ಚಿಕ್ಕಮಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸೀರೆಗಳು, ದೋತಿ ಕೊಪ್ಪದ ಗಡಿಕಲ್ ಹಾಗೂ ತರೀಕೆರೆ ಎಂ.ಎನ್ ಕ್ಯಾಂಪ್ ಚೆಕ್ ಪೋಸ್ಟ್ ೯೫ ಸಾವಿರ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಚುನಾವಣೆ ಘೋಷಣೆಯಾಗಿದ್ದು ಜಿಲ್ಲಾಡಳಿತ ಎಲ್ಲೆಡೆ ವ್ಯಾಪಕ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಈಗಾಗಲೇ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಿದೆ.

ಸೋಮವಾರ ಕೊಪ್ಪ ತಾಲೂಕಿನ ಗಡಿಕಲ್ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಂದು ಲಕ್ಷದ ಇಪ್ಪತೈದು ಸಾವಿರ ಬೆಲೆ ಬಾಳುವ ನೂರಾರು ಸೀರೆಗಳು ಹಾಗೂ ದೋತಿಗಳನ್ನು ಹಾಗೂ ಅದನ್ನು ತುಂಬಿದ್ದ ವಾಹನವನ್ನು ಎಸ್.ಎಸ್.ಟಿ ತಂಡ ವಶಕ್ಕೆ ಪಡೆದಿದೆ

ಇನ್ನೊಂದೆಡೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಎನ್ ಕ್ಯಾಂಪ್ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತವಾಗಿ ಸ್ಫೂಟಿಯೊಂದರಲ್ಲಿ ಕೊಂಡೊಯ್ಯುತ್ತಿದ್ದ ೯೫ ಸಾವಿರ ರೂ ಹಣವನ್ನು ಸೀಜ್ ಮಾಡಲಾಗಿದೆ.

ಈ ಹಣ ಹಾಗೂ ಸೀರೆಗಳು ಯಾವುದೇ ಚುನಾವಣೆ ಅಕ್ರಮಕ್ಕೆ ಸಂಬಂಧಿಸಿಲ್ಲ ಆದರೂ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ದಾಖಲೆ ಸರಿಯಾಗಿ ಇಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ.

Unrecorded sari-cash seizure in the district