ರಷ್ಯಾ ದಾಳಿಗೆ ಪ್ರತೀಕಾರವಾಗಿ ಉಕ್ರೇನ್ ಸಹ ಪ್ರತಿದಾಳಿ ನಡೆಸಿದ್ದು, ಒಟ್ಟಾರೆ 3,500ಕ್ಕೂ ಹೆಚ್ಚು ರಷ್ಯನ್ ಸೈನಿಕರು ಹತರಾಗಿದ್ದಾರೆ ಎಂದು ಉಕ್ರೇನ್ ಹೇಳಿದೆ.

ರಷ್ಯಾ ಕೂಡ ದಾಳಿ ಆರಂಭವಾದ ನಂತರ ಇದೇ ಮೊದಲು ತಮ್ಮ ಸೈನಿಕರು ಸಾವು ನೋವು ಅನುಭವಿಸಿದ್ದಾರೆ ಎಂದು ಒಪ್ಪಿಕೊಂಡಿದೆ. ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೋರ್ ಕೊನಶೆನ್ಕೊವ್ ಅವರು ದಾಳಿಯಲ್ಲಿ ನಮ್ಮ ಸೈನಿಕರು ಸಹ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಿಖರ ಸಂಖ್ಯೆ ಎಷ್ಟು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಉಕ್ರೇನ್ ಪಡೆಗಳ ನಷ್ಟಕ್ಕೆ ಹೋಲಿಸಿದರೆ, ರಷ್ಯನ್ ಸೇನೆಗೆ ಆಗಿರುವ ಹಾನಿ ಹಲವು ಪಟ್ಟು ಕಡಿಮೆ ಎಂದು ಹೇಳಲಾಗಿದೆ.

Russian soldiers killed

ಇದನ್ನೂ ಓದಿ: e Paper – March 1, 2022

ಇದನ್ನೂ ಓದಿ: Tube Well: ಹೆಚ್ಚುವರಿಯಾಗಿ 9 ಸಾವಿರ ಕೊಳವೆ ಬಾವಿ ಕೊರೆಸಲು ನಿರ್ಧಾರ; ಕೋಟ ಶ್ರೀನಿವಾಸ ಪೂಜಾರಿ