ಮೆಟಾ ಒಡೆತನದ ಮೆಸೇಜಿಂಗ್‌ ಪ್ಲಾಟಫಾರ್ಮ್‌ ವಾಟ್ಸಾಪ್‌ (WhatsApp) ಕಳೆದೊಂದು ವರ್ಷದಿಂದ ಬಳಕೆದಾರರಿಗಾಗಿ ನಿರಂತವಾಗಿ ಅಪ್ಡೇಟ್‌ಗಳನ್ನು ನೀಡುತ್ತಿದೆ. ಈಗ ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಎಂಬಂತೆ  ಬಳಕೆದಾರರಿಗೆ ಸಂದೇಶವನ್ನು ಕಳುಹಿಸಿದ ನಂತರ ಅದನ್ನು ಡಿಲೀಟ್‌ (Delete Message) ಮಾಡಲು ಎರಡು ದಿನಗಳ ಕಾಲಾವಕಾಶವನ್ನು ನೀಡುವ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ .‌

ಬಳಕೆದಾರರು ಕಳುಹಿಸಿದ ಸಂದೇಶವನ್ನು ಅಳಿಸಲು ಕೇವಲ ಒಂದು ಗಂಟೆ ಬದಲಾಗಿ ಎರಡು ದಿನಗಳಿಗಿಂತ ಸ್ವಲ್ಪ ಹೆಚ್ಚು ಸಮಯವನ್ನು ಹೊಂದಿರುತ್ತಾರೆ. ಈ ಹೊಸ ವೈಶಿಷ್ಟ್ಯವನ್ನು ಬಳಸಲು ಪ್ರಾರಂಭಿಸಲು, ನೀವು ಸಂದೇಶಗಳನ್ನು ಕಳುಹಿಸಿದ ವಾಟ್ಸಾಪ್ ಗುಂಪು ಅಥವಾ ವೈಯಕ್ತಿಕ ಚಾಟನ್ನು ತೆರೆಯಿರಿ. ನೀವು ಡಿಲೀಟ್‌ ಮಾಡಲು ಬಯಸುವ ವಿಷಯವನ್ನು ಟ್ಯಾಪ್ ಮಾಡಿ ಮತ್ತು ಹಿಡಿದಿಟ್ಟುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ, “Delete” ಕ್ಲಿಕ್ ಮಾಡಿ, ತದನಂತರ “Delete for everyone” ಅಥವಾ “Delete for me” ಆಯ್ಕೆಮಾಡಿ.

ಆದರೆ ಈ ವೈಶಿಷ್ಟ್ಯವನ್ನು ಬಳಸಲು  ಮೇಸೆಜ್ ಸ್ವೀಕರಿಸಿದವರೂ ಕೂಡ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿರಬೇಕು ಮತ್ತು ಒಂದು ವೇಳೆ ನೀವು ಡೀಲಿಟ್‌ ಮಾಡಿದ ಸಂದೇಶ ಅಳಿಸದಿದ್ದರೆ ನೀವು ಯಾವುದೇ ಅಧಿಸೂಚನೆಯನ್ನು ಸ್ವೀಕರಿಸುವುದಿಲ್ಲ.

ಈ ಹೊಸ ವೈಶಿಷ್ಟ್ಯ  ಆಪಲ್‌ನ ಐಮೇಸೆಜ  (iMessage) ಇನ್‌ಸ್ಟೆಂಟ್ ಮೆಸೇಜಿಂಗ್ ಸೇವೆಗಿಂತ ಸ್ವಲ್ಪ ಹೆಚ್ಚಿನ ಪ್ರಯೋಜನವನ್ನು ನೀಡುವ ಉಪಯುಕ್ತ ಹೊಸ ವೈಶಿಷ್ಟ್ಯವಾಗಿರಬಹುದು. ಆಪಲ್, ಪ್ರಸ್ತುತ ಈ ವೈಶಿಷ್ಟ್ಯವನ್ನು ಒದಗಿಸುವುದಿಲ್ಲ ಮತ್ತು ಅದರ ಹೊಸ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ ಆಪರೇಟಿಂಗ್ ಸಿಸ್ಟಮ್‌ಗಳು ಬಿಡುಗಡೆಯಾಗುವವರೆಗೆ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ.

ಇನ್ನು  ವಾಟ್ಸಾಪ್‌ ಇತ್ತೀಚೆಗೆ ಹಲವಾರು ಹೊಸ ಪ್ರೈವಸಿ ವೈಶಿಷ್ಟ್ಯಗಳನ್ನು ಘೋಷಿಸಿದ್ದು, ಈ ವೈಶಿಷ್ಟ್ಯಗಳು ಶೀಘ್ರದಲ್ಲೇ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ವರದಿಗಳು ತಿಳಿಸಿವೆ. ನಿಮ್ಮ ‘ಆನ್‌ಲೈನ್’ ಸ್ಟೇಟಸ್ ಮರೆಮಾಡುವ ಸಾಮರ್ಥ್ಯ, ಬಳಕೆದಾರರಿಗೆ ತಿಳಿಸದೆಯೇ ವಾಟ್ಸಾಒ ಗ್ರೂಪ್‌ಗಳಿಂದ ಸೈಲೆಂಟಾಗಿ ಹೊರ ಹೋಗುವ ಮತ್ತು ಕೆಲವು ಸಂದೇಶಗಳಿಗೆ ಸ್ಕ್ರೀನ್‌ಶಾಟ್‌ಗಳನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಈ ವೈಶಿಷ್ಟ್ಯಗಳು ಒಳಗೊಂಡಿವೆ. ವಾಟ್ಸಾಪ್‌ನ ಮೂಲ ಕಂಪನಿ ಮೆಟಾ  ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್  ಮುಂಬರುವ ಹೊಸ ವಾಟ್ಸಾಪ್ ವೈಶಿಷ್ಟ್ಯಗಳ ಬಗ್ಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.

Messages sent after 2 days can be deleted