ಚಿಕ್ಕಮಗಳೂರು: ಕಾಡುಹಂದಿ ಭೇಟೆಗೆ ಹಾಕಲಾಗಿದ್ದ ಉರುಳಿಗೆ ಚಿರತೆಮರಿ ಸಿಲುಕಿ ಸಾವನಪ್ಪಿರುವ ಘಟನೆ ತಾಲೂಕಿನ ಹುಳಿ ಯಾರದಹಳ್ಳಿಯಲ್ಲಿ ನಡೆದಿದೆ.

ಕಾಡು ಹಂದಿ ಭೇಟೆಗೆಂದು ಜಮೀನಿನಲ್ಲಿ ಉರುಳು ಹಾಕಲಾಗಿತ್ತು. ಶುಕ್ರವಾರ ಮಧ್ಯರಾತ್ರಿ ವೇಳೆ ಉರುಳಿಗೆ ಸಿಲುಕಿದ ಚಿರತೆ ನರಳಾಡುತ್ತಿತ್ತು. ಚಿರತೆಮರಿ ಉರುಳಿಗೆ ಸಿಲುಕಿ ನರಳಾಡುತ್ತಿದ್ದನ್ನು ದಾರಿ ಹೋಕರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ರಕ್ಷಿಸಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕಾರಿ ಯಾಗದೆ ಸಾವನಪ್ಪಿದೆ. ಚಿರತೆ ಮರಿ ಉರುಳಿನಲ್ಲಿದ್ದಾಗ ಚೆನ್ನಾಗಿಯೇ ಇತ್ತು. ಆದರೆ, ವೈದ್ಯರು ಹೆಚ್ಚಿನ ಡೋಸ್ ಅರವಳಿಕೆ ಮದ್ದು ನೀಡಿದ್ದರಿಂದ ಚಿರತೆ ಮರಿ ಸಾವನಪ್ಪಿದೆ ಎಂದು ಪರಿಸರಾಸಕ್ತರು ದೂರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನುರಿತ ಅರವಳಿಕೆ ಚುಚ್ಚು ಮದ್ದು ನೀಡುವ ತಜ್ಞವೈದ್ಯರಿಲ್ಲ. ಇದರಿಂದ ಅಪಾ ಯಕ್ಕೆ ಸಿಲುಕಿರುವ ಕಾಡುಪ್ರಾಣಿಗಳನ್ನು ರಕ್ಷಣೆ ಮಾಡುವಾಗ ಸಾವನಪ್ಪುತ್ತಿವೆ. ಈ ಹಿನ್ನಲೆಯಲ್ಲಿ ಇಂತಹ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು. ತಜ್ಞ ಅರವಳಿಕೆ ವೈದ್ಯರನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ.

Leopard cub dies in Yaradahalli