ಉಡುಪಿ:  ಗುರುವಾರ ಸಂಜೆ ಜಿಲ್ಲೆಯ ಉಡುಪಿ, ಕಾಪು ಪರಿಸರದಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸುಮಾರು 2,10,000 ರೂ. ಯ ಹಾನಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಡುಪಿ ತಾಲೂಕಿನ ಪೆರ್ಡೂರಿನ ಶಾಲಿನಿ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ     30,000 ರೂ, ಕಾಪು ತಾಲೂಕಿನ ಕಾಪು ಪಡು ವಿಜಯ ಕೊಟ್ಯಾನ್ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 60,000 ರೂ, ಬ್ರಹ್ಮಾವರ ತಾಲೂಕಿನ ಆರೂರು ಕಾವೇರಿ ಇವರ ಮನೆಯ ಮೇಲೆ ಗಾಳಿ ಮಳೆಯಿಂದ ಮರಬಿದ್ದು ಭಾಗಶಃ ಹಾನಿ 80,000 ರೂ, ಕಾರ್ಕಳ ತಾಲೂಕಿನ ಕೌಡೂರು ಕೇಶವ ಶೆಟ್ಟಿ ಬಿನ್ ನಾರಾಯಣ ಶೆಟ್ಟಿ ಇವರ ವಾಸದ ಮನೆಗೆ ಸಿಡಿಲಿನಿಂದ ಭಾಗಶಃ ಹಾನಿ 25,000 ರೂ.

ಉಡುಪಿ ತಾಲೂಕಿನ ಪೆರ್ಡೂರು ಸುಗಂಧಿ ಪ್ರಭಾಕರ ಶೆಟ್ಟಿ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 25,000 ರೂ, ಪೆರ್ಡೂರು ಗುಲಾಬಿ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 5,000 ರೂ, ಉಡುಪಿ ಬೆಳ್ಳಂಪಳ್ಳಿ  ರಮಣಿ w/o ಮಂಜುನಾಥ್‌  ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ  50,000 ರೂ, ಉಡುಪಿಯ ಶಿರೂರು ಅಪ್ಪಿ ಶೇರಿಗಾರ್ತಿ ಇವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ  10,000 ರೂ. ನಷ್ಟ ಉಂಟಾಗಿದೆ.

ಉಳಿದಂತೆ ಉಡುಪಿ – 44.1, ಬ್ರಹ್ಮಾವರ  – 11.2, ಕಾಪು  – 44.6, ಕುಂದಾಪುರ  – 0.0, ಬೈಂದೂರು – 0.0,  ಕಾರ್ಕಳ – 12.7,  ಹೆಬ್ರಿ – 9.4 ಮಿ.ಮೀ  ಆಗಿರುತ್ತದೆ.     ಜಿಲ್ಲೆಯಲ್ಲಿ ಸರಾಸರಿ 17.4 ಮಿ.ಮೀ ಸುರಿದಿದೆ.

Widespread rain damage across Udupi district