ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಕಾಶ್ ಛೋಪ್ರ ತಮ್ಮ ಯು-ಟ್ಯೂಬ್ ಚಾನಲ್‌ನಲ್ಲಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದು ಸದ್ಯ ತಂಡದ ಬೌಲಿಂಗ್ ವಿಭಾಗ ಹೆಚ್ಚು ಬಲಗೊಳ್ಳಬೇಕಾಗಿದೆ ಎಂದಿದ್ದಾರೆ.

ಭಾರತ ತಂಡ ಮೊನ್ನೆ (ಅ.24) ತಮ್ಮ ಪ್ರಥಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕೀಸ್ತಾನದ ವಿರದ್ಧ ಸೋಲಲು ತಂಡದ ಕಳಪೆ ಬೌಲಿಂಗ್ ಪ್ರದರ್ಶನವೇ ಕಾರಣವೆಂದಿರುವ ಅವರು ಮುಂದಿನ ಪಂದ್ಯಗಳಿಗೆ ಬೇರೆ ಇಬ್ಬರು ಬೌಲರ್‌ಗಳೊಂದಿಗೆ ಭಾರತ ಕಣಕ್ಕಿಳಿಯಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಬೌಲರ್‌ಗಳೂ ಸರಾಸರಿ ಪ್ರತಿ ಓವರ್‌ನಲ್ಲಿ 7 ರನ್‌ಗೂ ಹೆಚ್ಚು ರನ್ ಕೊಟ್ಟಿದ್ದು ಒಂದೂ ವಿಕೆಟ್‌ ಪಡೆಯಲು ವಿಫಲರಾಗಿದ್ದು ಭಾರತ ಹೀನಾಯವಾಗಿ ಪಂದ್ಯ ಸೋಲಲು ಕಾರಣವಾಯಿತೆಂದಿದ್ದಾರೆ. ನಮ್ಮ ಬೌಲರ್‌ಗಳನ್ನು ಪಾಕೀಸ್ತಾನೀ ಆರಂಭಿಕರಿಬ್ಬರೇ ಲೀಲಾಜಾಲವಾಗಿ ಎದುರಿಸಿ ವಿಕೆಟ್‌ ನಷ್ಟವಿಲ್ಲದೇ ಜಯ ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಭಾರತದ ಬೌಲಿಂಗ್ ವಿಭಾಗದ ವೈಫಲ್ಯದ ಬಗ್ಗೆ ಮಾತನಾಡಿರುವ ಅವರು ಭುವನೇಶ್ವರ್ ಕುಮಾರ್‌ರವರು ಮೊದಲಿನಂತೆ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುತ್ತಿಲ್ಲ ಹಾಗೂ ಹೆಚ್ಚಿನ T20 ಪಂದ್ಯಗಳಲ್ಲಿ ಮೊಹಮದ್‌ ಶಮೀ ಅತ್ಯಂತ ಸಾಧಾರಣ ಸಾಧನೆ ಮಾಡಿದ್ದು ಇವರಿಬ್ಬರ ಸ್ಥಾನಗಳಲ್ಲಿ ಬೇರೆಯವರು ಆಡಿದರೆ ಉತ್ತಮ ಸಾಧನೆ ನಿರೀಕ್ಷಿಸಬಹುದು ಎಂದಿದ್ದಾರೆ.

ಸ್ಪಿನ್ನರ್ ಆಗಿ ರವೀಂದ್ರ ಜಡೇಜ ಆಯ್ಕೆಯನ್ನೂ ಪ್ರಶ್ನಿಸಿರುವ ಅವರು ಮಧ್ಯಮ ಓವರ್‌ಗಳಲ್ಲಿ ಒಬ್ಬ ಆಕ್ರಮಣಕಾರಿ ಸ್ಪಿನ್ನರ್‌ನ ಅವಶ್ಯಕತೆ ಹೆಚ್ಚಿದ್ದು ಕೇವಲ ರನ್ ತಡೆಯುವ ಉದ್ದೇಶದ ರಕ್ಷಣಾತ್ಮಕ ತಂತ್ರ ಯಾವುದೇ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.

Farmer Indian cricketer Aakash Chopra wants Bhuvaneshwar and Shami to be rested and new players selected to strengthen Indian bowling

ಇದನ್ನೂ ಓದಿ: ICC T20 World Cup: ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯ ರಾಷ್ಟ್ರ ಧರ್ಮಕ್ಕೆ ವಿರುದ್ಧ ಎಂದ ರಾಮ್‌ದೇವ್

ಇದನ್ನೂ ಓದಿ: ಭಾರತದ ವಿರುದ್ಧ ಪಂದ್ಯ ಗೆದ್ದರೆ ಬ್ಲಾಂಕ್ ಚೆಕ್: ಪಾಕ್‌ ಕ್ರಿಕೆಟ್‌ ಬೋರ್ಡ್‌ಗೆ ಉದ್ಯಮಿ ಭರವಸೆ