ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022 ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಅಬ್ಬರದ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈ ಸಲವೂ ಕಪ್  ಮಿಸ್ ಆಗಿದ್ದು, ಟೂರ್ನಿಯಿಂದ ಹೊರ ಬಿದ್ದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ ಕೇವಲ 7 ರನ್ ಗಳಿಗೆ ಸಂಜು ಸ್ಯಾಮ್ಸನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, ನಾಯಕ ಫಾಪ್ ಡು ಪ್ಲೆಸಿಸ್ 25 ರನ್ ಗಳಿಸಿ, ಆರ್ ಅಶ್ವಿನ್ ಗೆ ಕ್ಯಾಚ್ ನೀಡಿ ಫೆವಿಲಿಯನ್ ಹಾದಿ ಹಿಡಿದರು.

ಕಳೆದ ಎಲಿಮಿನೆಟರ್ ಪಂದ್ಯದಲ್ಲಿ ಶತಕ ಗಳಿಸಿ ಗಮನ ಸೆಳೆದಿದ್ದ ರಜತ್ ಪಾಟಿದಾರ್ ಈ ಪಂದ್ಯದಲ್ಲಿ 58 ರನ್ ಗಳಿಸಲಷ್ಟೇ ಶಕ್ತರಾದರು. ಗ್ಲೆನ್ ಮ್ಯಾಕ್ಸ್ ವೆಲ್ 24, ಮಹಿಪಾಲ್ ಲೊಮ್ರೊರ್ 8, ದಿನೇಶ್ ಕಾರ್ತಿಕ್ 6, ರನ್ ನೀಡಿ ರಿಯಾನ್ ಪರಾಗ್ ಗೆ ಕ್ಯಾಚ್ ನೀಡಿದರು. ಹರ್ಷಲ್ ಪಟೇಲ್, ಜೋಶ್ ಹೇಜಲ್ ವುಡ್ ಕೇವಲ 1 ರನ್ ಗಳಿಸಿ ಔಟಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 158 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡ 18.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ ಫೈನಲ್ ಗೆ ಸುಲಭವಾಗಿ ಲಗ್ಗೆ ಇಟ್ಟಿತು. ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 21 ರನ್ ಗಳಿಸಿದರೆ ಜೋಸ್ ಬಟ್ಲರ್ 60 ಎಸೆತಗಳಲ್ಲಿ 6 ಸಿಕ್ಸರ್ 10 ಬೌಂಡರಿಗಳೊಂದಿಗೆ 106 ರನ್ ಗಳಿಸಿ ತಂಡ ಗೆಲುವಲ್ಲಿ ಪ್ರಮುಖ ಕೊಡುಗೆ ನೀಡಿದರು.

ಸಂಜು ಸ್ಯಾಮ್ಸನ್ 23,ದೇವದತ್ ಪಡಿಕ್ಕಲ್ 9, ಶಿಮ್ರಾನ್ ಹೆಟ್ಮಿಯರ್ 2 ರನ್ ಗಳಿಸಿದರು. ಆರ್ ಸಿಬಿ ಪರ ಜೋಶ್ ಹೇಜಲ್ ವುಡ್ 2 ವಿಕೆಟ್ ಪಡೆದರೆ ವನಿಂದು ಹಸರಂಗ 1 ವಿಕೆಟ್ ಪಡೆದರು. ಮೂರು ವಿಕೆಟ್ ಗಳೊಂದಿಗೆ ರಾಜಸ್ಥಾನ ರಾಯಲ್ಸ್  ಭರ್ಜರಿ ಗೆಲುವು ದಾಖಲಿಸಿತು.

RCB home Rajasthan Royals enter the final

ಇದನ್ನೂ ಓದಿ: Temporary suspension of metro rail traffic: ಶನಿವಾರ ರಾತ್ರಿ 9-30ರಿಂದ ಮೆಟ್ರೋ ರೈಲು ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತ

ಇದನ್ನೂ ಓದಿ: Are the RSS Aryans or Dravidians?: ಆರ್ ಎಸ್ ಎಸ್ ನವರು ಆರ್ಯರಾ ಅಥವಾ ದ್ರಾವಿಡರಾ? ಮೂಲ ಕೆದಕಿದ ಸಿದ್ದರಾಮಯ್ಯ