ಮೊಟೊರೋಲಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎರಡು ಹೊಸ ಫೋನ್‌ ಗಳನ್ನು ಬಿಡುಗಡೆಗೊಳಿಸಿದ್ದು, ಮೊಟೊರೋಲಾ ಕಂಪನಿಯು ತನ್ನ ಟ್ವಿಟರ್ ಖಾತೆಯ ಮೂಲಕ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಮೊಟೊರೋಲಾ ಎಡ್ಜ್ 30 ಅಲ್ಟ್ರಾ ಮತ್ತು ಮೊಟೊರೋಲಾ ಎಡ್ಜ್ 30 ಫ್ಯೂಸನ್ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಫ್ಲಿಪ್‌ಕಾರ್ಟ್ ನಲ್ಲಿ ಮಾರಾಟಕ್ಕೆ ಸಿಗಲಿದೆ.

ಎಡ್ಜ್ 30 ಅಲ್ಟ್ರಾ ಅತ್ಯಂತ ವಿಶೇಷ ಫೀಚರ್‌ಗಳನ್ನು ಒಳಗೊಂಡಿದ್ದು 200 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಅನ್ನು ಹೊಂದಿದೆ. 6.7 ಇಂಚಿನ ಕರ್ವ್ ಡಿಸ್‌ಪ್ಲೇಯನ್ನು ಹೊಂದಿದೆ . ಇದರ ಜೊತೆಗೆ 144Hz ರಿಫ್ರೆಶ್ ರೇಟ್ ಮತ್ತು IP52 ರೇಟಿಂಗ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ.

ಎಡ್ಜ್ 30 ಅಲ್ಟ್ರಾ ಪ್ರೀಮಿಯಂ ಖರೀದಿದಾರರನ್ನು ಗುರಿಯಾಗಿರಿಸಿಕೊಂಡಿದ್ದು ಫೋನ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 888+ SoC, 144Hz ಓಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.ಈ ಫೋನ್ ಫ್ರಂಟ್‌ನಲ್ಲಿ 32 – ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಂಪನಿಯು ಅಳವಡಿಸಿದೆ.

ಎಡ್ಜ್ 30 ಅಲ್ಟ್ರಾದಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯಲ್ಲಿ 200 – ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕ, 50- ಮೆಗಾ ಪಿಕ್ಸೆಲ್ ಸೆಕೆಂಡರಿ ಸಂವೇದಕ ಮತ್ತು 12-ಮೆಗಾ ಪಿಕ್ಸೆಲ್ ಮೂರನೇ ಸಂವೇದಕವನ್ನು ಸೇರಿಸಲಾಗಿದೆ. 60 ಮೆಗಾ ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಮುಂಭಾಗದ ಕ್ಯಾಮೆರಾವನ್ನು ಸೇರಿಸಲಾಗಿದೆ. 68W ಟರ್ಬೋಪವರ್ ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುವ 4,400 mAh ಬ್ಯಾಟರಿ ಮತ್ತು USB ಟೈಪ್-C ಚಾರ್ಜಿಂಗ್ ಕನೆಕ್ಟರ್ ಮೊಟೊರೊಲಾ ಎಡ್ಜ್ 30 ಫ್ಯೂಷನ್ ನಲ್ಲಿ ಲಭ್ಯವಿದೆ.

ಎಡ್ಜ್ 30 ಅಲ್ಟ್ರಾ 6.67 ಇಂಚಿನ ಪೂರ್ಣ ಎಚ್‌ಡಿ ಓಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು 144Hz ದರವನ್ನು ಬೆಂಬಲಿಸುತ್ತದೆ ಅಂತೆಯೇ ಡಿವೈಸ್ ಕಾರ್ನಿಂಗ್ ಗೊರಿಲ್ಲಾ 5 ಅನ್ನು ಬಳಸುತ್ತದೆ. ಸಾಧನವು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 8+ Gen 1 ಚಿಪ್‌ನಿಂದ ಚಾಲಿತವಾಗಿದ್ದು, 12GB LPDDR5 ರ‍್ಯಾಮ್ ಮತ್ತು 256GB UFS 3.1 ಸ್ಟೋರೆಜ್ ಕೆಪಾಸಿಟಿಯನ್ನು ಹೊಂದಿದೆ.ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 888+ SoC ಮೂಲಕ 12GB ವರೆಗೆ LPDDR5 RAM ಅನ್ನು ಒಳಗೊಂಡಿದ್ದು, ಕ್ಯಾಮೆರಾ-ವೈಸ್, ಎಡ್ಜ್ 30 ಫ್ಯೂಷನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್‌ನೊಂದಿಗೆ ಬರುತ್ತದೆ.

ಮುಂಭಾಗದಲ್ಲಿ, 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಎಡ್ಜ್ 30 ಅಲ್ಟ್ರಾ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಸಹ ಒಳಗೊಂಡಿದೆ. ಇದು 200-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್, 50-ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 12-ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಒಳಗೊಂಡಿದ್ದು, ಮುಂಭಾಗದಲ್ಲಿ, 60-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಮೊಟೊರೋಲಾ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನನ್ನು ಇಂಟರ್ ಸ್ಟೆಲ್ಲರ್ ಬ್ಲ್ಯಾಕ್ ಮತ್ತು ಸ್ಟಾರ್ ಲೈಟ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಮತ್ತು ಏಕೈಕ 8GB RAM + 128GB ಸ್ಟೋರೇಜ್ ಮಾದರಿಯಲ್ಲಿ 59,999 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಈ ಸ್ಮಾರ್ಟ್‌ಫೋನಿನ ಬಿಡುಗಡೆ ಕೊಡುಗೆಯಾಗಿ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್ ಮಾರಾಟದ ಸಮಯದಲ್ಲಿ 54,999 ರೂ. ಬೆಲೆಯಲ್ಲಿ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.

ಇಷ್ಟೇ ಅಲ್ಲದೇ, ಜಿಯೋ ಗ್ರಾಹಕರಿಗೆ 40 ರೀಚಾರ್ಜ್ ವೋಚರ್‌ಗಳ ರೂಪದಲ್ಲಿ 4,000 ಕ್ಯಾಶ್‌ಬ್ಯಾಕ್ ಅನ್ನು ಸಹ ಒದಗಿಸಲಾಗಿದೆ ಮತ್ತು Myntra, Zee5, OYO, Ixigo ಮತ್ತು Ferns & Petals ಮೂಲಕ 10,699ರೂ. ಮೌಲ್ಯದ ವೋಚರ್‌ಗಳನ್ನು ಪಡೆದುಕೊಳ್ಳಬಹುದು ಎಂದು ಕಂಪೆನಿ ಹೇಳಿದೆ.