ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸತತ ಎರಡನೇ ವರ್ಷ ಎಸಿಐನ( ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್) ‘ವಾಯ್ಸ್ ಆಫ್ ದಿ ಕಸ್ಟಮರ್’ ಮಾನ್ಯತೆ ಪಡೆದಿದೆ. ಕೋವಿಡ್ ಸಮಯದಲ್ಲಿ ಪ್ರಯಾಣಿಗರ ಅಗತ್ಯಗಳನ್ನು ಅರಿತು ಉತ್ತಮ ಸೇವೆ ನೀಡಿದ್ದಕ್ಕಾಗಿ ಎಸಿಐನ ವಾಯ್ಸ್ ಆಫ್ ದಿ ಕಸ್ಟಮರ್ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಸಿಐನ ಏರ್‌ಪೋರ್ಟ್ ಸರ್ವೀಸ್ ಕ್ವಾಲಿಟಿ ಕಾರ್ಯಕ್ರಮದಲ್ಲಿ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ಉತ್ತಮ ಸಾಧನೆ ಮಾಡಿದೆ. ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಿದೆ. ಇದರಿಂದ ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್ ವಾಯ್ಸ್ ಆಫ್ ದಿ ಕಸ್ಟಮರ್ ಜಾಗತಿಕ ಮನ್ನಣೆ ಪಡೆದಿದೆ.

Kempegowda International Airport

ಇದನ್ನೂ ಓದಿ: Puneeth Rajkumar Biography: ನೀನೇ ರಾಜಕುಮಾರ: ಪುನೀತ್ ರಾಜ್‍ಕುಮಾರ್ ಬಯೋಗ್ರಫಿ

ಇದನ್ನೂ ಓದಿ: Hijab: ಹಿಜಾಬ್ ಹಾಕಿಸಲು – ತೆಗೆಸಲು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಲಿ