ಕೀವ್: ರಷ್ಯಾದ ಬಾಂಬ್‌ ದಾಳಿಯನ್ನು ತಡೆಗಟ್ಟಲು ಉಕ್ರೇನ್‌ನಲ್ಲಿ ಹಾರಾಟ ನಿಷೇಧ ವಲಯ  (Ukraine rejects appeal to stop Russia bombing) ರೂಪಿಸುವಂತೆ ಮಾಡಿದ್ದ ಮನವಿಯನ್ನು ನ್ಯಾಟೋ ತಿರಸ್ಕರಿಸಿದ್ದು, ನ್ಯಾಟೋ ನಿಲುವನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಖಂಡಿಸಿದ್ದಾರೆ.

ಮುಷ್ಕರ, ಸಾವುನೋವುಗಳು ಅನಿವಾರ್ಯವೆಂದು ತಿಳಿದಿದ್ದ ನ್ಯಾಟೋ ಉದ್ದೇಶಪೂರ್ವಕವಾಗಿ ಉಕ್ರೇನ್‌ನ ಆಕಾಶ ವಲಯವನ್ನು ಮುಚ್ಚದಿರಲು ನಿರ್ಧರಿಸಿದೆ ಎಂದು ವೀಡಿಯೋ ಮೂಲಕ ನ್ಯಾಟೋ ವಿರುದ್ಧ ಹರಿಹಾಯ್ದಿದ್ದಾರೆ. ಮೈತ್ರಿಕೂಟದ ನಾಯಕತ್ವವು ಉಕ್ರೇನಿಯನ್‌ ನಗರಗಳು ಮತ್ತು ಹಳ್ಳಿಗಳ ಮೇಲೆ ಮತ್ತಷ್ಟು ಬಾಂಬ್‌ ದಾಳಿಗೆ ಹಸಿರು ನಿಶಾನೆ ತೋರಿಸಿದೆ. ಹಾರಾಟ ನಿಷೇಧ ವಲಯವನ್ನು ಮಾಡಲು ನಿರಾಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಬಾಂಬ್‌ ದಾಳಿ ತಡೆಗಟ್ಟುವ ನಿಟ್ಟಿನಲ್ಲಿ ಉಕ್ರೇನ್‌ನಲ್ಲಿ ಹಾರಾಟ ನಿಷೇಧ ವಲಯ ರೂಪಿಸುವಂತೆ ಉಕ್ರೇನ್‌ ಮನವಿ ಮಾಡಿತ್ತು. ಆದರೆ ನ್ಯಾಟೋ ಇದನ್ನು ತಿರಸ್ಕರಿಸಿತ್ತು. ಆದರೆ ಮತ್ತೊಂದೆಡೆ ರಷ್ಯಾ ತನ್ನ ಯುದ್ಧವನ್ನು ನಿಲ್ಲಿಸದಿದ್ದರೆ ಹೊಸ ನಿರ್ಬಂಧಗಳನ್ನು ವಿಧಿಸುವುದಾಗಿ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಎಚ್ಚರಿಕೆ ನೀಡಿವೆ.

kraine rejects appeal to stop Russia bombing