ನವದೆಹಲಿ: ಭಾರತದಲ್ಲಿ ಹಬ್ಬದ ಅವಧಿಯ ವಿಶೇಷ ಆನ್‌ಲೈನ್ ಮಾರಾಟ ಮೇಳದಲ್ಲಿ ಕೇವಲ ಮೂರು ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಟಿವಿಗಳು ಮಾರಾಟವಾಗಿವೆ ಎಂದು ಶಿಯೋಮಿ ಕಂಪನಿ ತಿಳಿಸಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಸೇರಿದಂತೆ ವಿವಿಧ ಇ–ಕಾಮರ್ಸ್ ತಾಣಗಳ ಮೂಲಕ ಕಂಪನಿಯು ರಿಯಾಯಿತಿ ದರದಲ್ಲಿ ಮಾರಾಟ ನಡೆಸುತ್ತಿದೆ. ಅಮೆಜಾನ್‌ನಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ 10 ಸ್ಮಾರ್ಟ್ ಟಿವಿ ಬ್ರ್ಯಾಂಡ್‌ಗಳ ಪೈಕಿ 8 ಶಿಯೋಮಿಗೆ ಸೇರಿದವು ಎಂದು ಕಂಪನಿ ಹೇಳಿಕೊಂಡಿದೆ.

‘ಸ್ಮಾರ್ಟ್ ಟಿವಿ ಮಾರುಕಟ್ಟೆ ವಿಭಾಗಕ್ಕೆ ಪ್ರವೇಶಿಸಿದಾಗ ಅದರಲ್ಲಿರುವ ದೊಡ್ಡ ಸಾಧ್ಯತೆಯ ಬಗ್ಗೆ ನಮಗೆ ಅರಿವಾಯಿತು. ಭಾರತದ ಪ್ರತಿಯೊಂದು ಮನೆಯಲ್ಲಿಯೂ ಸ್ಮಾರ್ಟ್ ಟಿವಿ ಇರುವಂತೆ ಮಾಡಬೇಕು ಎಂಬುದು ಮುಖ್ಯ ಗುರಿಯಾಗಿದೆ. ಈಗಾಗಲೇ ನಮ್ಮ ಬ್ರ್ಯಾಂಡ್‌ಗಳಾದ ಎಂಐ ಮತ್ತು ರೆಡ್ಮಿಗಳು ದೇಶದಲ್ಲಿ ಮನೆಮಾತಾಗಿವೆ ಎಂದು ಶಿಯೋಮಿ ಸ್ಮಾರ್ಟ್ ಟಿವಿ ವಿಭಾಗದ ಮುಖ್ಯಸ್ಥ ಈಶ್ವರ್ ನೀಲಕಂಠನ್ ಹೇಳಿದ್ದಾರೆ.

ಹಬ್ಬದ ಅವಧಿಯ ಮಾರಾಟದಲ್ಲಿ ಶಿಯೋಮಿ ಹಲವು ರಿಯಾಯಿತಿಗಳನ್ನು ಘೋಷಿಸಿದೆ. ‘ರೆಡ್ಮಿ ಸ್ಮಾರ್ಟ್ ಟಿವಿ ಎಕ್ಸ್’ ಸರಣಿಯಲ್ಲಿ 7,000 ರೂಪಾಯಿ ವರೆಗೆ ರಿಯಾಯಿತಿ ಲಭ್ಯವಿದೆ. 13,249 ರೂಪಾಯಿ ಬೆಲೆಯ 32 ಇಂಚಿನ ರೆಡ್ಮಿ ಸ್ಮಾರ್ಟ್ ಟಿವಿ ಮತ್ತು 43 ಇಂಚಿನ ಸ್ಮಾರ್ಟ್ ಟಿವಿಯನ್ನು ಒಟ್ಟಾಗಿ 22,749 ರೂಪಾಯಿಗೆ ಖರೀದಿಸಬಹುದಾಗಿದೆ. ಎಂಐ ಟಿವಿ 5X ಸರಣಿಯ ಟಿವಿಗಳ ಮೇಲೆ 3,000 ರೂಪಾಯಿ ವರೆಗೆ ರಿಯಾಯಿತಿ ನೀಡಲಾಗುತ್ತಿದೆ.

Mi Tv Sales quantity increased in Amazon

ಇದನ್ನೂ ಓದಿ: ಅ.1ರಿಂದ ಥಿಯೇಟರ್‌ಗಳಲ್ಲಿ ಹೌಸ್‌ಫುಲ್‌
ಇದನ್ನೂ ಓದಿ: ಬಾಹುಬಲಿ ಪ್ರಭಾಸ್‌ರ 25ನೇ ಚಿತ್ರಕ್ಕೆ ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಾರಥ್ಯ