ಮೀರತ್‌: ಭಾರತೀಯ ಕಿಸಾನ್‌ ಯೂನಿಯನ್ (ಬಿಕೆಯು) ಪ್ರಮುಖ ನಾಯಕ ರಾಕೇಶ್‌ ಟಿಕೈತ್‌ ಬುಧವಾರ ಇಲ್ಲಿ ನೀಡಿದ ತಮ್ಮ ಹೇಳಿಕೆಯಲ್ಲಿ “ಇನ್ನು ಮುಂದೆ ತಾವು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲವೆಂದೂ ಹಾಗೂ ತಮ್ಮ ಹೆಸರನ್ನಾಗಲೀ ಅಥವಾ ಭಾವಚಿತ್ರವನ್ನಾಗಲೀ ಯಾವುದೇ ರಾಜಕೀಯ ಪಕ್ಷಗಳೂ ತಮ್ಮ ಭಿತ್ತಿಚಿತ್ರಗಳಲ್ಲಿ ಅಥವಾ ಪ್ರಚಾರಸಾಮಗ್ರಿಗಳಲ್ಲಿ ಬಳಸಕೂಡದೆಂದು” ತಿಳಿಸಿದ್ದಾರೆ.

ದೆಹಲಿಯಿಂದ ಮರಳಿದ ಅವರಿಗೆ ಮೀರತ್‌ನ ರೈತರಿಂದ ವಿಶ್ವಾಸಭರಿತ ಸ್ವಾಗತ ದೊರೆಯಿತು. ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ಈ ಹೇಳಿಕೆಯನ್ನು ನೀಡಿದರು.

ಸಂಯುಕ್ತ ಕಿಸಾನ್‌ ಮೋರ್ಚಾದಡಿಯಲ್ಲಿ ಸಂಘಟಿತರಾಗಿದ್ದ ರೈತರು “ಕನಿಷ್ಠ ಬೆಂಬಲ ಬೆಲೆಗಳನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸುವುದಾಗಿ ಹಾಗೂ ರೈತರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯುವುದಾಗಿ” ಡಿಸೆಂಬರ್ 9ರಂದು ಕೇಂದ್ರ ಸರಕಾರವು ಪತ್ರದ ಮೂಲಕ ಲಿಖಿತ ಆಶ್ವಾಸನೆಯನ್ನು ನೀಡಿದ ನಂತರ ತಮ್ಮ ಒಂದು ವರ್ಷ ಅವಧಿಯ ಸುಧೀರ್ಘ ಚಳುವಳಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು.

ರೈತರು ತಮ್ಮ-ತಮ್ಮ ಸ್ವಸ್ಥಳಗಳೆಡೆಗೆ ಟ್ರ್ಯಾಕ್ಟರ್‌ ಹಾಗೂ ಟ್ರಕ್‌ಗಳಲ್ಲಿ ತಂಡೋಪತಂಡವಾಗಿ ಮರಳುತ್ತಿದ್ದು ಕೇಂದ್ರ ಸರಕಾರದ ರೈತ ಕಾನೂನುಗಳ ವಿರುದ್ಧ ಪ್ರತಿಭಟಿಸಲು ರಾಷ್ಟ್ರೀಯ ರಾಜಧಾನಿ ಪ್ರದೇಶದ ಹೊರವಲಯದ ಸಿಂಘು, ಘಾಝಿಪುರ್, ಹಾಗೂ ಟಿಕ್ರಿ ಪ್ರದೇಶಳಲ್ಲಿ ಒಂದುಗೂಡಿದ್ದರು.

Rakesh Tikait not to contest any elections in future and no party can use his name or photo in its posters

ಇದನ್ನೂ ಓದಿ: ಬೆಳೆನಾಶವಾಗಿ ಬೀದಿಗೆ ಬಂದಿರುವ ರೈತರ ನೆರವಿಗೆ ಸರ್ಕಾರ ತಕ್ಷಣವೇ ದಾವಿಸಬೇಕು

ಇದನ್ನೂ ಓದಿ: Ready for talks with farmers: ರಾಜ್ಯದಲ್ಲಿ ಕೃಷಿ ಕಾಯ್ದೆಗಳ ವಾಪಸಾತಿ ಕುರಿತು ರೈತರೊಂದಿಗೆ ಮಾತುಕತೆಗೆ ಸಿದ್ದ