ಚಿಕ್ಕಮಗಳೂರು:  ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಎದುರಿಸಿದ ೮೭೧೧ಮಂದಿ ವಿದ್ಯಾರ್ಥಿಗಳ ಪೈಕಿ ೭೪೨೯ ಮಂದಿ ತೇರ್ಗಡೆ ಹೊಂದಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿ ತಮ್ಮ ಅಸಮಾನ್ಯ ಸಾಮಾರ್ಥ್ಯವನ್ನು ಹೊರಗೆಡಹಿದ್ದಾರೆ.

೭೪೨೯ ಮಂದಿ ವಿದ್ಯಾರ್ಥಿಗಳ ಪೈಕಿ ೩೮೯೦ ಮಂದಿ ಹುಡುಗರು, ೪೮೨೧ಮಂದಿ ಹುಡುಗಿಯರು ಪಾಸಾಗಿದ್ದಾರೆ. ರಾಜ್ಯಮಟ್ಟದಲ್ಲಿ ಕಾಫಿನಾಡು ಒಂಭತ್ತನೆ ಸ್ಥಾನ ಪಡೆದುಕೊಂಡಿದೆ. ೨೦೨೩ನೇ ಸಾಲಿನಲ್ಲಿ ಆರನೇ ಸ್ಥಾನದಲ್ಲಿದ್ದ ಜಿಲ್ಲೆ ಒಂಭತ್ತನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಕಲಾವಿಭಾಗದಲ್ಲಿ ಪರೀಕ್ಷೆ ಎದುರಿಸಿದ ೨೪೨೧ಮಂದಿ ವಿದಯಾರ್ಥಿಗಳ ಪೈಕಿ ೧೭೯೩ಮಂದಿ ಪಾಸಾಗಿದ್ದಾರೆ. ಅದರಲ್ಲಿ ೭೯೭ಹುಡುಗರು,೯೯೬ ಹುಡುಗಿಯರು ಪಾಸಾಗಿದ್ದಾರೆ.

ವಾಣಿಜ್ಯವಿಭಾಗದಲ್ಲಿ ಪರೀಕ್ಷೆ ಎದುರಿಸಿದ ೨೯೨೭ಮಂದಿ ವಿದ್ಯಾರ್ಥಿಗಳ ಪೈಕಿ ೨೭೪೭ ಮಂದಿ ಪಾಸಾಗಿದ್ದಾರೆ. ಆಪೈಕಿ ೧೧೨೯ಮಂದಿ ಹುಡುಗರು,೧೪೧೮ಮಂದಿ ಹುಡುಗಿಯರು ಪಾಸಾಗಿದ್ದಾರೆ.

ವಿಭಾಗದಲ್ಲಿ ೩೩೬೩ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಆಪೈಕಿ ೩೦೮೯ ಮಂದಿ ಪಾಸಾಗಿದ್ದಾರೆ.ಆಪೈಕಿ ೧೨೧೨ಹುಡುಗರು ,೧೮೭೭ಹುಡುಗಿಯರು ಪಾಸಾಗಿದ್ದಾರೆ.

೨೦೨೪ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೮೭೧೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. ೮೫.೨೮ ಫಲಿತಾಂಶ ಪಡೆದಿದೆ. ಕಳೆದ ಬಾರಿಗಿಂತ ಶೇಕಡವಾರು ಶೇ.೫ರಷ್ಟು ಫಲಿತಾಂಶ ಹೆಚ್ಚಳಗೊಂಡಿದ್ದರು. ರಾಜ್ಯಮಟ್ಟದಲ್ಲಿ ಒಂಭತ್ತನೆ ಸ್ಥಾನ ಪಡೆದುಕೊಳ್ಳುವ ಮೂಲಕ ಮೂರು ಸ್ಥಾನಗಳ ಹಿನ್ನಡೆ ಸಾಧಿಸಿದೆ.

ವಿದ್ಯಾರ್ಥಿಗಳಿಗೆ ವರ್ಕ್‌ಶಾಪ್ ನಡೆಸಲಾಗಿದೆ. ವಿಶೇಷ ತರಗತಿ, ಸರ್ಕಾರಿ ಕಾಲೇಜುಗಳಲ್ಲಿನ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಸ್ಮಾಟ್‌ಕ್ಲಾಸ್ ಮತ್ತು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಶೇಕಡವಾರು ಫಲಿತಾಂಶ ಹೆಚ್ಚಳಗೊಂಡಿದ್ದರು. ರಾಜ್ಯಮಟ್ಟದಲ್ಲಿ ಮೂರು ಸ್ಥಾನ ಕುಸಿತ ಕಂಡಿದೆ

ವಿಜ್ಞಾನ ವಿಭಾಗದಲ್ಲಿ ಸೆಂಟ್ ಮೇರಿಸ್ ಕಾಲೇಜಿನ ಕೆ.ಆರ್.ಅನನ್ಯ ೬೦೦ ಅಂಕಗಳಿಗೆ ೫೯೪ ಅಂಕಗಳನ್ನು ಶೇ.೯೯ ರಷ್ಟು ಗಳಿಸುವ ಮೂಲಕ ಈ ವಿಭಾಗದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ತಂದೆ ರಾಘವೇಂದ್ರ ಉಳ್ಳೂರ ಕೆ. ಅವರು ನ್ಯಾಯಾಲಯ ಇಲಾಖೆಯಲ್ಲಿ ತೀರ್ಪು ಬರಹಗಾರರಾಗಿ ಕಾರ್ಯನಿರ್ವಹಿ ಸುತ್ತಿದ್ದಾರೆ. ತಾಯಿ ಕೆ.ಎಸ್.ಅಂಬಿಕಾ ಮೇಸ್ಕಾಂ ಇಲಾಖೆಯಲ್ಲಿ ಹಿರಿಯ ಸಹಾಯಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಕಲಾ ವಿಭಾಗದಲ್ಲಿ ಕೊಪ್ಪ ತಾಲೂಕಿನ ಕೊಪ್ಪ ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಜೇಶ್ವರಿ ಜಿಲ್ಲೆಗೆ ಟಾಪರ್ ಆಗಿದ್ದು, ೬೦೦ ಅಂಗಳಿಗೆ ೫೮೪ ಅಂಕಗಳಿಸುವ ಮೂಲಕ ಶೇ. ೯೭.೩೩ ಪಡೆದಿದ್ದು, ಜಿಲ್ಲೆಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ತಂದೆ ವೆಂಕಟೇಶ ಮೂರ್ತಿ ಮತ್ತು ತಾಯಿ ಗೀತಾ ಕೃಷಿಕರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೃಂಗೇರಿ ಪಟ್ಟಣದ ಬಿಜಿಎಸ್ ಕಾಲೇಜಿನ ಬಿ.ಆರ್.ಮೈಥಲಿ ೬೦೦ ಅಂಕಗಳಿಗೆ ೫೯೧ ಶೇ.೯೮.೫೦ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಐದನೇ ಸ್ಥಾನ ಪಡೆದುಕೊಂಡಿದ್ದಾಳೆ. ಶೃಂಗೇರಿ ತಾಲೂಕಿನ ಬಿಳುವಿನಕೊಡಿಗೆ ಮಾವಿನಕಟ್ಟೆಯ ರಾಜಗೋಪಾಲ್ ಭಟ್ ಹಾಗೂ ಬಿ.ಆರ್.ಉಮಾ ಅವರ ಪುತ್ರಿಯಾಗಿದ್ದು, ಕೃಷಿ ಕುಂಟುಂಬದವರು.

ಶೃಂಗೇರಿಯ ಬಿಜಿಎಸ್ ಶಾಲೆ, ಚಿಕ್ಕಮಗಳೂರು ನಗರದ ಸೈಂಟ್‌ಮೇರಿಸ್‌ಶಾಲೆ, ಸಾಯಿ ಏಂಜೆಲ್ಸ್,ನರಸಿಂಹರಾಜಪುರದ ಮೌಂಟ್‌ಕಾರ್ಮೆಲ್, ಕೊಪ್ಪತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವಕಾಲೇಜು, ಕಡೂರು ತಾಲೂಕು ಕಾಮನ ಕೆರೆಯ ಮೊರಾರ್ಜಿದೇಸಾಯಿ ಪದವಿಪೂರ್ವಕಾಲೇಜು ವಸತಿಶಾಲೆ, ತೇಗೂರಿನ ಮೊರಾರ್ಜಿದೇಸಾಯಿ ವಸತಿಶಾಲೆ, ಮೂಡಿಗೆರೆಯ ಸೆಂಟ್‌ಮಾರ್ಥಸ್ ಪದವಿಪೂರ್ವ ಕಾಲೇಜುಗಳು ಶೇ.೧೦೦ ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ.

ಮಲೆನಾಡು ವಿದ್ಯಾಸಂಸ್ಥೆಯ ಎಸ್.ಎಸ್.ಎಂ. ಪದವಿಪೂರ್ವಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.೮೭.೩೮ ಫಲಿತಾಂಶ ಲಭಿಸಿದೆ.

In the second PUC result Chikkamagaluru district is ranked ninth in the state