ದೀಪಾವಳಿ ಅಮಾವಾಸ್ಯೆಯ ದಿನ ಅಂದರೆ ಅಕ್ಟೊಬರ್ 25ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದ್ದು, ಸಂಜೆ 4:29ಕ್ಕೆ ಆರಂಭವಾಗಿ 5:42ಕ್ಕೆ ಸೂರ್ಯಗ್ರಹಣ ಕೊನೆಗೊಳ್ಳಲಿದೆ. ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದು, ಗ್ರಹಣದ ಗರಿಷ್ಠ ಗೋಚರತೆ ವೇಳೆ, ಅಸ್ತಂಗತವಾಗುತ್ತಿರುವ ಸೂರ್ಯನ ಬಿಂಬದ ಶೇ 4ರಷ್ಟು ಭಾಗವನ್ನು ಚಂದ್ರಬಿಂಬವು ಮುಚ್ಚಲಿದೆ ಎಂದು ಅವರು ಹೇಳಿದ್ದಾರೆ. ಇದು ಈ ವರ್ಷದ ಕೊನೆಯ ಗ್ರಹಣವಾಗಿದ್ದು, ಗ್ರಹಣವನ್ನು ಬರಿಗಣ್ಣಿನಿಂದ ನೋಡಬೇಡಿ.

ಲಕ್ಷ್ಮೀ ಪೂಜೆ ದಿನವೇ ಸೂರ್ಯಗ್ರಹಣ: ಒಳ್ಳೆಯದ್ದೋ, ಕೆಟ್ಟದ್ದೋ..
ಇನ್ನು, ಅಕ್ಟೋಬರ್‌ 25 ರ ಅಮಾವಾಸ್ಯೆಯಂದು ಸಂಭವಿಸುವ ಸೂರ್ಯಗ್ರಹಣ ಭಾರತ, ಯುರೋಪ್‌ ಸೇರಿದಂತೆ ಹಲವು ದೇಶಗಳಲ್ಲಿ ಗೋಚರಿಸಲಿದೆ. ದೀಪಾವಳಿಯ ಹಬ್ಬದ ಸಮಯದಲ್ಲೇ ಈ ಗ್ರಹಣ ಸಂಭವಿಸಲಿದೆ. ಕರ್ನಾಟಕದಲ್ಲಿ ಸೂರ್ಯಗ್ರಹಣ ಸಂಜೆ 5.12ಕ್ಕೆ ಆರಂಭವಾಗಲಿದ್ದು, 5.49ಕ್ಕೆ ಗರಿಷ್ಠ ಮಟ್ಟ ತಲುಪಿ, 5.56ಕ್ಕೆ ಅಂತ್ಯವಾಗಲಿದೆ.
ಕೆಲವೆಡೆ ಲಕ್ಷ್ಮೀ ಪೂಜೆಯೂ ಅದೇ ದಿನ ಇರುವುದರಿಂದ ಗ್ರಹಣದಿಂದ ಕೆಟ್ಟದಾಗುತ್ತದೋ ಅಥವಾ ಒಳ್ಳೆಯದಾಗುತ್ತದೋ ಅನ್ನುವ ಬಗ್ಗೆ ಜ್ಯೋತಿಷಿಗಳ ನಡುವೆ ಚರ್ಚೆಯಾಗುತ್ತಿದೆ.