ಚಿಕ್ಕಮಗಳೂರು: ಪೊಲೀಸರಿಂದ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿಯೊಬ್ಬ ಪೊಲೀಸರ ಕಣ್ಣುತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಒಂದು ತಿಂಗಳಿಂದ ನಗರದ ಮಲ್ಲೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೂರ್ಣೇಶ್ ಶನಿವಾರ ಬೆಳಗಿನ ಜಾವ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಪೋಲಿಸರ ಪಹರೆಯಲಿದ್ದರೂ ಕಣ್ತಪ್ಪಿಸಿ ಪರಾರಿಯಾಗಿರುವ ಪೂರ್ಣೇಶ್ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದವನು. ಈತನ ಮೇಲೆ ೪ ಹಾಫ್ ಮರ್ಡರ್, ೩ ಹಲ್ಲೆ, ಪೊಲೀಸ್ ಮೇಲೆ ಅಟ್ಯಾಕ್ ಸೇರಿದಂತೆ ೯ ಕೇಸ್‌ಗಳಿವೆ.

೩೦೭ ಕೇಸಲ್ಲಿ ವಾರಂಟ್ ಕೂಡ ಜಾರಿ ಆಗಿತ್ತು. ಆದ್ರೆ, ೨೦೧೨ರಿಂದ ಕಾಡಲ್ಲಿ, ಕಾಡಿನ ಮರಗಳ ಮೇಲೆ ಮಲಗಿ ಪೊಲೀಸರ ಕೈಗೆ ಸಿಗದೆ ಆಟ ಆಡಿಸ್ತಿದ್ದ. ಕಳೆದ ನವೆಂಬರ್‌ನಲ್ಲಿ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ ಅಂತ ಕಾಲಿಗೆ ಮಂಡಿಗೆ ಫೈರಿಂಗ್ ಮಾಡಿದ್ದರು.

ಫೈರಿಂಗ್ ವೇಳೆ ಪೂರ್ಣೇಶ್ ಬಲಗಾಲಿಗೆ ಗುಂಡು ತಗಲಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವನು ಆಸ್ಪತ್ರೆಯಿಂದ ಮುಂಜಾನೆ ಎಸ್ಕೇಪ್ ಆಗಿದ್ದಾನೆ. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈತನ ಸುಳಿವು ಸಿಕ್ಕಲ್ಲಿ ೯೪೮೦೮೦೫೧೦೦, ೮೨೭೭೯೯೧೦೦೦, ೦೮೨೬೨-೨೩೦೫೪೦, ೦೮೬೨-೨೩೫೬೦೮ ಪಿಎಸ್ ಐ ಬಾಳೆಹೊನ್ನೂರು ೯೪೮೦೮೦೫೧೫೮, ೦೮೨೬೬-೨೫೦೬೬೬ ಈ ಸಂಖ್ಯೆಯನ್ನು ಸಂಪರ್ಕಿಸು ವಂತೆ ಪೊಲೀಸ್ ಇಲಾಖೆ ಕೋರಿದೆ.

ಇನ್ನೇನು ಎರಡೇ ದಿನ ಸಂಕ್ರಾಂತಿ ಕಳೆಯುತ್ತಿದ್ದಂತೆ ಮತ್ತೆ ಆತ ಹೋಗಬೇಕಿತ್ತು ಸೆರೆಮನೆಗೆ. ಕಳೆದ ರಾತ್ರಿ ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಪ್ರಿಝನ್ ಸೆಲ್ ನಿಂದ ಪರಾರಿ ಆಗಿರುವ ಪೂರ್ಣೇಶ ನನಗೆ ತುಂಬಾ ಬಯಕೆಯಾಗಿದೆ ಎಂದು ಚಿಕನ್ ತರಿಸಿಕೊಂಡು

ಪೊಲೀಸರಿಗೂ ಕೊಟ್ಟು ಗೊರಕೆ ಹೊಡೆಯೋತರ ನಾಟಕ ಮಾಡಿದ್ದಾನೆ.

ಸ್ವಲ್ಪ ಎಣ್ಣೆ ಬೇರೆ ಹಾಕಿದ್ನಂತೆ, ಮಧ್ಯ ರಾತ್ರಿ ಆಗುತ್ತಿದ್ದಂತೆ ಈತನನ್ನು ಕಾಯುತ್ತಿದ್ದ ಪೊಲೀಸಪ್ಪ ಗಾಢ ನಿದ್ರೆಗೆ ಹೋಗುತ್ತಿದ್ದಂತೆ ತನ್ನ ವರಸೆ ತೋರಿಸಿದ್ದಾನೆ. ಪೇದೆಯ ಕಿಸೆಯೊಳಗಿದ್ದ ಕೀಲಿ ಹಾರಿಸಿ ಕಬ್ಬಿಣದ ಬಾಗಿಲ ತೆಗೆದು ಎಸ್ಕೇಪ್ ಆಗಿದ್ದಾನೆ.

ಕುಂಟನಂತೆ ನಟಿಸಿದ್ದು ಯಾರಿಗೂ ಗೊತ್ತೇ ಆಗಲಿಲ್ಲ..ಮೊದಲೇ ಇದಕ್ಕೆಲ್ಲ ಪ್ಲಾನ್ ಮಾಡಿಕೊಂಡಿದ್ದ ರೌಡಿ ಶೀಟರ್ ನಡೆಯಲು ಸಾಧ್ಯವೇ ಇಲ್ಲ ಎಂಬಂತೆ ನಟಿಸಿ ಬರೀ ವೀಲ್‌ಚೇರ್ ನಲ್ಲೇ ಓಡಾಡುತ್ತಿದ್ದ, ಗುಮಾನಿ ಬಾರದ ಪೊಲೀಸರು ಬೇಡಿಯೂ ಕೂಡಾ ಹಾಕಿರಲಿಲ್ಲ,

ಸದ್ಯ ಕೈ ಕೈ ಹಿಸುಕಿಕೊಳ್ಳುತ್ತಿರುವ ಬಾಳೇಹೊನ್ನೂರು ಹಾಗೂ ಡಿ.ಎ.ಆರ್. ಪೊಲೀಸರು ಎಸ್ಕೇಪ್ ಗಿರಾಕಿ ಪೂರ್ಣೇಶನ ಖತರ್ನಾಕ್ ಐಡಿಯಾ ಮುಂದೆ ಸೋತು ಸುಣ್ಣವಾಗಿದ್ದಾರೆ. ಬೆಂಗಳೂರು ಶಿವಮೊಗ್ಗ ಎಲ್ಲಾ ಕಡೆ ಚಿಕಿತ್ಸೆ ಕೊಡಿಸಿ ಗುಂಡೇಟಿನ ಗಾಯ ವಾಸಿ ಮಾಡಿ ಜೈಲಿಗೆ ಕಳುಹಿಸುವ ಸನ್ನಿಹದಲ್ಲಿ ಎಡವಟ್ಟು ಮಾಡಿಬಿಟ್ಟಿದ್ದಾರೆ.

The accused who was being treated at the hospital escaped after being shot by the police