ಕೋಲಾರ: ಪ್ರಧಾನಿ ಗೌರವಿಸಿದಂತಹ ವ್ಯಕ್ಯಿ ಯಾರಾದ್ರು ಇದ್ರೆ ಅದು ಯಡಿಯೂರಪ್ಪ. ಅವರನ್ನ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ. ಯಡಿಯೂರಪ್ಪ (BS Yediyurappa) ಅವರಿಗೆ ಮೋದಿ (Narendra Modi) ಅವರು ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ ಎಂದು ಸಚಿವ ಮುನಿರತ್ನ (Munirathna) ತಿಳಿಸಿದರು.

ಕೋಲಾರ (Kolar) ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನ ಬಿಡುವ ಉದ್ದೇಶ ಇಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು.

ಬಿಜೆಪಿ (BJP) ಜೊತೆ ಎಲ್ಲಾ ಸಮುದಾಯಗಳು ಇವೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಈಗಾಗಲೇ ಗ್ಯಾರೆಂಟಿ ಕಾರ್ಡ್ ಕೊಡುವ ಮೂಲಕ ಅಧಿಕಾರಕ್ಕೆ ಬರಲ್ಲ ಎಂದು ಅವರೇ ಹೇಳ್ತಿದ್ದಾರೆ. ಹಾಗಾಗಿ ನಾವು ರಾಜ್ಯದಲ್ಲಿ ಸರ್ಕಾರ ಮಾಡೋದು ಖಚಿತ ಎಂದು ಹೇಳಿದರು.

ದಶಪಥ ರಸ್ತೆ (Bengaluru Mysuru Expressway) ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಇದ್ದಾಗ ಅದನ್ನ ಪ್ರಾರಂಭ ಮಾಡಿ ಉದ್ಘಾಟನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧ, ಹೈಕೋರ್ಟ್ ಕೂಡ ನಾವೆ ಕಟ್ಟಿಸಿದ್ದೇವೆ ಅಂದುಬಿಡ್ತಾರೆ. ಸದ್ಯ, ಕೆಆರ್‌ಎಸ್ ಕೂಡ ನಾವೇ ಮಾಡಿದ್ದು ಎಂದಿಲ್ಲ ಎಂದು ವ್ಯಂಗ್ಯವಾಡಿದರು.

If there is anyone who respects Modi it is Yeddyurappa