ದೋಹಾ: ICBF  ಮತ್ತು ಇಸ್ಲಾಮಿಕ್ ಇನ್ಶೂರೆನ್ಸ್ ನಡುವಿನ ಜಂಟಿ ಉಧ್ಯಮವಾಗಿರುವ ಪ್ರವಾಸಿ ಜೀವ ವಿಮಾ ಯೋಜನೆಯ ನೊಂದಣಿ ಅಭಿಯಾನವು  ನುವೈಜಾದ ಇಂಟಿಗ್ರೇಟೆಡ್ ಇಂಡಿಯನ್ ಕಮ್ಯುನಿಟಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸೋಶಿಯಲ್ ಫೋರಂ ಅಧ್ಯಕ್ಷ ಅಯೂಬ್ ಉಳ್ಳಾಲ್ ಅವರು ಐಸಿಬಿಎಫ್ ಅಧ್ಯಕ್ಷ ವಿನೋದ್ ನಾಯರ್ ಅವರಿಗೆ ವಿಮಾ ಯೋಜನೆಯ ನಮೂನೆಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೋಶಿಯಲ್ ಫೋರಂನ ಉಪಾಧ್ಯಕ್ಷ ಅಬ್ದುಲ್ ಸಲಾಂ ಕುನ್ನುಮ್ಮಾಲ್ ಐಸಿಬಿಎಫ್ ವಿಮೆ ಕುರಿತು ವಿವರಿಸಿದರು. ಚಾಲನೆಯ ಭಾಗವಾಗಿ, 250 ಜನರು ವಿಮಾ ಯೋಜನೆಗೆ ಸೇರಿದರು.

ಸಮಾರಂಭದಲ್ಲಿ ಡಾಕ್ಟರ್ ಆಫ್ ಮೆಡಿಸಿನ್ ರೇಡಿಯೋ ಡಯಾಗ್ನಾಸಿಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಡಾ.ಫಾತಿಮಾ ರಯೀಸಾ ಅವರನ್ನು ಐಸಿಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸ್ಲೀಪಿಂಗ್ ಡಿಸಾರ್ಡರ್ ಕುರಿತು ಡಾ.ಸಫ್ವಾನ್ ಅಹ್ಮದ್  ಮಾಹಿತಿ‌  ನೀಡಿದರು. ಸೋಶಿಯಲ್ ಫೋರಂ ಅಧ್ಯಕ್ಷ ಅಯೂಬ್ ಉಳ್ಳಾಲ್, ಐಸಿಬಿಎಫ್ ಅಧ್ಯಕ್ಷ ವಿನೋದ್ ನಾಯರ್, ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಎಎಂಯು ಅಲುಮ್ನಿ ಕತಾರ್ ಅಧ್ಯಕ್ಷ ಡಾ. ಸೈಯದ್ ಜಾಫ್ರಿ, ಡಾ.ಫಾತಿಮಾ ರೈಸಾ ಸಂದೇಶ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಕೆಎಂಸಿಎ ಅಧ್ಯಕ್ಷ ಫಯಾಜ್ ಅಹ್ಮದ್, ಎಸ್‌ಕೆಎಂಡಬ್ಲ್ಯುಎ ಅಧ್ಯಕ್ಷ ಅಬ್ದುಲ್ ರಝಾಕ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಅಧ್ಯಕ್ಷ ಶಫಾಕತ್, ಹಿದಾಯ ಫೌಂಡೇಶನ್ ಮಾಜಿ ಅಧ್ಯಕ್ಷ ಅಹ್ಮದ್ ಸಯೀದ್ ಆಸ್ಸದಿ ಮತ್ತು ಫ್ಯಾಮಿಲಿ ಫ್ರಂಟ್ ಸರ್ಕಲ್ ಉಪಾಧ್ಯಕ್ಷ ಅಸ್ಗರ್ ಖಾನ್ ಉಪಸ್ಥಿತರಿದ್ದರು.

ಸೋಶಿಯಲ್ ಫೋರಂ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಮಹಮ್ಮದ್ ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಒಸಾಮ ಅಹಮದ್ ಧನ್ಯವಾದಗೈದರು.

Registration Campaign of Bima Yojana