ್‌ ಕಪ್ ೨೦೨೧: ಯುಎಇ, ಓಮನ್ ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನೊಯ ವೇಳಾಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಪ್ರಕಟ ಮಾಡಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇದೇ ೨೪ರಂದು ಭಾರತ-ಪಾಕ್ ಹಣಾಹಣಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಸೂಪರ್ ೧೨ ಪಂದ್ಯ ಆಸ್ಟ್ರೇಲಿಯಾ-ಆಫ್ರಿಕಾ ನಡುವೆ ಅ. ೨೩ಕ್ಕೆ ಆರಂಭವಾಗುವುದು.

ಭಾರತದ ಪಂದ್ಯಗಳ ವೇಳಾಪಟ್ಟಿ

ಅಕ್ಟೋಬರ್ ೨೪- ಭಾರತ-ಪಾಕಿಸ್ತಾನ

ಅಕ್ಟೋಬರ್ ೩೧- ಭಾರತ- ನ್ಯೂಜಿಲೆಂಡ್

ನವೆಂಬರ್ ೩- ಭಾರತ- ಅಫ್ಘಾನಿಸ್ತಾನ

ನವೆಂಬರ್ ೫ ಬಿ೧

೮ ನವೆಂಬರ್ ಎ೨

ಭಾರತೀಯ ಕಾಲಮಾನದ ಅನುಸಾರ ಪಂದ್ಯಗಳು ಮಧ್ಯಾಹ್ನ ೩-೩೦ಕ್ಕೆ, ರಾತ್ರಿಯ ಪಂದ್ಯ ಸಂಜೆ ೭-೩೦ಕ್ಕೆ ಪ್ರಾರಂಭವಾಗಲಿದೆ.  ಭಾರತದ ಪಂದ್ಯಗಳು ಸಂಜೆಗೆ ನಿಗಧಿತವಾಗಿದೆ.