ಭಾರತದ ಪ್ರತಿಷ್ಠಿತ ಇಂಡಿಯನ್ ಆಯಿಲ್ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಟ್ರೇಡ್ ಅಪ್ರೆಂಟಿಸ್ ಹಾಗೂ ವಿವಿಧ 300 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಇರುವ ಅರ್ಹ ವಿದ್ಯಾರ್ಥಿಗಳು ಡಿಸೆಂಬರ್ 27 2021ರ ಒಳಗೆ ದಾಖಲೆ ಜೊತೆ ಅರ್ಜಿ ಸಲ್ಲಿಸಬಹುದು.

ಟ್ರೇಡ್ ಅಪ್ರೆಂಟಿಸ್ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಇನ್ಸ್ಟ್ರೂಮೆಂಟ್ ಮೆಕ್ಯಾನಿಕ್, ಮಷಿನಿಸ್ಟ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಮುಂತಾದ ತಾಂತ್ರಿಕ ಹುದ್ದೆಗಳಿವೆ.

ವಿದ್ಯಾರ್ಹತೆ
ಯಾವುದೇ ವಿದ್ಯಾಲಯದಿಂದ10 ಹಾಗೂ12 ಪಾಸ್ ಅಥವಾ ಐ ಟಿ ಐ ನಲ್ಲಿ ಟ್ರೇಡ್ ಅನುಭವ ಹೊಂದಿರಬೇಕು.
ರಾಜ್ಯವಾರು ಹುದ್ದೆಗಳ ವಿವರ
ತಮಿಳುನಾಡು ಹಾಗೂ ಪುದುಚೇರಿ: 84 ಹುದ್ದೆಗಳು
ಕರ್ನಾಟಕ: 52
ಕೇರಳ: 49ಆಂಧ್ರಪ್ರದೇಶ: 5
ತೆಲಂಗಾಣ: 60

ಯಾರು ಅರ್ಜಿ ಸಲ್ಲಿಸಬಹುದು?
ಕನಿಷ್ಠ18 ಹಾಗೂ ಗರಿಷ್ಟ 24 ವಯಸ್ಸಿನ 10/12 ಪಾಸ್ ಆದ ಯಾರೂ ಅರ್ಜಿ ಸಲ್ಲಿಸಲು ಸಾಧ್ಯ. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಇದೆ.

ನೇಮಕಾತಿ ಪ್ರಕ್ರಿಯೆ
ಕಂಪ್ಯೂಟರ್ ಪರೀಕ್ಷೆ, ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 40% ಅಂಕ ಪಡೆದು ಇಂಟರ್ವ್ಯೂ ಹಂತಕ್ಕೆ ಅರ್ಹರಾಗಬಹುದು. ಇದು 12 ತಿಂಗಳ ಟ್ರೇಡ್ ಅಪ್ರಂಟಿಸ್ ಆಗಿರಲಿದೆ. ಆಯ್ಕೆ ಆದವರಿಗೆ ಸ್ಟೈಫಂಡ್ ಸಿಗಲಿದೆ.

ಅರ್ಜಿ ಸಲ್ಲಿಸುವ ವಿಧಾನ
ಇಂಡಿಯನ್ ಆಯಿಲ್ ಅಧಿಕೃತ ವೆಬ್ಸೈಟ್ ನಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ. ಇದಕ್ಕೂ ಮುನ್ನ ಅಪ್ರೆಂಟಿಸ್ ಶಿಪ್ ಇಂಡಿಯಾ ವೆನ್ ತಾಣದಲ್ಲಿ ಲಾಗಿನ್ ಆಗಿ. ಅರ್ಜಿ ಸಲ್ಲಿಸುವ ಮೊದಲು ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ. ನಂತರ ತಮಿಳುನಾಡು, ತೆಲಂಗಾಣ, ಕೇರಳ ಕರ್ನಾಟಕ ಹೀಗೆ ಬರುವ ಆಯ್ಕೆಗಳಲ್ಲಿ ನಿಮ್ಮ ರಾಜ್ಯ ಆಯ್ಕೆ ಮಾಡಿ. ನಂತರ ವಯಸ್ಸು, ವಿದ್ಯಾಭ್ಯಾಸ, ಅನುಭವ, ಜಾತಿ ಹೀಗೆ ವಿವಿಧ ವಿವರಗಳನ್ನು ನೀಡಿ. ತಾಂತ್ರಿಕ/ ತಾಂತ್ರಿಕೇತರ ಹುದ್ದೆ ಅರ್ಜಿ ನಮೂನೆಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ. ತದನಂತರ ಅಗತ್ಯ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ.

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪೇ ಮಾಡಬಹುದಾಗಿದೆ.( ಡೆಬಿಟ್ ಕಾರ್ಡ್, ರುಪೇ ಕಾರ್ಡ್, ವೀಸಾ ಕಾರ್ಡ್, ಆನ್ಲೈನ್ ಕಾರ್ಡ್, ಮೊಬೈಲ್ ವಾಲೆಟ್, ಯುಪಿಐ ಮೂಲಕವೂ ಪಾವತಿ ಮಾಡಬಹುದು) ಪಾವತಿ ಮಾಡಿದ ನಂತರ, ಇ-ರೆಸಿಪ್ಟ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಬೋಟ್ ವಾಚ್ ಮಿಸ್ಟಿಕ್ ಡಿಸೆಂಬರ್ 15ಕ್ಕೆ ಬಿಡುಗಡೆ: ಕಡಿಮೆ ಬೆಲೆಗೆ ಬೆಸ್ಟ್ ಸ್ಮಾರ್ಟ್‌ವಾಚ್

(Indian oil corporation recruitment 2021 apply for trade apprentice jobs)