ಕಾಲಿವುಡ್‌ನ (Kollywood) ಬೆಸ್ಟ್ ಜೋಡಿ (Pair) ಎನಿಸಿಕೊಂಡಿರುವ ವಿಜಯ್ ಮತ್ತು ತ್ರಿಷಾ ಈ ಹಿಂದೆ ಗಿಲ್ಲಿ, ಕುರುವಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಇತ್ತೀಚಿಗೆ ವಿಜಯ್‌ ನಟನೆಯ `ದಳಪತಿ 67′ ಚಿತ್ರಕ್ಕೆ ತ್ರಿಷಾ ಓಕೆ ಎಂದಿದ್ದರು. ಹೀಗಿರುವಾಗ ಸದ್ಯ ಈ ಚಿತ್ರದಿಂದ ಬಹುಭಾಷಾ ನಟಿ ತ್ರಿಷಾ (Actress Thrisha) ಗುಡ್ ಬೈ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕ್ರಶ್ ಮದುವೆ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ ಸುದೀಪ್ ಪುತ್ರಿ

ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kangaraj) ಅವರು ಈ ಸಿನಿಮಾಗೆ ನಿರ್ದೇಶನ ಮಾಡ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಮುಹೂರ್ತ ಕೂಡನೆರವೇರಿದೆ. ಈ ಚಿತ್ರದ ಶೂಟಿಂಗ್ ಸಲುವಾಗಿ ಕಾಶ್ಮೀರಕ್ಕೆ ತೆರಳಿದಾಗಲೂ ವಿಜಯ್- ತ್ರಿಷಾ ಜೊತೆಯಲ್ಲೇ ಇದ್ದರು. ಆದರೆ ಈಗ ತ್ರಿಷಾ ಅವರು ಏಕಾಏಕಿ ವಾಪಸ್ ಬಂದಿರುವುದೇಕೆ ಎಂದು ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ.

`ಲಿಯೋ’ ಸಿನಿಮಾ (Lio Film) ಟೀಮ್ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ತ್ರಿಷಾ ಅವರು ಕಾಶ್ಮೀರದಿಂದ ವಾಪಸ್ ಬಂದರು ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ ಅದರ ಅಸಲಿ ಕಾರಣ ಬೇರೆಯೇ ಇದೆ. ಕಾಶ್ಮೀರದಲ್ಲಿ ಈಗ ಸಿಕ್ಕಾಪಟ್ಟೆ ಚಳಿ ಇದೆ. ಅದು ತ್ರಿಷಾ ಅವರ ಆರೋಗ್ಯಕ್ಕೆ ಹೊಂದಿಕೆ ಆಗುತ್ತಿಲ್ಲ. ಅವರ ಪಾಲಿನ ದೃಶ್ಯಗಳ ಶೂಟಿಂಗ್‌ನಲ್ಲಿ ಭಾಗವಹಿಸಿದ ನಂತರ ಕಾಶ್ಮೀರದಲ್ಲಿಯೇ ಉಳಿದುಕೊಳ್ಳುವ ಬದಲು, ಅವರು ದೆಹಲಿಗೆ ಬಂದು ತಂಗಿದ್ದಾರೆ. ಮತ್ತೆ ಅಗತ್ಯವಿದ್ದಾಗ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

https://www.instagram.com/p/CoHzN3nvmHx/?utm_source=ig_embed&ig_rid=d6ab5bd4-6396-4270-8aa9-26470d694f85

ಅಷ್ಟಕ್ಕೂ ಈ ಸುದ್ದಿ ನಿಜಾನಾ ಅಥವಾ ವದಂತಿನಾ ಎಂಬುದನ್ನ ಚಿತ್ರತಂಡ ತಿಳಿಸುವವರೆಗೂ ಕಾದುನೋಡಬೇಕಿದೆ.

Trisha out of the movie ‘Leo’: