ಚಿಕ್ಕಮಗಳೂರು: ಬೆಳೆಗಾರರು ಎರಡಕ್ಕಿಂತ ಹೆಚ್ಚು ಬಂದೂಕುಗಳನ್ನು ಹೊಂದಿರುವವರು ಅವರ ಕುಟುಂಬದವರಿಗೆ ಬಂದೂಕು ವರ್ಗಾವಣೆ ಮಾಡಲು ನಾಗರೀಕ ಬಂದೂಕು ತರಬೇತಿ(nagarik banduku tarabeti) ನೀಡುವಂತೆ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘ ಒತ್ತಾಯಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ, ಅರಣ್ಯ ಇಲಾಖೆಗೆ ಸೋಮವಾರ ಮನವಿ ಸಲ್ಲಿಸಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಮಲೆನಾಡು ಭಾಗದ ಕಾಫಿ ಬೆಳೆಗಾರರರು ಬೆಳೆ ಮತ್ತು ತಮ್ಮ ಆತ್ಮ ರಕ್ಷಣೆ ಉದ್ದೇಶದಿಂದ ಬಂದೂಕು ಪರವಾನಗಿ ಹೊಂದಿದ್ದು ಸರ್ಕಾರಿ ಆದೇಶದಂತೆ ಒಬ್ಬ ಬೆಳೆಗಾರ ಎರಡಕ್ಕಿಂತ ಹೆಚ್ಚು ಬಂದೂಕುಗಳನ್ನು ಹೊಂದುವಂತಿಲ್ಲ, ಆದರೆ ಸರ್ಕಾರಿ ಆದೇಶದ ಪೂರ್ವದಲ್ಲಿಯೇ ಎರಡಕ್ಕಿಂತ ಹೆಚ್ಚು ಬಂದೂಕುಗಳ ಪರವಾನಗಿಯನ್ನು ಬೆಳೆಗಾರರು ಹೊಂದಿದ್ದು, ಇದೀಗ ಅವುಗಳನ್ನು ಅವರ ಕುಟುಂಬಕ್ಕೆ ವರ್ಗಾವಣೆಗೊಳಿಸಲು ಪೊಲೀಸ್ ನಾಗರೀಕ ತರಬೇತಿ ಪಡೆದಿಲ್ಲ ಎಂಬ ಕಾರಣಕ್ಕೆ ಅರ್ಜಿಗಳು ತಿರಸ್ಕøತವಾಗುತ್ತಿವೆ ಎಂದರು.

ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿರುವ ವ್ಯಕ್ತಿ ಮೂರು ವರ್ಷಕ್ಕೊಮ್ಮೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದಾಗ ಒಂದು ಬಂದೂಕು ಠೇವಣಿ ಇಡಲು ಅಥವಾ ಕುಟುಂಬದವರಿಗೆ ವರ್ಗಾವಣೆ ಮಾಡಲು ತಿಳಿಸುತ್ತಾರೆ, ಆದರೆ ಮರಣ ಹೊಂದಿದ ವ್ಯಕ್ತಿಯ ಕುಟುಂಬದವರಿಗೆ ಬಂದೂಕು ವರ್ಗಾವಣೆ ಕಷ್ಟವಾಗುತ್ತಿದ್ದು, ಇದರಿಂದ ನವೀಕರಣ ಪಡೆಯಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಮಲೆನಾಡು ಭಾಗದಲ್ಲಿ ಬಹುದೂರದಲ್ಲಿ ಒಂದೊಂದು ಮನೆಗಳಿದ್ದು ಬೆಳೆ ಹಾಗೂ ಆತ್ಮರಕ್ಷಣೆಗೆ ಬಂದೂಕು ಹೊಂದುವುದು ಅಗತ್ಯವಿದೆ, ಆದರೆ ಬಂದೂಕನ್ನು ಕುಟುಂಬದವರಿಗೆ ವರ್ಗಾವಣೆಗೊಳಿಸಲು ಅನುಕೂಲವಾಗುವಂತೆ ನಾಗರೀಕ ಬಂದೂಕು ತರಬೇತಿ ನಡೆಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ, ಉಪಾಧ್ಯಕ್ಷ ಲಕ್ಷ್ಮಣ್‍ಗೌಡ, ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ನಿರ್ದೇಶಕರಾದ ಟಿ.ಡಿ. ಮಲ್ಲೇಶ್, ಕಳವಾಸೆ ರವಿ, ವ್ಯವಸ್ಥಾಪಕ ರಾಜು, ಸಿಇಒ ಕುಳ್ಳೇಗೌಡ, ಇದ್ದರು.

nagarik banduku tarabeti

ಇದನ್ನು ಓದಿ: Happy International Women’s Day 2022 : ಅಂತರರಾಷ್ಟ್ರೀಯ ಮಹಿಳಾ ದಿನ 2022 : ಅಮ್ಮ ನೀನೇ ನಮ್ಮೆಲ್ಲರ ನಾಯಕಿ!