ವಾಷಿಂಗ್ಟನ್: ಮೆಟಾ(Meta) ಮಾಲೀಕತ್ವದ ವಾಟ್ಸಪ್(WhatsApp) ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ತನ್ನ ಫೀಚರ್‌ಗಳನ್ನು(Feature) ಒಂದಾದಮೇಲೊಂದರಂತೆ ಅಭಿವೃದ್ಧಿಪಡಿಸುತ್ತಲೇ ಇದೆ. ಇದೀಗ ಅಪ್ಲಿಕೇಶನ್ ದಿನಾಂಕದ ಮೂಲಕ ಸಂದೇಶಗಳನ್ನು(Message) ಹುಡುಕುವ ಫೀಚರ್ ಅನ್ನು ತರುವಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ.

ವಾಟ್ಸಪ್ ಈಗಾಗಲೇ ತನ್ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಲು ಬಿಡುಗಡೆಗೊಳಿಸಿದೆ. ‘ಸರ್ಚ್ ಮೆಸೇಜ್ ಬೈ ಡೇಟ್”(search message by date) ಎಂದು ಬರೆಯಲಾದ ಇದರ ಸ್ಕ್ರೀನ್‌ಶಾಟ್ ಅನ್ನೂ ವೆಬ್‌ಸೈಟ್ ಹಂಚಿಕೊಂಡಿದೆ.

ವರದಿಗಳ ಪ್ರಕಾರ ವಾಟ್ಸಪ್ ಈ ಫೀಚರ್ ಅನ್ನು 2 ವರ್ಷಗಳ ಹಿಂದೆಯೇ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಆದರೆ ಬಳಿಕ ಕಾರಣಾಂತರಗಳಿಂದ ವಾಟ್ಸಪ್ ಈ ಫೀಚರ್‌ನ ಅಭಿವೃದ್ಧಿಯನ್ನು ಕೈಬಿಟ್ಟಿತು ಎನ್ನಲಾಗಿದೆ. ಈ ಫೀಚರ್ ಮುಂದೆ ಬಳಕೆದಾರರಿಗೆ ಅಗತ್ಯಕರವಾಗಲಿದ್ದು, ಮುಖ್ಯವಾಗಿ ನೀವು ನಿರ್ದಿಷ್ಟ ಸಂಪರ್ಕದೊಂದಿಗೆ ಹಂಚಿಕೊಂಡ ಮೊದಲ ಸಂದೇಶ ಏನು ಎಂಬುದನ್ನು ಹುಡುಕಲು ಸಾಧ್ಯವಾಗಲಿದೆ. ಈ ಫೀಚರ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಅಧಿಕೃತವಾಗಿ ಬಿಡುಗಡೆಯಾಗುವ ದಿನಾಂಕವನ್ನು ವಾಟ್ಸಪ್ ಇನ್ನೂ ಸ್ಪಷ್ಟಪಡಿಸಿಲ್ಲ.

WhatsApp to bring a feature to search for messages