ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಭದ್ರ ಹುಲಿ ಸಂರಕ್ಷಿತಾರಣ್ಯದ ಸಫಾರಿಯಲ್ಲಿದ್ದ ಪ್ರವಾಸಿಗರ ಕಣ್ಣಿಗೆ ಹುಲಿ ( the tigers vision for tourists) ಕಾಣಿಸಿಕೊಂಡಿದೆ. ಹುಲಿ ಹಾಗೂ ಹುಲಿಯ ಎರಡು ಮರಿಗಳ ದರ್ಶನ ಪ್ರವಾಸಿಗರಿಗೆ ಆಗಿದ್ದು, ಈ ದೃಶ್ಯವನ್ನು ಕಂಡು ಪ್ರವಾಸಿಗರು ಸಂತೋಷ ವ್ಯಕ್ತಪಡಿಸಿದ್ದಾರೆ.

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಹಾಗೂ ಹುಲಿ ಮರಿಗಳ ದರ್ಶನ ಜಿಲ್ಲೆಯ ಭದ್ರ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಹುಲಿ ಹಾಗೂ ಎರಡು ಮರಿ ಹುಲಿಗಳ ದೃಶ್ಯವನ್ನು ಸಫಾರಿಗೆ ಹೋದ ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಭದ್ರಹುಲಿ ಸಂರಕ್ಷಿತಾರಣ್ಯದಲ್ಲಿ ಈ ದೃಶ್ಯ ಕಂಡು ಬಂದಿದೆ. ಸಫಾರಿ ವೇಳೆ ಅಪರೂಪಕ್ಕೆ ಹುಲಿಗಳು ಕಾಣ ಸಿಗುತ್ತವೆ ಎಂದು ಹೇಳಲಾಗಿದೆ.

the tigers vision for tourists

ಇದನ್ನೂ ಓದಿ: Rain in different district: ಏಪ್ರಿಲ್ 6 ರವರೆಗೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಮಳೆ

ಇದನ್ನೂ ಓದಿ: 7-deaths: ವಿದ್ಯುತ್ ಕಂಬಕ್ಕೆ ವ್ಯಾನ್ ಡಿಕ್ಕಿ – 7 ಮಂದಿ ಸಾವು