ಚಿಕ್ಕಮಗಳೂರು:  ಪಂಚಾಯಿತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಓ ಮೇ ಲೆ ಏಕಾಏಕಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಪಿಡಿಓ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ನೊಂದ ಪಿಡಿಓ ಗ್ರಾಮಾಂತರ ಠಾಣೆಗೆ ಸೋಮವಾರ ದೂರು ದಾಖಲಿಸಿ ನ್ಯಾಯಕ್ಕೆ ಒತ್ತಾಯಿಸಿದರು.

ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಸಚಿನ್‌ಕುಮಾರ್ ಅವರಿಗೆ ಹಲ್ಲೆಗೊಳಗಾದ ಲಕ್ಯಾ ಗ್ರಾ.ಪಂ. ಪಿಡಿಓ ಎನ್.ಎ.ಶೇಖರೇಶ್ ಕುಟುಂಬ ಸಮೇತ ಸಂಘದ ನೇತೃತ್ವದಲ್ಲಿ ದೂರು ದಾಖಲಿಸಿ ಅವಾಚ್ಯ ಶಬ್ದ ಗಳಿಂದ ನಿಂಧಿಸಿರುವ ರಘು ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಎನ್.ಎ.ಶೇಖರೇಶ್ ಎಂದಿನಂತೆ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ವೇಳೆ ಯಲ್ಲಿ ಕಣಿವೆದಾಸರಹಳ್ಳಿ ಗ್ರಾಮದ ರಘು ಎಂಬಾತನಿಗೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಜಾಗಕ್ಕೆ ಖಾತೆ ಮಾಡುವುದಿಲ್ಲವೆಂದು ಮೌಖಿಕವಾಗಿ ತಿಳಿಸುತ್ತಿದ್ದರೂ ಕಚೇರಿ ನೌಕರರ ಸಮ್ಮುಖದಲ್ಲಿ ಏಕಾಏಕಿ ಹಲ್ಲೆಗ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದರು.

ತದನಂತರ ಕಚೇರಿಯ ನೌಕರರು ಆತನನ್ನು ಹೊರಡೆ ಕಳಿಸಿದ ಬಳಿಕವು ಅವಾಚ್ಯ ಶಬ್ದಗಳಿಂದ ನಿಂಧಿಸುತ್ತಿದ್ದು. ಸ್ವಲ್ಪಸಮಯದ ನಂತರ ಪುನಃ ಕಚೇರಿಗೆ ಆಗಮಿಸಿದ್ದು ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಪಿಡಿ ಓ ಹಲ್ಲೆಯನ್ನು ಖಂಡಿಸಿದ ಬಳಿಕ ಕಚೇರಿಯಿಂದ ಹೊರನಡೆದಿದ್ದಾನೆ ಎಂದು ತಿಳಿಸಿದರು.

ಗ್ರಾ.ಪಂ. ಕಚೇರಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೇ ತಮ್ಮ ಮೇಲೆ ಹಲ್ಲೆ ಮಾಡಿರುವ ಕಣಿವೆ ದಾಸರಹಳ್ಳಿ ಗ್ರಾಮದ ರಘು ಎಂಬಾತನ ವಿರುದ್ಧ ದೂರು ದಾಖಲಿಸಿ ಬಂಧಿಸಬೇಕು. ಅಲ್ಲದೇ ಘಟನೆಗೆ ಸಂಬಂಧಿಸಿದ ವೀಡಿಯೋ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ದಾಖಲೆ ಸಮೇತ ದೂರಿನಲ್ಲಿ ಒದಗಿಸಿಕೊ ಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಿಡಿಓ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಲಕ್ಷ್ಮಣ, ಖಜಾಂಚಿ ಸುಮ, ಕಾರ್ಯಕಾರಿ ಸಮಿತಿ ಸದಸ್ಯರು ಸುಶ್ಮಿತಾ, ವಿಜಯ, ಕುಲದೀಪ್, ವಿವಿಧ ಪಂಚಾಯಿತಿ ಪಿಡಿಓಗಳಾದ ವಿಶ್ವನಾಥ್, ಜಗದೀಶ್, ಮಧುಸೂದನ್, ಮಂಜೇಗೌಡ, ಲೀಲಾ, ಸ್ಮಿತಾ, ಸುರೈಬಾನು, ಸುಮ, ರಾಜಕುಮಾರ್, ಪ್ರದೀಪ್ ಮತ್ತಿತರರಿದ್ದರು.

Welfare association urges action against attack on PDO