ಚಾಂಗಿ ಜೈಲಿನಲ್ಲಿ ಮಾದಕವಸ್ತು ಕಳ್ಳಸಾಗಣೆಗಾಗಿ ಭಾರತೀಯ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಒಂದು ದಿನದ ನಂತರ ಗುರುವಾರ ನ್ಯಾಯಾಲಯದ ತೀರ್ಪು ಬಂದಿದೆ. ದಚ್ಚಿನಮೂರ್ತಿ ಕಾಟಯ್ಯ (36 ವರ್ಷ ) ಅವರನ್ನು ಶುಕ್ರವಾರ ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು ಎಂದು ಸ್ಟೈಟ್ಸ್ ಟೈಮ್ಸ್ ವರದಿ ಮಾಡಿದೆ.

ಸಿಂಗಾಪುರ: ಭಾರತ ಮೂಲದ ವ್ಯಕ್ತಿ ಹಾಗೂ ಇತರ ಮರಣದಂಡನೆ ಕೈದಿಗಳು ಅಟಾರ್ನಿ ಜನರಲ್ ಚೇಂಬರ್ಸ್ ವಿರುದ್ಧ ಸಲ್ಲಿಸಿದ ಸಿವಿಲ್ ಅರ್ಜಿಗಳ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಕಾರಣ ಮಾದಕವಸ್ತು ಕಳ್ಳಸಾಗಣೆಗಾಗಿ ಶಿಕ್ಷೆಗೊಳಗಾದ ಭಾರತೀಯ ಮೂಲದ ವ್ಯಕ್ತಿಯ ಮರಣದಂಡನೆಗೆ ಸಿಂಗಾಪುರ ನ್ಯಾಯಾಲಯವು ತಡೆ ನೀಡಿದೆ.

ಚಾಂಗಿ ಜೈಲಿನಲ್ಲಿ ಮಾದಕವಸ್ತು ಕಳ್ಳಸಾಗಣೆಗಾಗಿ ಭಾರತೀಯ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಒಂದು ದಿನದ ನಂತರ ಗುರುವಾರ ನ್ಯಾಯಾಲಯದ ತೀರ್ಪು ಬಂದಿದೆ. ದಚ್ಚಿನಮೂರ್ತಿ ಕಾಟಯ್ಯ (36 ವರ್ಷ ) ಅವರನ್ನು ಶುಕ್ರವಾರ ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು ಎಂದು ಸ್ಟೈಟ್ಸ್ ಟೈಮ್ಸ್ ವರದಿ ಮಾಡಿದೆ.

ಕಾಟಯ್ಯ ಹಾಗೂ ಇತರ 12 ಮರಣದಂಡನೆ ಅಪರಾಧಿಗಳು ಅಟಾರ್ನಿ ಜನರಲ್ ಚೇಂಬರ್ಸ್ ವಿರುದ್ಧ ಸಿವಿಲ್ ಅರ್ಜಿಯನ್ನು ಸಲ್ಲಿಸಿದ್ದಾರೆ.

ದಿನಪತ್ರಿಕೆಯ ವರದಿಯ ಪ್ರಕಾರ ಪ್ರಕರಣದ ವಿಚಾರಣೆಯನ್ನು ಮೇ 20 ಕ್ಕೆ ನಿಗದಿಪಡಿಸಲಾಗಿದೆ. ದಚ್ಚಿನಮೂರ್ತಿ ಅವರು ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸಿದ್ದರು. ನ್ಯಾಯಮೂರ್ತಿಗಳಾದ ಆಂದ್ರೂ ಫಾಂಗ್, ಜುಡಿತ್ ಪ್ರಕಾಶ್ ಮತ್ತು ಬೆಲಿಂಡಾ ಆಂಗ್ ತೀರ್ಪಿನ ವಿವರಗಳನ್ನು ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.

ಎಪ್ರಿಲ್ 2015 ರಲ್ಲಿ ದಚ್ಚಿನಮೂರ್ತಿಗೆ ಮರಣದಂಡನೆ ವಿಧಿಸಲಾಯಿತು. ತೀರ್ಪಿನ ವಿರುದ್ಧ ಅವರ ಮನವಿಯನ್ನು ಫೆಬ್ರವರಿ 2016 ರಲ್ಲಿ ವಜಾಗೊಳಿಸಲಾಯಿತು. ಜನವರಿ 2020 ರಲ್ಲಿ ದಚ್ಚಿನಮೂರ್ತಿ ಹಾಗೂ ಸಹ ಕೈದಿ ಗೋಬಿ ಅವೇಡಿಯನ್ ತಮ್ಮ ಮರಣದಂಡನೆಯನ್ನು ತಡೆಹಿಡಿಯಲು ಪ್ರಯತ್ನಿಸಿದರು. ನ್ಯಾಯಾಂಗ ಮರಣದಂಡನೆಯಲ್ಲಿ “ಕಾನೂನುಬಾಹಿರ” ವಿಧಾನಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳ ತನಿಖೆಗಳು ಬಾಕಿ ಉಳಿದಿವೆ.

singapore court awarded death sentence to an indian origin person