ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಏಪ್ರಿಲ್ 7ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಈ ಉದ್ಯೋಗ ಮೇಳದಲ್ಲಿ 80ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಳ್ಳುತ್ತಿದ್ದು, ತಾಂತ್ರಿಕ ಮತ್ತು ತಾಂತ್ರಿಕೇತರ ವಿದ್ಯಾರ್ಥಿಗಳು ನಿರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕಮುಕ್ತ ವಿವಿ ತುಮಕೂರು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಲೋಕೇಶ್ ತಿಳಿಸಿದ್ದಾರೆ.

ಉದ್ಯೋಗ ಮೇಳವು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಇದರಲ್ಲಿ ಆಯ್ಕೆಯಾಗದವರಿಗೆ ತಮ್ಮ ಇಚ್ಛೆಯ ಅನುಸಾರವಾಗಿ ತರಬೇತಿ ನೀಡಿ ಉದ್ಯೋಗವನ್ನು ದೊರಕಿಸಿಕೊಡಲಾಗುವುದು. ಹಾಗೆಯೇ ಸುತ್ತಮುತ್ತಲಿನ ಜಿಲ್ಲೆಗಳ ನಿರುದ್ಯೋಗಿಗಳಿಗೆ ಅವಕಾಶ ಮಾಡಿಕೊಡಲಾಗುವುದು. 6000 ಜನರಿಗೆ ಉದ್ಯೋಗ ನೀಡುವ ಭರವಸೆ ಇದೆ ಎಂದರು.
ಉದ್ಯೋಗ ಆಕಾಂಕ್ಷೆಗಳು ಈ ಕೆಳಕಂಡ ಲಿಂಕ್ ಮೂಲಕ ನೋಂದಣಿ ಮಾಡಿಸಬಹುದು.

http://skillconnect.kaushalkar.com/app/student-jobfair‌ ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8722399936 ಅನ್ನು ಸಂಪರ್ಕಿಸಬಹುದು ಎಂದುಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
ಡಾ. ಲೋಕೇಶ ಆರ್ ,
ಪ್ರಾದೇಶಿಕ ನಿರ್ದೇಶಕರು,
ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ,
ಸಿಎ-07, ಟೂಡಾ ಲೇಔಟ್, ರಾಜೀವ್ ಗಾಂಧಿ ನಗರ, ಮೇಳೆಕೋಟಿ-ವೀರಸಾಗರ, ತುಮಕೂರು-572 105.
☎0816-2955580. ಮೋ.ಸಂ. 9844506629. ಸಂಪರ್ಕಿಸಬಹುದು.

Udyog Mela to be held in Mysuru on Apr. 7

ಇದನ್ನೂ ಓದಿ: Muslim woman offers prayers: ಕೋಮು-ಸೌಹಾರ್ಧ ನೆಲೆಸುವಂತೆ ದೇಗುಲದಲ್ಲಿ ಮುಸ್ಲೀಂ ಮಹಿಳೆಯಿಂದ ಪ್ರಾರ್ಥನೆ

ಇದನ್ನೂ ಓದಿ: CM Bommai back to Delhi: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ: ಮತ್ತೆ ದೆಹಲಿಯತ್ತ ಸಿಎಂ ಬೊಮ್ಮಾಯಿ..?