ಭಾರತದ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಮಂಗಳವಾರ (ಅ.19) ಬಿಡುಗಡೆ ಮಾಡಿರುವ ತನ್ನ ಅಧಿಸೂಚನೆಯಲ್ಲಿ 2022-23ನೇ ಸಾಲಿನ ಪ್ರೊಬೆಷನರಿ ಅಧಿಕಾರಿಗಳ ಆಯ್ಕೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಸಂಪೂರ್ಣ ಮಾಹಿತಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ibps.in ನಲ್ಲಿ ಲಭ್ಯವಿದ್ದು ಆಸಕ್ತರು ಹೆಚ್ಚಿನ ವಿವರಗಳನ್ನು ವೆಬ್‌ಸೈಟ್‌ ಮೂಲಕವೂ ಪಡೆಯಬಹುದಾಗಿದೆ.

ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಸಿದ್ದು ಇದು ಒಂದು ಪೂರ್ವಭಾವಿ ಆನ್‌ಲೈನ್ ಪರೀಕ್ಷೆ ಹಾಗೂ ಒಂದು ಆನ್‌ಲೈನ್‌ ಮುಖ್ಯ ಪರೀಕ್ಷೆಗಳನ್ನು ಒಳಗೊಂಡಿರುತ್ತದಲ್ಲದೆ ಪಾಲುದಾರ ಬ್ಯಾಂಕ್‌ಗಳು ನಡೆಸುವ ಹಾಗೂ ನೋಡಲ್ ಬ್ಯಾಂಕ್‌ನಿಂದ ಸಂಯೋಜಿಸಲ್ಪಡುವ ಸಂದರ್ಶನವೂ ಇರುತ್ತದೆ. ಈ ಎಲ್ಲಾ 3 ಹಂತಗಳನ್ನೂ ಯಶಸ್ವಿಯಾಗಿ ಪೂರೈಸುವ ಅಭ್ಯರ್ಥಿಗನ್ನು ತಾತ್ಕಾಲಿಕವಾಗಿ ಪಾಲುದಾರ ಬ್ಯಾಂಕೊಂದರಲ್ಲಿ ನಿಯೋಜಿಸಲಾಗುತ್ತದೆ. ಸರಿಸುಮಾರು 4135 ಖಾಲಿ ಹುದ್ದೆಗಳನ್ನು ಈ ಪ್ರಕ್ರಿಯೆಯ ಮೂಲಕ ತುಂಬಲಾಗುತ್ತಿದೆ. ಅಕ್ಟೋಬರ್ 20ರಿಂದ ಈ ಆನ್‌ಲೈನ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ನವೆಂಬರ್ 10, 2021ರಂದು ಕಡೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕ ಹಾಗೂ ಮಾಹಿತಿ ಶುಲ್ಕಗಳನ್ನೂ ಅಭ್ಯರ್ಥಿಗಳು ಇದೇ ಅವಧಿಯಲ್ಲಿ ತುಂಬಬೇಕಾಗುತ್ತದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಅಂಗೀಕೃತವಾಗಿರುವ ವಿಶ್ವವಿದ್ಯಾಲಯವೊಂದರಲ್ಲಿ ಯಾವುದೇ ವಿ‍ಷಯದಲ್ಲಿ ಪದವೀಧರ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಭ್ಯರ್ಥಿಯು ಆನ್‌ಲೈನ್ ಅರ್ಜಿ ಸಲ್ಲಿಸುವ ದಿನಾಂಕದಂದು ಅಧಿಕೃತ ಅಂಕಪಟ್ಟಿ ಅಥವಾ ಪಡೆದ ಅಂಕಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಯ ವಯಸ್ಸು 20 ರಿಂದ 30 ವರ್ಷಗಳ ಒಳಗಿರಬೇಕು ( ದಿನಾಂಕ 02/10/1991 ರ ಮೊದಲು ಅಥವಾ ದಿನಾಂಕ 01.10.2011ರ ನಂತರ ಹುಟ್ಟಿದವರಾಗಿರಬಾರದು, ಎರಡೂ ದಿನಾಂಕಗಳು ಸೇರಿ).

ಪೂರ್ವಭಾವಿ ಆನ್‌ಲೈನ್ ಪರೀಕ್ಷೆಯ ಹಂಗಾಮಿ ದಿನಾಂಕಗಳು ಡಿಸೆಂಬರ್ 4 ಮತ್ತು 11, 2021 ಆಗಿದ್ದು ಫಲಿತಾಂಶಗಳನ್ನು ಡಿಸೆಂಬರ್ 2021 ಅಥವಾ ಜನವರಿ 2022ರಲ್ಲಿ ಘೋಷಿಸಲಾಗುವುದು. ಮುಖ್ಯ ಆನ್ಲೈನ್ ಪರೀಕ್ಷೆಯು ಜನವರಿ 2022ರಲ್ಲಿ ನಡೆಯಲಿದ್ದು ಅದರ ಫಲಿತಾಂಶವನ್ನು ಜನವರಿ ಅಥವಾ ಫೆಬ್ರವರಿ 2022ರಲ್ಲಿ ಘೋಷಿಸಲಾಗುವುದು. ಸಂದರ್ಶನದ ದಿನಾಂಕ ಫೆಬ್ರವರಿ ಅಥವಾ ಮಾರ್ಚ್ 2022ರಲ್ಲಿ ನಡೆಯಲಿದ್ದು ಅಭ್ಯರ್ಥಿಯ ಆಯ್ಕೆಯು ಏಪ್ರಿಲ್ 2022ರಲ್ಲಿ ನಡೆಯಲಿದೆ.

IBPS Notification to fill 4135 positions of probationary officers

ಇದನ್ನೂ ಓದಿ: 59 ಲಕ್ಷ ಉದ್ಯೋಗ ಸೃಷ್ಟಿಗೆ ನೂತನ ಯೋಜನೆ ರೂಪಿಸಿದ ಕೆಂದ್ರ ಸರ್ಕಾರ
ಇದನ್ನೂ ಓದಿ: ಉತ್ತರಾಖಂಡದ ಮೇಘಸ್ಫೋಟ, ಸತ್ತವರ ಸಂಖ್ಯೆ 47ಕ್ಕೆ ಏರಿಕೆ