ಬೆಂಗಳೂರು (ಮೇ 07): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಕಳೆದ ಒಂಭತ್ತು ದಿನಗಳಲ್ಲಿ 18 ಬೃಹತ್‌ ಸಮಾವೇಶ ಹಾಗೂ 6 ರೋಡ್‌ ಶೋಗಳ ಮೂಲಕ ಚುನಾವಣಾ ಪ್ರಚಾರವನ್ನು ಮಾಡಿದರು.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ (Prime minister Narendra Modi tour in Karnataka) ಅವರ ಹಾದಿಯಾಗಿ, ಕೇಂದ್ರ ಸಚಿವರಾದ ಅಮಿತ್ ಶಾ (Amit Shah), ಸ್ಮೃತಿ ಇರಾನಿ (Smriti Irani), ರಾಜನಾಥ್‌ ಸಿಂಗ್ (Rajanath Sigh), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (UP CM Yogi adityanath), ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Devendra Fadnavis), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಸೇರಿದಂತೆ ಹಲವು ನಾಯಕರು ರಾಜ್ಯದಲ್ಲಿ ಪ್ರಚಾರವನ್ನು ಮಾಡಿದ್ದಾರೆ. ಇನ್ನು ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಏ.29ರಿಂದ ಮೇ 7ರವರೆಗೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಒಂಭತ್ತು ದಿನಗಳಲ್ಲಿ 18 ಸಮಾವೇಶ (18 Convention) 6 ರೋಡ್‌ ಶೋಗಳನ್ನು (6 Road Show) ನಡೆಸಿದ್ದಾರೆ. ಮೊದಲ ಸಮಾವೇಶವನ್ನು ಹುಮ್ನಾಬಾದ್‌ನಲ್ಲಿ (Humnabad) ರ್ಯಾಲಿ ಆರಂಭಿಸಿ, ಕೊನೆಯ ದಿನ ನಂಜನಗೂಡಿನಲ್ಲಿ (Nanjanagudu) ಬಹಿರಂಗ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ.

ಹುಮನಾಬಾದ್‌ ಏಪ್ರಿಲ್ 29 (Humnabad)
ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರ ‘ವಿಷಪೂರಿತ ಹಾವು’ ಟೀಕೆ ಮಾಡಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ ಅವರು ಕಾಂಗ್ರೆಸ್‌ಗೆ ನಾಯಕರು ತಮ್ಮ ಮೇಲೆ 91 ಬಾರಿ ವಿವಿಧ ರೀತಿಯ ನಿಂದನೆಗಳನ್ನು ಮಾಡಿದ್ದಾರೆ ಎಂದು ಹೇಳಿದರು. ಈ ಹಿಂದೆ ಬಿ.ಆರ್. ಅಂಬೇಡ್ಕರ್ ಮತ್ತು ವಿ ಡಿ ಸಾವರ್ಕರ್ ಅವರಂತಹವರನ್ನು ಕಾಂಗ್ರೆಸ್ ಇದೇ ರೀತಿ ನಿಂದಿಸಿ ಅವಮಾನಿಸಿತ್ತು. ಈಗ ಕಾಂಗ್ರೆಸ್‌ ನಿಂದನೆ ಮಾಡಿರುವುದನ್ನು ನಾನು ಕೂಡ ‘ಗೌರವ’ ಎಂದು ಪರಿಗಣಿಸಿದ್ದೇನೆ ಎಂದು ಮೋದಿ ಹೇಳಿದರು.

ವಿಜಯಪುರ, ಏಪ್ರಿಲ್ 29 (Vijayapura)
ವಿಜಯಪುರ ನಗರದಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಗೆ ಬಹುಮತಕ್ಕಾಗಿ ಮನವಿ ಮಾಡಿದರು. “ಡಬಲ್ ಇಂಜಿನ್ ಸರ್ಕಾರವು ಕರ್ನಾಟಕವನ್ನು ಭಾರತದಲ್ಲಿ ನಂಬರ್ 1 ಮಾಡುತ್ತದೆ” ಎಂದು ಹೇಳಿದರು. ಕಾಂಗ್ರೆಸ್ ವಿವಿಧ ಯೋಜನೆಗಳ ಹಣವನ್ನು ಮಧ್ಯವರ್ತಿಗಳಿಗೆ ವರ್ಗಾಯಿಸುತ್ತಿದೆ. ರೈತರ ಸಂಕಷ್ಟಗಳನ್ನು ಕಡೆಗಣಿಸಿದೆ ಎಂದು ಮೋದಿ ಆರೋಪಿಸಿದರು.

ಕುಡುಚಿ, ಏಪ್ರಿಲ್ 29 (Kuduchi)
ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಪಕ್ಷ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆ ಘೋಷಣೆಯಾದ ನಂತರ ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ತಮ್ಮ ಪ್ರಚಾರದ ಮೂರನೇ ರ್ಯಾಲಿಯಾಗಿದೆ. ರಾಜ್ಯದಲ್ಲಿ ಬಲಿಷ್ಠ ಮತ್ತು ಸ್ಥಿರವಾದ ಬಿಜೆಪಿ ಸರ್ಕಾರವನ್ನು ತರಲು ಕರ್ನಾಟಕದ ಜನರು ನಿರ್ಧರಿಸಿದ್ದಾರೆ ಎಂದು ಮೋದಿ ಹೇಳಿದರು.

ಬೆಂಗಳೂರು ಏಪ್ರಿಲ್ 29 (Bengaluru Road Show)
ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಬೆಂಗಳೂರಿನಲ್ಲಿ 5.5 ಕಿಮೀ ಮೆಗಾ ರೋಡ್‌ಶೋನಲ್ಲಿ ಭಾಗವಹಿಸಿ ಅಪಾರ ಜನಸ್ತೋಮದಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದರು. ಕೇಸರಿ ಟೋಪಿ ಧರಿಸಿದ್ದ ಮೋದಿ ಅವರೊಂದಿಗೆ ಬೆಂಗಳೂರು ಉತ್ತರ ಸಂಸದ ಡಿವಿ ಸದಾನಂದಗೌಡ ಮತ್ತು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಚಲವಾದಿ ನಾರಾಯಣಸ್ವಾಮಿ ಹಾಜರಿದ್ದರು. ರೋಡ್‌ಶೋ ಅಂತ್ಯದಲ್ಲಿ, ಮೋದಿ ಅವರು ಜನರತ್ತ ಕೈ ಬೀಸುತ್ತಾ ಸ್ವಲ್ಪ ಸಮಯದವರೆಗೆ ರಸ್ತೆಯಲ್ಲಿ ನಡೆದರು.

ಚನ್ನಪಟ್ಟಣ ಏಪ್ರಿಲ್‌ 30 (Channapattana)
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, ಚನ್ನಪಟ್ಟಣದಲ್ಲಿ ಬಿಜೆಪಿ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಶೇ.85 ಕಮಿಷನ್” ನಿಯಮ ಅಳವಡಿಸಿಕೊಂಡಿತ್ತು. ಇನ್ನು ಜಡಿಎಸ್‌ ‘ಪ್ರೈವೇಟ್ ಲಿಮಿಟೆಡ್’; ಆಗಿ ಕೆಲಸ ಮಾಡಿದೆ ಎಂದು ಟೀಕೆ ಮಾಡಿದರು. ಅವರು ಜೆಡಿಎಸ್, ಕಾಂಗ್ರೆಸ್‌ನ ‘ಬಿ ಟೀಮ್’ ಎಂದು ಟೀಕೆ ಮಾಡಿದರು.

ಕೋಲಾರ, ಏಪ್ರಿಲ್ 30 (Kolara)
ಕೋಲಾರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದರು. ‘ರಾಜ್ಯದ ಅಭಿವೃದ್ಧಿಗೆ ಗ್ರ್ಯಾಂಡ್ ಓಲ್ಡ್ ಪಕ್ಷವು ದೊಡ್ಡ ಅಡ್ಡಿಯಾಗಿದೆ’ ಎಂದು ಹೇಳಿದರು. ಖರ್ಗೆಯವರ ವಿಷಪೂರಿತ ಹಾವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೇ 10 ರಂದು ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಬೇಲೂರು, ಏಪ್ರಿಲ್ 30 (Beluru)
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, ಗಾಂಧಿ ಕುಟುಂಬವನ್ನು ಉಲ್ಲೇಖಿಸಿ ಕಾಂಗ್ರೆಸ್‌ನ ‘ರಾಜ ಕುಟುಂಬ’ ಮತ್ತು ಅದರ ನಿಕಟ ಸಹಚರರು ಸಾವಿರಾರು ಕೋಟಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇನ್ನು ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾಂಗ್ರೆಸ್‌ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಹೇಳಿದರು.

ಮೈಸೂರು, ಏಪ್ರಿಲ್ 30 (Mysuru Road Show)
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಏ.30) ಸಂಜೆ ಮೈಸೂರಿನಲ್ಲಿ ಮೆಗಾ ರೋಡ್‌ ಶೋ ನಡೆಸಿದರು. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ಅವರೊಂದಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಕೆಎಸ್ ಈಶ್ವರಪ್ಪ ಮತ್ತು ಎಸ್‌.ಎ. ರಾಮದಾಸ್ ಇದ್ದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನರತ್ತ ಕೈಬೀಸಿದರು.

ಚಿತ್ರದುರ್ಗ ಮೇ 2 (Chitradurga)
ಚಿತ್ರಗುರ್ಗಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಭಯೋತ್ಪಾದಕರನ್ನು ಸಮಾಧಾನಪಡಿಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬೆನ್ನು ಮುರಿದಿದೆ. ಈ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳ ಆಡಳಿತದಿಂದ ರಾಜ್ಯಕ್ಕೆ ಎಂದಿಗೂ ಲಾಭವಾಗುವುದಿಲ್ಲ ಎಂದು ಹೇಳಿದರು.

ಹೊಸಪೇಟೆ, ಮೇ 2 (Hosapete)
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದ್ದು, ಹನುಮಂತನನ್ನು ಪೂಜಿಸುವವರಿಗೆ ಬೀಗ ಹಾಕಲು ಬಯಸುತ್ತಿದೆ. “ಕಾಂಗ್ರೆಸ್ ಈ ಹಿಂದೆ ಭಗವಾನ್ ರಾಮನನ್ನು ಲಾಕ್ ಮಾಡಿತ್ತು, ಈಗ ‘ಜೈ ಬಜರಂಗ್ ಬಲಿ’ (ಹನುಮಾನ್ ಜಯವಾಗಲಿ) ಎಂದು ಘೋಷಣೆ ಮಾಡುವವರಿಗೆ ಬೀಗ ಹಾಕಲು ಬಯಸಿದೆ ಎಂದು ಟೀಕೆ ಮಾಡಿದರು.

ಸಿಂಧನೂರು, ಮೇ 2 (Sindhanuru)
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ಮೋದಿ, ಯುದ್ಧ ಪೀಡಿತ ಸುಡಾನ್ ಮತ್ತು ಉಕ್ರೇನ್‌ನಿಂದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿರುವಾಗ ಮತ್ತು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಕಲಬುರಗಿ, ಮೇ 2 (Kalaburgi Road Show)
ಉತ್ತರ ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ ನಡೆಸಿದರು. ಕಲಬುರಗಿ ನಗರದ ಪ್ರಮುಖ ರಸ್ತೆಗಳಲ್ಲಿ ‘ಮೋದಿ-ಮೋದಿ’ ಘೋಷಣೆ ಮೊಳಗಿತು. ಮೇ 10ರ ವಿಧಾನಸಭೆ ಚುನಾವಣೆಗೆ ಪ್ರಧಾನಿಯವರ ಹೊಸ ಘೋಷಣೆ: “ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ’ ಎಂಬ ಘೋಷಣೆಗಳ ನಡುವೆ ರೋಡ್‌ ಶೋ ಸಾಗಿತು.

ಮೂಡಬಿದರೆ, ಮೇ 3 (Mudabidare)
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಕಾಂಗ್ರೆಸ್ ದೇಶವಿರೋಧಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, ‘ರಾಜ್ಯವು ಭಾರತದಲ್ಲಿ ನಂ.1 ಆಗಬೇಕೆಂದು ನಾವು ಬಯಸುತ್ತೇವೆ ಎಂದರು.

ಆಂಕೋಲಾ, ಮೇ 3 (Ankola)
ಉತ್ತರ ಕನ್ನಡ ಜಿಲ್ಲೆಉ ಆಂಕೋಲಾದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ತಮ್ಮ ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ “ಜೈ ಬಜರಂಗ್ ಬಲಿ” ಘೋಷಣೆ ಕೂಗಿದರು. ಕಾಂಗ್ರೆಸ್ ಮತ್ತು ಅದರ ನಾಯಕರು ಬಜರಂಗಲಿಯನ್ನು ದ್ವೇಷಿಸುತ್ತಾರೆ ಎಂದು ಹೇಳಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್, ನಿವೃತ್ತಿಯಾಗುತ್ತಿರುವ ತನ್ನ ನಾಯಕನ ಹೆಸರಿನಲ್ಲಿ ಮತ ಕೇಳುತ್ತಿದೆ. ಇನ್ನು ಬೇರೆ ರೀತಿಯಲ್ಲಿ ಅಂದರೆ ಮೋದಿಯನ್ನು ನಿಂದಿಸುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಬೈಲಹೊಂಗಲ, ಮೇ 3 (Bailahongala)
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದ ಜನರು ದುರುಪಯೋಗ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಶಾರ್ಟ್‌ಕಟ್‌ ಆಡಳಿತ ನಡೆಸುತ್ತಿವೆ ಎಂದು ಆರೋಪಿಸಿದರು. ದೇಶದ ಇಂದಿನ 21ನೇ ಶತಮಾನದ ಯುವಕರು ತಮ್ಮ ಭವಿಷ್ಯವನ್ನು ಇಂತಹವರ ಕೈಗೆ ಕೊಟ್ಟು ಮೊಟಕುಗೊಳಿಸಲು ಬಯಸುವುದಿಲ್ಲ ಎಂದು ಹೇಳಿದರು.

ಬಳ್ಳಾರಿ, ಮೇ 5 (Ballari)
ಬಳ್ಳಾರಿ ನಗರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿವಾದಾತ್ಮಕ ಚಿತ್ರ “ದಿ ಕೇರಳ ಸ್ಟೋರಿ” ಅನ್ನು ಉಲ್ಲೇಖಿಸಿದರು. ಕಾಂಗ್ರೆಸ್ “ಭಯೋತ್ಪಾದಕ ಗುಂಪುಗಳೊಂದಿಗೆ ಹಿಂಬಾಗಿಲ ಮಾಹಿತಿ’ ಹೊಂದಿದೆ ಎಂದು ಆರೋಪಿಸಿದರು.

ತುಮಕೂರು, ಮೇ 5 (Tumakuru)
ತುಮಕೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜನತಾದಳ (ಜಾತ್ಯತೀತ) ವಿರುದ್ಧವೂ ವಾಗ್ದಾಳಿ ನಡೆಸಿದರು. ಜೆಡಿಎಸ್ ಗೆ ಹಾಕುವ ಪ್ರತಿ ಮತವೂ ಕರ್ನಾಟಕದಲ್ಲಿ ‘ದುರ್ಬಲ, ಅಸ್ಥಿರ ಸರ್ಕಾರ’ ವನ್ನು ಖಚಿತಪಡಿಸುತ್ತದೆ ಎಂದು ಮೋದಿ ಹೇಳಿದರು. ಕರ್ನಾಟಕದಲ್ಲಿ ಬಿಜೆಪಿಗೆ ಭರ್ಜರಿ ಜಯ ಸಿಗಲಿದೆ ಎಂಬುದಕ್ಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮವೇ ಸಾಕ್ಷಿಯಾಗಿದೆ ಎಂದರು.

ಬೆಂಗಳೂರು ಮೇ 6 (Bengaluru Road Show)
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ( ಮೇ 6) ಬೆಳಗ್ಗೆ ನಗರದಲ್ಲಿ 26 ಕಿ.ಮೀ ರೋಡ್ ಶೋ ನಡೆಸಿದರು. ಜೆಪಿ ನಗರ 7ನೇ ಹಂತದಿಂದ ಬೆಳಗ್ಗೆ 10 ಗಂಟೆಗೆ ಆರಂಭವಾದ ರೋಡ್‌ಶೋ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮಲ್ಲೇಶ್ವರಂನ ಸ್ಯಾಂಕಿ ರಸ್ತೆಯಲ್ಲಿ ಮುಕ್ತಾಯಗೊಂಡಿತು. ಸಂಸದರಾದ ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ) ಮತ್ತು ಪಿಸಿ ಮೋಹನ್ (ಬೆಂಗಳೂರು ಸೆಂಟ್ರಲ್) ಅವರು ಪ್ರಚಾರ ವಾಹನದಲ್ಲಿ ಮೋದಿ ಅವರೊಂದಿಗೆ ಇದ್ದರು.

ಬಾದಾಮಿ ಮೇ 6 (Badami)
ಬಾದಾಮಿಯ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ಕಾಂಗ್ರೆಸ್ಸಿಗರು ಚುನಾವಣೆಗೂ ಮೊದಲು ಗ್ಯಾರಂಟಿ ಕೊಡುತ್ತಾರೆ. ಆಮೇಲೆ ಕಮಿಟಿ ಹೆಸರು ಹೇಳಿಕೊಂಡು ಜನರನ್ನು ವಂಚಿಸುತ್ತಾರೆ. ಇಂಥ ಟ್ರ್ಯಾಕ್‌ ರೆಕಾರ್ಡ್‌ ಇರುವ ಕಾಂಗ್ರೆಸ್‌ ಅನ್ನು ನಂಬಬೇಡಿ. ಕಾಂಗ್ರೆಸ್‌ ಗ್ಯಾರಂಟಿ ಬರೇ ಸುಳ್ಳು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಬಾದಾಮಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ಸಿದ್ರಾಮಯ್ಯ ಮಾಡಿಲ್ಲ, ಬದಲಾಗಿ ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡಿದೆ ಎಂದರು.

ಹಾವೇರಿ ಮೇ 6 (Haveri)
ಹಾವೇರಿಯಲ್ಲಿ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸರ್ವಜ್ಞ ಮತ್ತು ಕನಕದಾಸರ ನಾಡು ಹಾವೇರಿ ಜನತೆಗೆ ನನ್ನ ನಮಸ್ಕಾರಗಳು ಎಂದು ಹೇಳಿದರು. ಹಾವೇರಿ ಜಿಲ್ಲೆ ಭಕ್ತ ಕನಕದಾಸರ ಜನ್ಮಸ್ಥಳ. ಭಕ್ತಿಯ ಮೂಲಕ ಸಾಮಾಜಿಕ ಸದ್ಭಾವನೆಗೆ ಭಕ್ತ ಕನಕದಾಸರು ಸಾಗಿದ ಹಾದಿಯಲ್ಲಿ ನಾವೂ ಕೆಲಸ ಮಾಡುತ್ತಿದ್ದೇವೆ.  ಡಬಲ್‌ ಎಂಜಿನ್‌ ಸರ್ಕಾರ ಮೂರೂವರೆ ವರ್ಷ ಉತ್ತಮ ಕೆಲಸ ಮಾಡಿದೆ. ಹಾವೇರಿ ವಿಕಾಸದ ಹಾದಿಯಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಮೆಡಿಕಲ್‌ ಕಾಲೇಜ್‌, ಎಂಜಿನಿಯರಿಂಗ್‌ ಕಾಲೇಜ್‌, ವಿಶ್ವವಿದ್ಯಾಲಯ, ಮೆಗಾ ಡೇರಿ, ರಸ್ತೆ-ರೈಲು ಸಂಪರ್ಕದ ಕೆಲಸ ಮಾಡಿದೆ ಎಂದು ಹೇಳಿದರು.

ಬೆಂಗಳೂರು ರೋಡ್‌ ಶೋ ಮೇ 7 (Bengaluru Road Show)
ಬೆಂಗಳೂರಿನಲ್ಲಿ ಭಾನುವಾರ ( ಮೇ.07) ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ರೋಡ್ ಶೋ ನಡೆಸಿದರು. ಬೆಳಗ್ಗೆ 8 ಗಂಟೆಯಿಂದ ರಾಜಭವನ ರಸ್ತೆ, ಮೇಖ್ರಿ ವೃತ್ತ, ರೇಸ್‌ಕೋರ್ಸ್ ವೃತ್ತ, ಟಿ ಚೌಡಯ್ಯ ರಸ್ತೆ,ರೋಡ್ ಶೋ ಆರಂಭಗೊಂಡು, ಮಧ್ಯಾಹ್ನ 12 ಗಂಟೆಗೆ ಹಲಸೂರು ಮೆಟ್ರೋ ನಿಲ್ದಾಣಟ್ರಿನಿಟಿ ಜಂಕ್ಷನ್‌ನಲ್ಲಿ ರೋಡ್‌ ಶೋ ಅಂತ್ಯಗೊಳಿಸಿದರು. ಪ್ರಧಾನಿ ಮೋದಿ ಎರಡನೇ ಹಂತದ ಬೆಂಗಳೂರು ರೋಡ್‌ಶೋದಲ್ಲಿ 10 ಕಿಲೋಮೀಟರ್ ಸಂಚರಿಸಿದರು.

ಶಿವಮೊಗ್ಗ ಮೇ 7 (Shivamogga)
ಶಿವಮೊಗ್ಗ ನಗರದಲ್ಲಿ ನಡೆದ ಬಿಜೆಪಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ಕಾರಣ ಬೆಳಗ್ಗೆ ಬಹುಬೇಗನೆ ರೋಡ್ ಶೋ ಆರಂಭಿಸಿ, ಅಷ್ಟೇ ವೇಗದಲ್ಲಿ ಮುಗಿಸಿದ್ದೇವೆ. ಇಂದು ಮಕ್ಕಳ ಭವಿಷ್ಯದ ಪರೀಕ್ಷೆ. ನಮ್ಮ ಪರೀಕ್ಷೆ ಮೇ.10ಕ್ಕೆ ನಡೆಯಲಿದೆ. ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆಯಾಗುವ ವಿಶ್ವಾಸವಿದೆ ಎಂದರು.

ನಂಜನಗೂಡು ಮೇ 7 (Nanjanagudu)
ನಂಜನಗೂಡು ನಗರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವದರು, ವಿದೇಶಿ ಶಕ್ತಿಗಳನ್ನು ಭಾರತ ವಿಷಯದಲ್ಲಿ ಮಧ್ಯಪ್ರವೇಶಿಸಲು ಕಾಂಗ್ರೆಸ್ ಹೇಳುತ್ತಿದೆ. ಈ ಮೂಲಕ ಕಾಂಗ್ರೆಸ್ ಭಾರತದ ಶಕ್ತಿಯನ್ನೇ ಪ್ರಶ್ನಿಸುತ್ತಿದೆ. ಭಾರತದ ಆಂತರಿಕ ಸಮಸ್ಯೆಗಳಿಗೆ ವಿದೇಶಿ ಶಕ್ತಿಗಳನ್ನು ಆಮಂತ್ರಿಸುವ ಕಾಂಗ್ರೆಸ್ ಭಾರತವನ್ನೇ ಅವಮಾನಿಸುತ್ತಿದೆ ಎಂದು ಕಿಡಿಕಾರಿದರು.

Prime Minister Modi’s campaign is over