ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಸಿಹಿಸುದ್ದಿ ನೀಡಿದ್ದು, ಪೌರಾಡಳಿತ ನಿರ್ದೇಶನಾಲಯ ಅಡಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ KPSC ಯಿಂದ ಅಧಿಸೂಚನೆ ( KPSC Recruitment 2022) ಹೊರಡಿಸಲಾಗಿದೆ.

ಕೆಪಿಎಸ್ ಸಿ ಯು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ನಗರ/ಪುರಸಭೆ/ಪಟ್ಟಣಪಂಚಾಯಿತಿ) ಗ್ರೂಪ್ ಸಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಮುಖ ದಿನಾಂಕಗಳು
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 31-03-2022.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-04-2022.
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 30-04-2022.

ಹುದ್ದೆಗಳ ಮಾಹಿತಿ
ಕಿರಿಯ ಅಭಿಯಂತರರು (ಸಿವಿಲ್)- 89 ಹುದ್ದೆಗಳು.
ಕಿರಿಯ ಆರೋಗ್ಯ ನಿರೀಕ್ಷಿಕರು -57.
ಎಲೆಕ್ಟ್ರಿಷಿಯನ್ ಗ್ರೇಡ್ -1 – 02.
ಎಲೆಕ್ಟ್ರಿಷಿಯನ್ ಗ್ರೇಡ್ -2 -10.
ನೀರು ಸರಬರಾಜು ಅಪರೇಟರ್ -89.
ಸಹಾಯಕ ನೀರು ಸರಬರಾಜು ಆಪರೇಟರ್ -163.
ಒಟ್ಟುಹುದ್ದೆಗಳು ಕಲ್ಯಾಣ ಕರ್ನಾಟಕ 281 ಸೇರಿ 410 ಹುದ್ದೆಗಳು.
ವಿದ್ಯಾರ್ಹತೆ: Diploma, PUC, SSLC, ITI.

KPSC Recruitment 2022